ಲಂಡನ್: ಏಕದಿನ ಕ್ರಿಕೆಟ್‌ನ ಕೊನೆಯ ವಿಶ್ವಕಪ್ ಆಡುತ್ತಿರುವ ವಿಂಡೀಸ್ ತಂಡದ ಕ್ರಿಸ್‌ಗೇಲ್ ತಮ್ಮ ಜರ್ಸಿಯ ಮೇಲೆ 'ಯುನಿವರ್ಸ್ ಬಾಸ್' ಬರಹವನ್ನು ಉಪಯೋಗಿಸಲು ಸಲ್ಲಿಸಿದ್ದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.
ಕ್ರಿಕೆಟ್ನಲ್ಲಿ ಸಿಕ್ಸರ್ಗಳ ಸುರಿಮಳೆ ಸುರಿಸುವ ಗೇಲ್ ಹಲವು ಕ್ರಿಕೆಟ್ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದೇ ಕಾರಣದಿಂದ ವಿಶ್ವದೆಲ್ಲೆಡೆ ಈ ಕೆರಿಬಿಯನ್ ಆಟಗಾರ 'ಯುನಿವರ್ಸ್ ಬಾಸ್' ಎಂದು ಕರೆಸಿಕೊಂಡಿದ್ದಾರೆ.
ಕ್ರಿಸ್ ತಮ್ಮ ಕೊನೆಯ ವಿಶ್ವಕಪ್ ಆಡುತ್ತಿದ್ದು, ತಮ್ಮ ಜರ್ಸಿಯಲ್ಲಿ 'ಯುನಿವರ್ಸ್ ಬಾಸ್' ಎಂಬ ಲೋಗೊ ಮುದ್ರಿಸಿ ವಿಶ್ವಕಪ್ ನಡೆಯುವ 45 ದಿನ ಉಪಯೋಗಿಸಲು ಅನುಮತಿ ಕೋರಿ ಐಸಿಸಿಗೆ ಮನವಿ ಸಲ್ಲಿಸಿದ್ದರು. ಆದರೆ ಐಸಿಸಿ, ಗೇಲ್ ಮನವಿ ತಿರಸ್ಕರಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ, ಬಲಿದಾನ ಗುರುತಿನ ಲೋಗೋವಿದ್ದ ಗ್ಲೌಸ್ ಬಳಸಿರುವುದನ್ನು ಐಸಿಸಿ ವಿರೋಧಿಸಿತ್ತು. ಆದರೆ ಬಿಸಿಸಿಐ ಧೋನಿಯ ಬೆಂಬಲಕ್ಕೆ ನಿಂತು ಬಲಿದಾನ ಲೋಗೋವಿರುವ ಗ್ಲೌಸ್ ಉಪಯೋಗಿಸಲು ಅನುಮತಿ ನೀಡುವಂತೆ ಬೇಡಿಕೆ ಸಲ್ಲಿಸಿದೆ. ಆದ್ರೆ, ಐಸಿಸಿ, ಬಿಸಿಸಿಐ ಮಾತಿಗೆ ಬಗ್ಗದೆ ಮುಂದಿನ ಪಂದ್ಯದಲ್ಲಿ ಧೋನಿ ಲೋಗೋ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಐಸಿಸಿ ಅಯೋಜನೆಯ ಟೂರ್ನಮೆಂಟ್ಗಳಲ್ಲಿ ವೈಯಕ್ತಿಕ ಸಂದೇಶ ಸಾರುವ ಯಾವುದೇ ಲೋಗೋಗಳನ್ನು ಆಟಗಾರರು ಉಪಯೋಗಿಸಬಾರದೆಂಬುದು ಐಸಿಸಿ ನಿಯಮ. ಜೊತೆಗೆ ಧರ್ಮ, ಸೇನೆಗೆ ಸಂಬಂಧಪಟ್ಟ ಚಿಹ್ನೆಗಳ ಬಳಕೆಗೂ ಅನುಮತಿಯಿಲ್ಲ ಎಂದು ಕ್ರಿಕೆಟ್‌ನ ಅತ್ಯುನ್ನತ ನಿಯಂತ್ರಣ ಮಂಡಳಿ ತಿಳಿಸಿದೆ.