ಮುಂಬೈ: 2004ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಸಿನಿಮಾವೊಂದರಲ್ಲಿ ನಟನೆ ಮಾಡುವ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿ ಇದೀಗ ಸಂಸದೆಯಾಗಿರುವ ನವನೀತ್ ಕೌರ್ ರಾಣಾ, ಮೋದಿ ಪ್ರಮಾಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ಸುಕಳಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
'ಡಿ ಬಾಸ್' ಜತೆ ಚಿತ್ರರಂಗಕ್ಕೆ ಕಾಲಿಟ್ಟ ಈ ಚೆಲುವೆ ಈಗ ಸಂಸದೆ!
ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲು ಮಾಡಿರುವ ನಟಿ, ಈ ಸಲದ ಲೋಕಸಭೆ ಚುನಾವಣೆಯಲ್ಲಿ ಅನೇಕ ಯುವನಾಯಕರು ಆಯ್ಕೆಗೊಂಡಿದ್ದು, ಹೊಸ ದೃಷ್ಠಿಕೋನದಿಂದ ದೇಶದ ಅಭಿವೃದ್ಧಿಗೆ ದುಡಿಯಲಿದ್ದಾರೆ ಎಂದು ಹೇಳಿದ್ದಾರೆ.
ನವನೀತ್ ಕೌರ್ ರಾಣಾ, 2011ರಲ್ಲಿ ಶಾಸಕ ರವಿ ರಾಣಾ ಜತೆ ವಿವಾಹವಾಗಿದ್ದು, 2014ರಲ್ಲಿ ಅಮರಾವತಿ ಕ್ಷೇತ್ರದಿಂದ ಸೋಲು ಕಂಡಿದ್ದರು.