ಚೆನ್ನೈ: ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಸಿಎಸ್ಕೆ ತಂಡ ಡೆಲ್ಲಿ ಕ್ಯಾಪಿಟಲ್ ವಿರುದ್ಧ 80 ರನ್ಗಳ್ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮರಳಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ ಚೆನ್ನೈಗೆ ಬ್ಯಾಟಿಂಗ್ ನೀಡಿತು. ಪವರ್ ಪ್ಲೇನಲ್ಲಿ ಚೆನ್ನೈ ಬ್ಯಾಟ್ಸ್ಮನ್ಗಳನ್ನು ಕಾಡಿದ ಡೆಲ್ಲಿ ಬೌಲರ್ಗಳು ಕೇವಲ 27 ರನ್ ನೀಡಿ ವಾಟ್ಸನ್ ವಿಕೆಟ್ ಪಡೆದರು. ವಾಟ್ಸನ್ ನಂತರ ಕ್ರೀಸ್ಗೆ ಆಗಮಿಸಿದ ರೈನಾ ಡೆಲ್ಲಿ ಬೌಲರ್ಗಳನ್ನ ಮನಬಂದಂತೆ ದಂಡಿಸಿ 37 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 59 ರನ್ಗಳಿಸಿ 2 ನೇ ವಿಕೆಟ್ಗೆ 83 ರನ್ಗಳ ಜೊತೆಯಾಟ ನೀಡಿದರು. 39 ರನ್ಗಳಿಸಿದ್ದ ಪ್ಲೆಸಿಸ್ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರೆ, ನಂತರದ ಓವರ್ನಲ್ಲಿ ರೈನಾ ಸುಚಿತ್ಗೆ ವಿಕೆಟ್ ಒಪ್ಪಿಸಿದರು.
-
#Thala MS Dhoni is the Man of the Match for tonight's game 🙏🙏 pic.twitter.com/jime9Dlko4
— IndianPremierLeague (@IPL) May 1, 2019 " class="align-text-top noRightClick twitterSection" data="
">#Thala MS Dhoni is the Man of the Match for tonight's game 🙏🙏 pic.twitter.com/jime9Dlko4
— IndianPremierLeague (@IPL) May 1, 2019#Thala MS Dhoni is the Man of the Match for tonight's game 🙏🙏 pic.twitter.com/jime9Dlko4
— IndianPremierLeague (@IPL) May 1, 2019
ನಂತರ ಧೋನಿ ಜೊತೆಗೂಡಿದ ಜಡೇಜಾ ಕೇವಲ 10 ಎಸೆತಗಳಲ್ಲಿ 2 ಸಿಕ್ಸರ್, 2 ಬೌಂಡರಿ ಸಹಿತ 25 ರನ್ಗಳಿಸಿ ನಾಲ್ಕನೇ ವಿಕೆಟ್ಗೆ 43 ರನ್ಗಳ ಜೊತೆಯಾಟ ನೀಡಿ ಮೋರಿಸ್ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಧೋನಿ ಕೇವಲ 22 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 44 ರನ್ ಸೂರೆಗೈದರು. ರಾಯುಡು 5 ರನ್ಗಳಿಸಿ ಧೋನಿ ಜೊತೆ ಔಟಾಗದೆ ಉಳಿದರು. 10 ಓವರ್ಗಳಲ್ಲಿ 53 ರನ್ಗಳಿಸಿದ್ದ ಚೆನ್ನೈ ನಂತರದ 10 ಓವರ್ಗಳಲ್ಲಿ 126 ರನ್ಗಳಿಸಿತು.
ಡೆಲ್ಲಿ ಪರ ಸುಚಿತ್ 2,ಮೋರಿಸ್ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
-
The @ChennaiIPL win by 80 runs and are now the table toppers in the #VIVOIPL Points Table 🔥🔥 pic.twitter.com/LBXa118JlK
— IndianPremierLeague (@IPL) May 1, 2019 " class="align-text-top noRightClick twitterSection" data="
">The @ChennaiIPL win by 80 runs and are now the table toppers in the #VIVOIPL Points Table 🔥🔥 pic.twitter.com/LBXa118JlK
— IndianPremierLeague (@IPL) May 1, 2019The @ChennaiIPL win by 80 runs and are now the table toppers in the #VIVOIPL Points Table 🔥🔥 pic.twitter.com/LBXa118JlK
— IndianPremierLeague (@IPL) May 1, 2019
180 ರನ್ಗಳ ಟಾರ್ಗೆಟ್ ಬೆನ್ನೆತ್ತಿದ ಡೆಲ್ಲಿ ಕ್ಯಾಪಿಟಲ್ ಮೊದಲ ಓವರ್ನಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಧವನ್(19) ನಾಯಕ ಅಯ್ಯರ್ (44) ಬಿಟ್ಟರೆ ಡೆಲ್ಲಿ ಬ್ಯಾಟ್ಸ್ಮನ್ಗಳು ಸಿಎಸ್ಕೆ ಸ್ಪಿನ್ ಮೋಡಿಯ ಮುಂದೆ ಒಂದಂಕಿ ಮೊತ್ತಕ್ಕೆ ಸೀಮಿತರಾದರು. ಪಂತ್ 5, ಇಂಗ್ರಾಮ್1, ಅಕ್ಷರ್ ಪಟೇಲ್ 9, ರುದರ್ಫರ್ಡ್ 2, ಮೋರಿಸ್ ಸೊನ್ನೆ, ಸುಚಿತ್ 6, ಮಿಶ್ರಾ 8, ಬೌಲ್ಟ್ ಔಟಾಗದೆ 1 ರನ್ಗಳಿಸಿದರು.
ಡೆಲ್ಲಿ ಕ್ಯಾಪಿಟಲ್ 16.2 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು 99 ರನ್ಗಳಿಗೆ ಆಲೌಟ್ ಆಗಿ 80 ರನ್ಗಳಿಂದ ಸೋಲು ಕಂಡಿತು. ಸಿಎಸ್ಕೆ ಪರ ಜಡೇಜಾ 3, ತಾಹಿರ್ 4, ಭಜ್ಜಿ ಹಾಗೂ ಚಹಾರ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.