ಬಳ್ಳಾರಿ: ಜಿಲ್ಲೆಯ ನಾರಾಯಣ ಇ-ಟೆಕ್ನೋ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಿ.ಎಸ್.ವಿಷ್ಣುಸಾಯಿ ಕೆ-ಸೆಟ್ ಪರೀಕ್ಷೆಯ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದಾರೆ. ಸಿ.ಎಸ್.ವಿಷ್ಣುಸಾಯಿ ಅವರಿಗೆ ಕಾಲೇಜಿನ ಪ್ರಾಚಾರ್ಯ ರಮೇಶ ರೆಡ್ಡಿ ಹಾಗೂ ಸಿಬ್ಬಂದಿ ಸಿಹಿ ತಿನ್ನಿಸುವ ಮೂಲಕ ವಿದ್ಯಾರ್ಥಿಯನ್ನು ಅಭಿನಂದಿಸಿದರು.
ಈ ಟಿವಿ ಭಾರತ್ ಜೊತೆ ತಮ್ಮ ಸಾಧನೆಯ ಕುರಿತು ಮಾತನಾಡಿದ ಸಿ.ಎಸ್.ವಿಷ್ಣುಸಾಯಿ, ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯವರೆಗೆ ನಾನು ಓದುತ್ತಲೇ ಇರುತ್ತಿದ್ದೆ. ಉಪನ್ಯಾಸಕರು ಹಾಗೂ ಪ್ರಾಚಾರ್ಯರು ಉತ್ತಮ ಸಹಕಾರ ನೀಡಿದ್ದರು. ಅವರೆಲ್ಲರ ಸಹಕಾರದೊಂದಿಗೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಎನ್ಐಟಿ ಮತ್ತು ಐಐಟಿಯಲ್ಲಿ ಟಾಪ್ 5 ಲ್ಲಿ ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಳ್ಳಬೇಕೆಂಬ ಗುರಿಯನ್ನು ಹೊಂದಿರುವೆ. ಹೀಗಾಗಿ, ಅದಕ್ಕೆ ಪೂರ್ವ ತಯಾರಿ ನಡೆಸಿಕೊಂಡಿರುವೆ. ಮೇ 27 ರಂದು ಬೆಂಗಳೂರಿನಲ್ಲಿ ಪರೀಕ್ಷೆ ಇದೆ. ಇಡೀ ದೇಶದಲ್ಲಿ ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಮಾತ್ರ ಎನ್ಐಟಿ ಮತ್ತು ಐಐಟಿಯ ಕುರಿತು ಕೋಚಿಂಗ್ ಸೆಂಟರ್ಗಳಿವೆ. ಹೇಗಾದರೂ ಮಾಡಿ ಆ ಕೋಚಿಂಗ್ ಸೆಂಟರ್ ನಲ್ಲಿ ಸೀಟ್ ಗಿಟ್ಟಿಸಿಕೊಳ್ಳಬೇಕೆಂಬ ಹಂಬಲ ನನಗಿದೆ ಎಂದು ತಿಳಿಸಿದರು.