ETV Bharat / briefs

ರಾಜೀವ್​ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಶೂಟರ್​ ಹೀನಾ, ಅಂಕುರ್‌ ಹೆಸರು ಶಿಫಾರಸು - ರೈಫಲ್​

ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್​ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳಾ ಶೂಟರ್​ ಖ್ಯಾತಿಯ ಹೀನಾ ಸಿಧು ಹಾಗೂ ಅಂಕುರ್​ ಮಿತ್ತಲ್​ ಹೆಸರುಗಳನ್ನು ಪ್ರತಿಷ್ಠಿತ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿಗೆ ಅಂಜುಮ್‌ ಮುದ್ಗೀಳ್, ಶಾಹಜಾರ್‌ ರಿಜ್ವಿ, ಓಂಪ್ರಕಾಶ್ ಮಿಠರ್‌ವಾಲ್‌ ಅವರ ಹೆಸರನ್ನೂ ಸೂಚಿಸಲಾಗಿದೆ. ಜೆಸ್ಪಾಲ್​ ರಾಣಾ ಹಾಗೂ ರೋನಕ್​ ಪಂಡಿತ್​ರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ರಾಷ್ಟ್ರೀಯ ಶೂಟಿಂಗ್‌ ಒಕ್ಕೂಟ ಶಿಫಾರಸು ಮಾಡಲಾಗಿದೆ.

ಹೀನಾ ಸಿದು
author img

By

Published : Apr 29, 2019, 8:27 PM IST

ನವದೆಹಲಿ: ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್​ನಲ್ಲಿ ಚಿನ್ನ ಗೆದ್ದ ಮೊದಲು ಮಹಿಳಾ ಶೂಟರ್​ ಖ್ಯಾತಿಯ ಹೀನಾ ಸಿಧು ಹಾಗೂ ಅಂಕುರ್​ ಮಿತ್ತಲ್​ ಹೆಸರುಗಳನ್ನು ಪ್ರತಿಷ್ಠಿತ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ರಾಷ್ಟ್ರೀಯ ಶೂಟಿಂಗ್‌ ಒಕ್ಕೂಟ ಶಿಫಾರಸು ಮಾಡಿದೆ.

ಏಷ್ಯನ್​ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದಿರುವ ಹೀನಾ, ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್​ನಲ್ಲಿ 10 ಮೀಟರ್​ ರೈಫಲ್​ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎಂಬ ದಾಖಲೆ ಹೊಂದಿದ್ದಾರೆ. ಐಎಸ್‌ಎಸ್‌ಎಫ್ ಶೂಟಿಂಗ್‌ ರ್‍ಯಾಂಕಿಂಗ್‌ನಲ್ಲಿ ನಂ.1 ಶ್ರೇಯಾಂಕದಲ್ಲಿರುವ ಹೀನಾಗೆ 2014ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿದೆ.

heena-recommended-for-khel-ratna-ronak-for-dronacharya
ರೋನಕ್​ ಪಂಡಿತ್ ಹಾಗೂ ಹೀನಾ ಸಿಧು

ಮತ್ತೊಬ್ಬ ಶೂಟರ್​ ಅಂಕುರ್​ 2018ರಲ್ಲಿ ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ, 2017ರಲ್ಲಿ ಬೆಳ್ಳಿ ಪದಕ ಹಾಗೂ 2018ರ ಕಾಮನ್​ವೆಲ್ತ್​ ಗೇಮ್​ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಈ ಹಿಂದೆ ಶೂಟರ್​ಗಳಾದ ಅಭಿನವ ಬಿಂದ್ರ, ಅಂಜಲಿ ಭಾಗ್ವತ್​, ರಾಜ್ಯವರ್ಧನ್​ ಸಿಂಗ್​ ರಾಥೋಡ್​, ಮಂಜ್ವಿತ್​ ಸಿಂಗ್​ ಸಂಧು, ವಿಜಯ್​ ಕುಮಾರ್​, ಗಗನ್​ ನಾರಂಗ್, ರೋಂಜನ್​ ಸೋಧಿ ಮತ್ತು ಜೀತು ರಾಯ್​ಗೆ ರಾಜೀವ್​​ ಗಾಂಧಿ ಖೇಲ್​ರತ್ನ ಪ್ರಶಸ್ತಿ ಲಭಿಸಿದೆ.​

ಇದೇ ಸಭೆಯಲ್ಲಿ ಅರ್ಜುನ ಪ್ರಶಸ್ತಿಗೆ ಅಂಜುಮ್‌ ಮುದ್ಗೀಳ್, ಶಾಹಜಾರ್‌ ರಿಜ್ವಿ, ಓಂಪ್ರಕಾಶ್ ಮಿಠರ್‌ವಾಲ್‌ ಅವರ ಹೆಸರನ್ನೂ ಸೂಚಿಸಲಾಗಿದೆ. ಜೆಸ್ಪಾಲ್​ ರಾಣಾ, ಹಾಗೂ ರೋನಕ್​ ಪಂಡಿತ್​ರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.