ಹಾಸನ: ಖಾಲಿಯಾಗಿದ್ದ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಜ್ಯೋತಿ ಅಣ್ಣಪ್ಪನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕ್ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಿಂಗೇಗೌಡರು ರಾಜೀನಾಮೆ ನೀಡಿದ ಹಿನ್ನೆಲೆ, ಗಂಡಸಿ ಕ್ಷೇತ್ರದ ತಾಪಂ ಸದಸ್ಯೆಯಾಗಿದ್ದ ಜ್ಯೋತಿ ಅಣ್ಣಪ್ಪನವರ ಹೆಸರು ಪ್ರಸ್ತಾಪಗೊಂಡು ನಿರ್ಧರಿಸಲಾಯಿತು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಉಪವಿಭಾಗಧಿಕಾರಿ ನವೀನ್ ಭಟ್ ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದರು. ಅಧ್ಯಕ್ಷರ ಸ್ಥಾನಕ್ಕೆ ಜ್ಯೋತಿ ವಿರುದ್ಧವಾಗಿ ಯಾರು ಕೂಡ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಎಂದು ಘೋಷಣೆ ಮಾಡಲಾಯಿತು.
ನಂತರ ಮಾತನಾಡಿದ ನೂತನ ಅಧ್ಯಕ್ಷೆ ಜ್ಯೋತಿ ಅಣ್ಣಪ್ಪ ಮಾತನಾಡಿ, ತಾಲೂಕಿನಲ್ಲಿ ಬಹುಮುಖ್ಯ ಸಮಸ್ಯೆಯಾಗಿರುವ ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಚರಂಡಿ, ರಸ್ತೆ ಕಾಮಗಾರಿಗೆ ಹಾಗೂ ರೈತರ ಬಗ್ಗೆ ಹೆಚ್ಚಿನ ಗಮನ ಕೊಡಲಾಗುವುದು ಎಂದರು.
ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಮಾತನಾಡಿ, ಮಾಜಿ ಸಚಿವ ಹೆಚ್. ಡಿ. ರೇವಣ್ಣ ಮತ್ತು ಶಾಸಕ ಹೆಚ್. ಕೆ. ಕುಮಾರಸ್ವಾಮಿ ಸೇರಿ ಜ್ಯೋತಿ ಅವರಿಗೆ ಈ ಅವಕಾಶ ಮಾಡಿಕೊಟ್ಟಿದ್ದಾರೆ. ಇವರ ಆಯ್ಕೆಗೆ ತಾಲೂಕು ಪಂಚಾಯತ್‌ನ ಎಲ್ಲಾ ಸದಸ್ಯರು ಸಹಕರಿಸಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಶುಭ ಹಾರೈಸಿದರು.
ಹಾಸನ ತಾಲೂಕು ಪಂಚಾಯತಿಗೆ ಅಧ್ಯಕ್ಷೆಯಾಗಿ ಜೆಡಿಎಸ್ನ ಜ್ಯೋತಿ ಅಣ್ಣಪ್ಪನವರು ಅವಿರೋಧ ಆಯ್ಕೆ
ಜೆಡಿಎಸ್ ಬೆಂಬಲಿತ ಜ್ಯೋತಿ ಅಣ್ಣಪ್ಪನವರು ಹಾಸನ ತಾಲೂಕು ಪಂಚಾಯತ್ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.