ETV Bharat / briefs

ನ್ಯೂಜಿಲ್ಯಾಂಡ್​ vs ಅಫ್ಘಾನಿಸ್ತಾನ್​: ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಕಿವೀಸ್... - ನ್ಯೂಜಿಲ್ಯಾಂಡ್​

ಸತತ ಎರಡು ಗೆಲುವಿನ ಅಲೆಯಲ್ಲಿ ತೇಲುತ್ತಿರುವ ನ್ಯೂಜಿಲ್ಯಾಂಡ್​ ತಂಡ ಇಂದು ಕ್ರಿಕೆಟ್​ ಶಿಶು ಅಫ್ಘಾನಿಸ್ತಾನ ತಂಡವನ್ನು ತನ್ನ ಮೂರನೇ ಪಂದ್ಯದಲ್ಲಿ ಎದುರಿಸುತ್ತಿದೆ.

icc
author img

By

Published : Jun 8, 2019, 5:06 PM IST

Updated : Jun 8, 2019, 7:15 PM IST

ಟೌಂಟನ್: ಸತತ ಎರಡು ಗೆಲುವಿನ ಅಲೆಯಲ್ಲಿ ತೇಲುತ್ತಿರುವ ನ್ಯೂಜಿಲ್ಯಾಂಡ್​ ತಂಡ ಇಂದು ಕ್ರಿಕೆಟ್​ ಶಿಶು ಅಫ್ಘಾನಿಸ್ಥಾನ ತಂಡವನ್ನು ತನ್ನ ಮೂರನೇ ಪಂದ್ಯದಲ್ಲಿ ಎದುರಿಸುತ್ತಿದೆ.

ಸತತ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಕಿವೀಸ್​ ತನ್ನ ಆಲ್​ರೌಂಡರ್​​ ಆಟದ ನೆರವಿನಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮ್ಯಾಟ್​ ಹೆನ್ರಿ ,ಬೌಲ್ಟ್​ ಕಳೆದೆರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗೆಲುವು ಸಾಧಿಸಲು ನೆರವಾಗಿದ್ದರು. ಇನ್ನು ಬ್ಯಾಟಿಂಗ್​ನಲ್ಲಿ ಸ್ಫೋಟಕ ಬ್ಯಾಟ್ಸ್​ಮನ್​ಗಳಾದ ಮನ್ರೊ, ಗಪ್ಟಿಲ್​ ಜೊತೆಗೆ ರಾಸ್​ ಟೇಲರ್,​ ವಿಲಿಯಮ್ಸನ್​ ರಂತಹ ಅನುಭವಿಗಳು ತಂಡಕ್ಕೆ ಬಲ ತಂದಿದ್ದಾರೆ. ಇನ್ನು ನಿಶಾಮ್​, ಗ್ರ್ಯಾಂಟ್​ಹೋಮ್​, ನೀಶಮ್​​ ಹಾಗೂ ಸ್ಯಾಂಟ್ನರ್​ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಎದುರಾಳಿಗಳಿಗೆ ಕಂಟಕವಾಗುವಂತಹ ಆಟಗಾರರಾಗಿರುವುದರಿಂದ ಅಫ್ಘಾನ್​ ವಿರುದ್ದ ಸುಲಭ ಜಯ ಸಾಧಿಸುವ ಆಲೋಚನೆಯಲ್ಲಿದೆ.

ICC world cup
ಮ್ಯಾಟ್​ ಹೆನ್ರಿ

ಇನ್ನು ತನ್ನ ಎರಡೂ ಪಂದ್ಯಗಳಲ್ಲೂ ಸೋಲನುಭವಿಸಿರುವ ಅಫ್ಘಾನ್​ ತನ್ನ ಮೊದಲ ಜಯಕ್ಕಾಗಿ ಹಾತೊರೆಯುತ್ತಿದೆ. ಸ್ಪಿನ್​ ಬೌಲಿಂಗ್​ ವಿಭಾಗ ಅಫ್ಘಾನ್​ ತಂಡದ ಜೀವಾಳವಾಗಿದೆ. ರಶೀದ್​ ಖಾನ್​, ಮುಜೀಬ್​ ಹಾಗೂ ಮೊಹಮ್ಮದ್​ ನಬಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಕಿವೀಸ್​ಗೆ ಟಕ್ಕರ್​ ಕೊಡಬಹುದೆಂಬ ಲೆಕ್ಕಾಚಾರ ಕ್ರೀಡಾವಲಯದಲ್ಲಿ ಚರ್ಚೆಯಾಗುತ್ತಿದೆ. ವಿಕೆಟ್​ ಕೀಪರ್​ ಮೊಹಮ್ಮದ್​ ಶಹ್ಜಾದ್​ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಶಹ್ಜಾದ್​ ಬದಲು ಇಕ್ರಂ ಅಲಿ ಖಿಲ್​ ತಂಡ ಸೇರಿಕೊಂಡಿದ್ದಾರೆ.

ICC world cup
ಮ್ಯಾಟ್​ ಹೆನ್ರಿ

ಮುಖಾಮುಖಿ:
ಎರಡು ತಂಡಗಳು ಒಮ್ಮೆ 2015 ರ ವಿಶ್ವಕಪ್​ನಲ್ಲಿ ಮಾತ್ರ ಮುಖಾಮುಖಿಯಾಗಿದ್ದು, ನ್ಯೂಜಿಲ್ಯಾಂಡ್​ ತಂಡ 6 ವಿಕೆಟ್​ಗಳ ಜಯ ಸಾಧಿಸಿತ್ತು.

ಅಫ್ಘಾನಿಸ್ತಾನ:

ಗುಲ್ಬದಿನ್​ ನೈಬ್(ನಾಯಕ), ಇಕ್ರಂ ಅಲಿ ಖಿಲ್ ​(ವಿ.ಕೀ), ರಶೀದ್​ ಖಾನ್​, ಹಜರತುಲ್ಹಾ ಝಾಝೈ, ರೆಹ್ಮತ್​ ಶಾ, ಹಶ್ಮತುಲ್ಹಾ ಶಾಹಿದಿ, ನಜೀಬುಲ್ಹಾ ಜಾಡ್ರನ್​, ​ಮೊಹಮ್ಮದ್​ ನಬಿ, ದವ್ಲಾತ್​ ಝಾರ್ಡನ್​, ಹಮೀದ್​ ಹಸ್ಸನ್​, ಮೂಜೀಬ್​ ಉರ್ ರೆಹ್ಮಾನ್.

ನ್ಯೂಜಿಲೆಂಡ್:

​ಕೇನ್​ ವಿಲಿಯಮ್ಸನ್​ (ನಾಯಕ), ಟ್ರೆಂಟ್​ ಬೌಲ್ಟ್​, ಕಾಲಿನ್​ ಡಿ ಗ್ರ್ಯಾಂಡ್​ಹೋಮ್​, ಲೂಕಿ ಫರ್ಗ್ಯುಸನ್​, ಮಾರ್ಟಿನ್​ ಗಪ್ಟಿಲ್​, ಮ್ಯಾಟ್​ ಹೆನ್ರಿ, ಟಾಮ್​ ಲ್ಯಾಥಮ್​​, ಕಾಲಿನ್​ ಮನ್ರೊ, ಜಿಮ್ಮಿ ನಿಶಾಮ್​, ಮಿಚೆಲ್​ ಸ್ಯಾಂಟ್ನರ್​, ರಾಸ್​ ಟೇಲರ್​.

Intro:Body:Conclusion:
Last Updated : Jun 8, 2019, 7:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.