ವಿಶಾಖಪಟ್ಟಣಂ: ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೈದರಾಬಾದ್ ಅನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಆದರೆ ಹೈದರಾಬಾದ್ ಆರಂಭದಲ್ಲೇ ವೃದ್ಧಿಮಾನ್ ಸಹಾ(8) ವಿಕೆಟ್ ಕಳೆದುಕೊಂಡಿತು.
ನಾಲ್ಕು ಸಿಕ್ಸರ್ ಮೂಲಕ ಅಬ್ಬರಿಸಿದ ಮಾರ್ಟಿನ್ ಗಪ್ಟಿಲ್ ಆಟ 36 ರನ್ನಿಗೆ ಅಂತ್ಯವಾಯಿತು. ಕನ್ನಡಿಗ ಮನೀಷ್ ಪಾಂಡೆ 30 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ಕೇನ್ ವಿಲಿಯಂಸನ್ 28 ಗಳಿಸಲಷ್ಟೇ ಶಕ್ತರಾದರು.
-
Innings Break!
— IndianPremierLeague (@IPL) May 8, 2019 " class="align-text-top noRightClick twitterSection" data="
The @SunRisers post a total of 162/8. Will the #SRH bowlers defend the score? #DCvSRH pic.twitter.com/bZdrlpBbWo
">Innings Break!
— IndianPremierLeague (@IPL) May 8, 2019
The @SunRisers post a total of 162/8. Will the #SRH bowlers defend the score? #DCvSRH pic.twitter.com/bZdrlpBbWoInnings Break!
— IndianPremierLeague (@IPL) May 8, 2019
The @SunRisers post a total of 162/8. Will the #SRH bowlers defend the score? #DCvSRH pic.twitter.com/bZdrlpBbWo
ಮಿಂಚಿನ ಆಟವಾಡಿ ವಿಜಯ್ ಶಂಕರ್ ಹತ್ತು ಎಸೆತದಲ್ಲಿ 25 ರನ್ ಸಿಡಿಸಿ ಔಟಾದರು. ಕೊನೆ ಒವರ್ನಲ್ಲಿ ಮೂರು ವಿಕೆಟ್ ಕಳೆದುಕೊಂಡ ಪರಿಣಾಮ ಹೈದರಾಬಾದ್ನ ದೊಡ್ಡ ಮೊತ್ತದ ನಿರೀಕ್ಷೆ ಹುಸಿಯಾಯಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಕೀಮೋ ಪೌಲ್ 3, ಇಶಾಂತ್ ಶರ್ಮ 2, ಟ್ರೆಂಟ್ ಬೌಲ್ಟ್, ಅಮಿತ್ ಮಿಶ್ರಾ ಹಾಗೂ ಒಂದೊಂದು ವಿಕೆಟ್ ಹಂಚಿಕೊಂಡರು.