ETV Bharat / briefs

ಇಂಗ್ಲೆಂಡ್​ಗೆ ಪ್ಲಸ್​ ಪಾಯಿಂಟ್​ ಆದ ಕೊನೆಗಳಿಗೆಯಲ್ಲಿ ಆಯ್ಕೆಯಾದ ಐಪಿಎಲ್ ಸ್ಟಾರ್​ - ಐಪಿಎಲ್​

ಜೋಫ್ರಾ ಆರ್ಚರ್​ ದ.ಆಫ್ರಿಕಾ ವಿರುದ್ಧದ ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್​​ಗೆ ಭರ್ಜರಿ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಅಚ್ಚರಿಯ ಸಂಗತಿಯೆಂದರೆ ಅವರನ್ನು ವಿಶ್ವಕಪ್​ಗೆ ಆಯ್ಕೆ ಮಾಡಿದ 15 ಸದಸ್ಯರ ತಂಡದಲ್ಲಿ ಕೈಬಿಡಲಾಗಿತ್ತು. ಕೊನೆಯ ಹಂತದಲ್ಲಿ ಅನುಭವಿ ಡೇವಿಡ್​ ವಿಲ್ಲೆಯನ್ನು ಕೈಬಿಟ್ಟು ಆರ್ಚರ್​ಗೆ ಅವಕಾಶ ಕಲ್ಪಿಸಲಾಗಿತ್ತು.

ಆರ್ಚರ್​
author img

By

Published : Jun 1, 2019, 10:54 AM IST

ಲಂಡನ್​: ಸತತ ಎರಡು ವರ್ಷ ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾದಿದ್ದ ಪ್ರತಿಭಾನ್ವಿತ ಯುವ ಬೌಲರ್​ ಜೋಫ್ರಾ ಆರ್ಚರ್​ರ​ನ್ನು ವಿಶ್ವಕಪ್​ಗೆ ಒಂದು ವಾರ ಎನ್ನವಾಗ ಆಯ್ಕೆ ಮಾಡಿದ್ದು, ಇದೀಗ ಅವರೇ ಇಂಗ್ಲೆಂಡ್​ ತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಿದ್ದಾರೆ.

ಜೋಫ್ರಾ ಆರ್ಚರ್​ ದ.ಆಫ್ರಿಕಾ ವಿರುದ್ಧದ ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್​​ಗೆ ಭರ್ಜರಿ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು, ಆದರೆ, ಅಚ್ಚರಿಯ ಸಂಗತಿಯೆಂದರೆ ಅವರನ್ನು ವಿಶ್ವಕಪ್​ಗೆ ಆಯ್ಕೆ ಮಾಡಿದ 15 ಸದಸ್ಯರ ತಂಡದಲ್ಲಿ ಕೈಬಿಡಲಾಗಿತ್ತು. ಕೊನೆಯ ಹಂತದಲ್ಲಿ ಅನುಭವಿ ಡೇವಿಡ್​ ವಿಲ್ಲೆಯನ್ನು ಕೈಬಿಟ್ಟು ಆರ್ಚರ್​ಗೆ ಅವಕಾಶ ಕಲ್ಪಿಸಲಾಗಿತ್ತು.

ಇದೀಗ ಆರ್ಚರ್​ ಇಂಗ್ಲೆಂಡ್​ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದ್ದಾರೆ. ಆಫ್ರಿಕಾ ತಂಡದ ಆಟಗಾರರೇ ಇವರ ಬೌಲಿಂಗ್​ನಲ್ಲಿ ವಿಕೆಟ್​ ಕಳೆದುಕೊಂಡರು, ಅನುಭವಿ ಹಾಶಿಮ್​ ಆಮ್ಲ ಆರ್ಚರ್​ ಎಸೆತವನ್ನು ಗಮನಿಸಲಾರದೇ ಹೆಲ್ಮೆಟ್​​​ಗೆ ಬಡಿಸಿಕೊಂಡು ಮೈದಾನದಿಂದ ಹೊರ ನಡೆದರು. ಅನುಭವಿ ಪ್ಲೆಸಿಸ್​ ಸಹಿತ ಉತ್ತಮವಾಗಿ ಆಡುತ್ತಿದ್ದ ಡಾಸ್ಸೆನ್​ ಹಾಗೂ ಮ್ಯಾರ್ಕ್ರಮ್​ ಕೂಡ ಆರ್ಚರ್​ ಬೌಲಿಂಗ್​ ನಲ್ಲಿ ವಿಕೆಟ್​ ಒಪ್ಪಿಸಿದರು. 7 ಓವರ್​ನಲ್ಲಿ ಒಂದು ಮೇಡನ್​ ಸಹಿತ 3.86 ಎಕಾನಮಿಯಲ್ಲಿ ಬೌಲಿಂಗ್​ ಮಾಡಿದ ಆರ್ಚರ್​ 3 ವಿಕೆಟ್​ ಪಡೆದು ಇಂಗ್ಲೆಂಡ್​ ತಂಡಕ್ಕೆ ಗೆಲುವು ತಂದುಕೊಟ್ಟರು.

ಸ್ವಿಂಗ್​,ಬೌನ್ಸ್​ ಹಾಗೂ ಸ್ಲೋಬಾಲ್​ ಎಸೆಯುವುದರಲ್ಲಿ ಪ್ರಾವಿಣ್ಯತೆ ಪಡೆದುಕೊಂಡಿರುವ ಆರ್ಚರ್​ ಈ ಬಾರಿ ಇಂಗ್ಲೆಂಡ್​ ತಂಡಕ್ಕೆ ಎಕ್ಸ್​-ಫ್ಯಾಕ್ಟರ್​ ಎಂದು ಕ್ರಿಕೆಟ್​ ಪಂಡಿತರು ಲೆಕ್ಕಚಾರ ಹಾಕುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.