ಲಂಡನ್: ವಿಶ್ವಕಪ್ ಆರಂಭಕ್ಕೂ ಮುನ್ನ ಬಾಂಗ್ಲಾ ವಿರುದ್ಧ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಮಹಾಯುದ್ಧಕ್ಕೆ ಮೈಕೊಡವಿಕೊಂಡು ಸನ್ನದ್ಧಗೊಂಡಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಹಾಗೂ ಧೋನಿ ಶತಕದ ಜೊತೆಯಾಟದಿಂದ ತಂಡ 360 ರನ್‌ಗಳ ಬೃಹತ್ ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ್ದ ಬಾಂಗ್ಲಾ ತಂಡ 95 ರನ್‌ಗಳ ಸೋಲು ಕಂಡಿದೆ.
ಪಂದ್ಯದಲ್ಲಿ ಟೀಂ ಇಂಡಿಯಾ ಪರ ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಮಿಂಚಿದ್ರೂ ಕೂಡ ಯಾರ್ಕರ್ ಸ್ಪೆಷಲಿಸ್ಟ್ ಬೂಮ್ರಾ ತಮ್ಮ ಕೈಚಳಕ ತೋರಿದ್ದಾರೆ.
ಬಾಂಗ್ಲಾ ತಂಡದ ಹಿರಿಯ ಆಟಗಾರ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದು ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಶಕೀಬ್ ಬೋಲ್ಡ್ ಆಗುವ ವೇಳೆ, ಬೌಲಿಂಗ್ ಮಾಡಿದ ಬೂಮ್ರಾ ಬರೋಬ್ಬರಿ 141 ಕಿ.ಮೀ ವೇಗದಲ್ಲಿ ಯಾರ್ಕರ್ ರೂಪದಲ್ಲಿ ಬಾಲ್ ಎಸೆದಿದ್ದರು. ಈ ಎಸೆತ ಅರ್ಥ ಮಾಡಿಕೊಳ್ಳಲು ವಿಫಲರಾದ ಶಕೀಬ್ ವಿಕೆಟ್ ಒಪ್ಪಿಸಲೇಬೇಕಾಯಿತು.