ಡೆಹರಾಡೂನ್: ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಐರ್ಲೆಂಡ್ ತಂಡದ 11ನೇ ಬ್ಯಾಟ್ಸ್ಮನ್ ಟಿಮ್ ಮರ್ಟಗ್ 142 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಹೌದು, ಅಫ್ಘಾನಿಸ್ತಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಟಿಮ್ ಮರ್ಟಗ್ 11 ನೇ ಬ್ಯಾಟ್ಸ್ಮನ್ ಆಗಿ ಕಣಕ್ಕಳಿದು ಎರಡೂ ಇನಿಂಗ್ಸ್ನಲ್ಲೂ 25ಕ್ಕಿಂತ ಹೆಚ್ಚು ರನ್ ಸಿಡಿಸಿದ್ದರು. ಇದು 142 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 11ನೇ ಆಟಗಾರನೊಬ್ಬ ಎರಡೂ ಇನಿಂಗ್ಸ್ನಲ್ಲಿ 25 ಪ್ಲಸ್ ರನ್ ಸಿಡಿಸಿದ್ದು ಇದೇ ಮೊದಲು. ಈ ಮೂಲಕ ಮರ್ಟಗ್ ವಿಶೇಷ ವಿಶ್ವದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು.

ಮರ್ಟಗ್ ಮೊದಲ ಇನಿಂಗ್ಸ್ನಲ್ಲಿ ಔಟಾಗದೇ 54 ರನ್ ಹಾಗೂ ಎರಡನೇ ಇನಿಂಗ್ಸ್ನಲ್ಲಿ 27 ರನ್ಗಳಿಸಿದರು. ಇದರ ಜೊತೆಗೆ 11 ನೇ ಆಟಗಾರನಾಗಿ ಅರ್ಧಶತಕ ಸಿಡಿಸುವ ಮೂಲಕ ತಂಡದ 11 ನೇ ಆಟಗಾರನೊಬ್ಬ ವೈಯಕ್ತಿಕ ಹೆಚ್ಚು ರನ್ಗಳೇ ತಂಡದ ಗರಿಷ್ಠ ಸ್ಕೋರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.