ಕಾರ್ಡಿಫ್(ಇಂಗ್ಲೆಂಡ್): ಚುಟುಕು ಕ್ರಿಕೆಟ್ನಲ್ಲಿ ನಂಬರ್ 1 ತಂಡವಾದ ಪಾಕಿಸ್ತಾನವನ್ನು 7 ವಿಕೆಟ್ಗಳಿಂದ ಬಗ್ಗು ಬಡಿಯುವ ಮೂಲಕ ಇಂಗ್ಲೆಂಡ್ ಏಕೈಕ ಪಂದ್ಯದ ಟಿ-20 ಸರಣಿಯನ್ನು ವಶಪಡಿಸಿಕೊಂಡಿದೆ.
ವಿಶ್ವಕಪ್ಗೂ ಮುನ್ನ ಪೂರ್ವಭಾವಿಯಾಗಿ ಪಾಕಿಸ್ತಾನ - ಇಂಗ್ಲೆಂಡ್ ನಡುವೆ ಟಿ -20 ಹಾಗೂ ಏಕದಿನ ಸರಣಿ ಆಯೋಜನೆಗೊಂಡಿದ್ದು, ನಿನ್ನೆ ನಡೆದ ಏಕೈಕ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 173ರನ್ಗಳ ಗುರಿಯನ್ನು 19.2 ಓವರ್ಗಳಲ್ಲಿ ತಲುಪುವ ಮೂಲಕ ಪಾಕಿಸ್ತಾನಕ್ಕೆ ಶಾಕ್ ನೀಡಿದೆ.
-
What a way to finish things off by Eoin Morgan!
— ICC (@ICC) May 5, 2019 " class="align-text-top noRightClick twitterSection" data="
A ball after going to fifty, England's captain lofts Faheem Ashraf over long-off for six to seal a seven-wicket win.#ENGvPAK SCORE ➡ https://t.co/GlBo1xbqHK pic.twitter.com/j6CdUD98sh
">What a way to finish things off by Eoin Morgan!
— ICC (@ICC) May 5, 2019
A ball after going to fifty, England's captain lofts Faheem Ashraf over long-off for six to seal a seven-wicket win.#ENGvPAK SCORE ➡ https://t.co/GlBo1xbqHK pic.twitter.com/j6CdUD98shWhat a way to finish things off by Eoin Morgan!
— ICC (@ICC) May 5, 2019
A ball after going to fifty, England's captain lofts Faheem Ashraf over long-off for six to seal a seven-wicket win.#ENGvPAK SCORE ➡ https://t.co/GlBo1xbqHK pic.twitter.com/j6CdUD98sh
174 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜೇಮ್ಸ್ ವಿನ್ಸ್ 36, ಜೋ ರೂಟ್ 47, ನಾಯಕ ಮಾರ್ಗನ್ ಔಟಾಗದೇ 57 ಹಾಗೂ ಜೊ ಡೆನ್ಲಿ ಔಟಾಗದೆ 20 ರನ್ಗಳಿಸಿ ತಂಡದ ಗೆಲುವಿಗೆ ನೆರವಾದರು. ಪಾಕಿಸ್ತಾನ ಪರ ಶಾಹಿನ್ ಅಫ್ರಿದಿ, ಇಮಾದ್ ವಾಸಿಂ ಹಾಗೂ ಹಸನ್ ಅಲಿ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡ ಬಾಬರ್ ಅಜಂ(65) ಹಾಗೂ ಹ್ಯಾರೀಸ್(50)ರ ಅರ್ಧಶತಕದ ನೆರವಿನಿಂದ 173 ರನ್ಗಳ ಸ್ಪರ್ಧಾತ್ಮ ಮೊತ್ತ ಪೇರಿಸಿತ್ತು.
ಇಂಗ್ಲೆಂಡ್ ಪರ ಪದಾರ್ಪಣೆ ಮಾಡಿದ ಜೋಫ್ರಾ ಆರ್ಚರ್ 2 ವಿಕೆಟ್ ಹಾಗೂ ಒಂದು ರನ್ಔಟ್ ಮಾಡಿ ಮಿಂಚಿದರು. ಟಾಮ್ ಕರ್ರನ್ ಹಾಗೂ ಜೋರ್ಡಾನ್ ತಲಾ ಒಂದು ವಿಕೆಟ್ ಪಡೆದು ಪಾಕ್ ಅಬ್ಬರಕ್ಕೆ ಕಡಿವಾಣ ಹಾಕಿದರು.
ಈ ಸೋಲಿನೊಂದಿಗೆ ಸತತ 11 ಸರಣಿ ಗೆದ್ದು ಬೀಗಿದ್ದ ಪಾಕ್ ಇದೀಗ ಸತತ 2ನೇ ಸರಣಿ ಸೋಲಿಗೆ ತುತ್ತಾಗಿದೆ.