ಬೆಂಗಳೂರು : ಬಿಜೆಪಿ ಪರಿಷತ್ ಸದಸ್ಯನಿಗೆ ಐಟಿ ಶಾಕ್ ನೀಡಿದೆ. ಕಳೆದ ವರ್ಷ ಐಟಿ ಅಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಯು. ಡಿ ಮಲ್ಲಿಕಾರ್ಜುನ ಅವರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪತ್ತೆಯಾಗಿದ್ದ ಅಕ್ರಮ ಆಸ್ತಿ 10 ಕೋಟಿ ರೂ. ಗೆ ಫೈನ್ ಕಟ್ಟುವಂತೆ ಸೂಚಿಸಿದ್ದರು.
ಈ ವಿಚಾರವಾಗಿಯೇ 4 ಬಾರಿ ನೋಟಿಸ್ ನೀಡಿದ್ದರು. ಆದರೆ ಮಲ್ಲಿಕಾರ್ಜುನ ಮಾತ್ರ ಕ್ಯಾರೆ ಅಂದಿರಲಿಲ್ಲ. ಹೀಗಾಗಿ 10 ಕೋಟಿ ಹಣಕ್ಕೆ ದಂಡ ಕಟ್ಟದೆ ಇದ್ದ ಬಿಜೆಪಿ ಪರಿಷತ್ ಸದಸ್ಯನಿಂದ ದಂಡ ವಸೂಲಿ ಮಾಡುವ ಸಲುವಾಗಿ ಐಟಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆರ್ಥಿಕ ಅಪರಾಧಗಳ ಕೋರ್ಟ್‌ಗೆ ಈ ಕುರಿತು ದೂರು ಸಲ್ಲಿಸಿದ್ದಾರೆ.