ಲಂಡನ್: ವಿಶ್ವಕಪ್ಗೂ ಮುನ್ನ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಆರಂಭಲ್ಲೇ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಆರಂಭಿಕರಾದ ರೋಹಿತ್,ಧವನ್, ಕೊಹ್ಲಿ ಹಾಗೂ ರಾಹುಲ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.
ಟಾಸ್ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಕಿವೀಸ್ ವಿರುದ್ಧ ಕಣಕ್ಕಿಳಿದಿದ್ದು, ರೋಹಿತ್ 2, ಧವನ್ 2,ರಾಹುಲ್ 6 ರನ್ಗಳಿಸಿ ಬೌಲ್ಟ್ಗೆ ವಿಕೆಟ್ ಒಪ್ಪಿಸಿದರೆ, ಕೊಹ್ಲಿ 18 ರನ್ಗಳಿಸಿ ಗ್ರ್ಯಾಂಡ್ಹೋಮ್ಗೆ ವಿಕೆಟ್ ಒಪ್ಪಿಸಿದರು.
ಹಾರ್ದಿಕ್ ಪಾಂಡ್ಯ 14 ರನ್ ಹಾಗೂ ಧೋನಿ 4 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ತಂಡಗಳ ವಿವರ:
ಭಾರತ ತಂಡ:
ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ, ಶಿಖರ್ ಧವನ್, ಎಂಎಸ್ ಧೋನಿ, ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್,ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ
ನ್ಯೂಜಿಲ್ಯಾಂಡ್:
ಕಾಲಿನ್ ಮನ್ರೋ,ಮಾರ್ಟಿನ್ ಗಪ್ಟಿಲ್,ಕೇನ್ ವಿಲಿಯಮ್ಸನ್(ನಾಯಕ),ಟಾಮ್ ಬ್ಲಂಡೆಲ್, ರಾಸ್ ಟೇಲರ್,ಕಾಲಿನ್ ಡಿ ಗ್ರಾಂಡ್ಹೋಮ್,ಹೆನ್ರಿ ನಿಕೋಲ್ಸ್,ಜೇಮ್ಸ್ ನಿಶಾಮ್, ಮಿಚೆಲ್ ಸ್ಯಾಂಟ್ನರ್,ಲೂಕಿ ಫರ್ಗ್ಯುಶನ್,ಟ್ರೆಂಟ್ ಬೌಲ್ಟ್,ಟಿಮ್ ಸೌತಿ,ಇಶ್ ಸೋಧಿ,