ETV Bharat / briefs

ಆಯುರ್ವೇದ ಪದ್ಧತಿಯಲ್ಲಿ ಇಲ್ಲಿ ಕೊರೊನಾಗೆ ಚಿಕಿತ್ಸೆ.. ಈ ಆಶ್ರಮದಲ್ಲಿದೆ 50 ಹಾಸಿಗೆಗಳುಳ್ಳ ಕೋವಿಡ್ ಸೆಂಟರ್

ರಾಜಾರಾಮ್ ಗೌಶಲಾದ ಪಂಚಗವ್ಯ ಆಯುರ್ವೇದ ಕೋವಿಡ್ ಕೇರ್ ಸೆಂಟರ್ 50 ಹಾಸಿಗೆಗಳನ್ನು ಹೊಂದಿದೆ. ಈ ಕೇಂದ್ರವು ಒಂದು ಆಯುರ್ವೇದ ಮತ್ತು ಅಲೋಪತಿ ವೈದ್ಯರನ್ನು ನೇಮಿಸಿಕೊಂಡಿದ್ದು, ರೋಗಿಗಳ ಆರೈಕೆಗಾಗಿ ಐದು ದಾದಿಯರು ಸಹ ಇದ್ದಾರೆ.

author img

By

Published : May 10, 2021, 10:30 PM IST

Updated : May 10, 2021, 11:03 PM IST

Gujara

ಬನಸ್ಕಂತ(ಗುಜರಾತ್​): ಕೋವಿಡ್ ದೇಶಾದ್ಯಂತ ವೇಗವಾಗಿ ಹರಡುತ್ತಿದೆ ಜನರನ್ನು ತತ್ತರಿಸುತ್ತಿದೆ. ಗುಜರಾತ್‌ಗೂ ಸಹ ಕೊರೊನಾ ಸಾಕಷ್ಟು ಪರಿಣಾಮ ಬೀರಿದೆ. ಈ ನಡುವೆ ಕೋವಿಡ್ ರೋಗಿಗಳಿಗೆ ಆಯುರ್ವೇದ ಅಭ್ಯಾಸ (ವೇದಕ್ಷನ ಪಂಚಗವ್ಯ ಆಯುರ್ವೇದ) ಆಧಾರಿತ ಅನನ್ಯ ಪ್ರತ್ಯೇಕ ಕೇಂದ್ರವನ್ನು ಗುಜರಾತ್‌ನ ಬನಸ್ಕಂತ ಜಿಲ್ಲೆಯ ಟೆಟೋಡಾ ಗ್ರಾಮದ ರಾಜರಾಮ್ ಗೌಶಲಾ ಆಶ್ರಮದಲ್ಲಿ ತೆರೆಯಲಾಗಿದೆ.

ಕೋವಿಡ್ ಕೇರ್ ಸೆಂಟರ್ ಮತ್ತು ಐಸೊಲೇಷನ್ ವಾರ್ಡ್‌ಗಳನ್ನು ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರ್ಕಾರವು ಸ್ಥಾಪಿಸುತ್ತಿದ್ದರೂ, ಸಾಕಷ್ಟು ಸೌಲಭ್ಯಗಳಿಲ್ಲದೇ ಜನರು ಪರದಾಡುತ್ತಿದ್ದಾರೆ. ಹಾಗಾಗಿ ಈ ಆಶ್ರಮವು ಬನಸ್ಕಂತ ಜಿಲ್ಲೆಯ ಜನರಿಗೆ ಚಿಕಿತ್ಸೆ ನೀಡಲು ಮುಂದಾಗಿದೆ.

ಇಲ್ಲಿ ರೋಗಿಗಳಿಗೆ ಸಾವಯವವಾಗಿ ಬೆಳೆದ ಆಹಾರವನ್ನು ನೀಡಲಾಗುತ್ತದೆ. ಅಡುಗೆಮನೆಯಲ್ಲಿ ಬಳಸುವ ಧಾನ್ಯಗಳು ಮತ್ತು ಮಸಾಲೆಗಳನ್ನು ಕೂಡಾ ಸಾವಯವ ಕೃಷಿ ಕೇಂದ್ರಗಳಿಂದ ಪಡೆಯಲಾಗುತ್ತದೆ. ರೋಗಿಗಳಿಗೆ ಪಂಚಗವ್ಯ ಅಮೃತವನ್ನು ನೀಡಲಾಗುತ್ತದೆ, ಇದನ್ನು ಆಯುರ್ವೇದದ ಗೋಮೂತ್ರ, ತುಪ್ಪ, ಹಾಲು, ಮೊಸರು ಮತ್ತು ಆಯುರ್ವೇದ ಗಿಡಮೂಲಿಕೆಗಳನ್ನು ಸೇರಿಸಿ, ಈ ಐದು ಪಂಚಗವ್ಯಗಳನ್ನು ಬಳಸಿ ತಯಾರಿಸಲಾಗುತ್ತದೆ.

covid care
ಆಯುರ್ವೇದ ಪದ್ಧತಿಯಲ್ಲಿ ಇಲ್ಲಿ ಕೊರೊನಾಗೆ ಚಿಕಿತ್ಸಾ ಕೇಂದ್ರ

ಸಾವಯವ ಕೃಷಿಯ ಪ್ರಕಾರ ಬೆಳೆದ ಕೃಷಿ ಉತ್ಪನ್ನಗಳಿಂದ ತಯಾರಿಸಿದ ಆಹಾರವನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಈ ಕೇಂದ್ರದಲ್ಲಿ ಗೋವು, ಗೋಮೂತ್ರ ಮತ್ತು ನೈಸರ್ಗಿಕ ವಸ್ತುಗಳನ್ನು ರಸಗೊಬ್ಬರಗಳಾಗಿ ಬಳಸಲಾಗುತ್ತವೆ. ಈ ಆಶ್ರಮದಲ್ಲಿ ವೈದಿಕ ಆಚರಣೆಗಳನ್ನು ಅನುಸರಿಸಲಾಗುತ್ತದೆ. ನಿತ್ಯ ಇಲ್ಲಿ ಯಜ್ಞವನ್ನು ನಡೆಸಲಾಗುತ್ತಿದ್ದು, ಇದು ಮಾನವರ ಜೀವ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ.

50 ಹಾಸಿಗೆಗಳನ್ನು ಹೊಂದಿರುವ ಕೋವಿಡ್ ಸೆಂಟರ್

ರಾಜಾರಾಮ್ ಗೌಶಲಾದ ಪಂಚಗವ್ಯ ಆಯುರ್ವೇದ ಕೋವಿಡ್ ಕೇರ್ ಸೆಂಟರ್ 50 ಹಾಸಿಗೆಗಳನ್ನು ಹೊಂದಿದೆ. ಈ ಕೇಂದ್ರವು ಒಂದು ಆಯುರ್ವೇದ ಮತ್ತು ಅಲೋಪತಿ ವೈದ್ಯರನ್ನು ನೇಮಿಸಿಕೊಂಡಿದ್ದು, ರೋಗಿಗಳ ಆರೈಕೆಗಾಗಿ ಐದು ದಾದಿಯರು ಸಹ ಇದ್ದಾರೆ. ಇನ್ನು ಕೇಂದ್ರವನ್ನು ತಂಪಾಗಿಡಲು ಸಾಂಪ್ರದಾಯಿಕ ವಿಧಾನವನ್ನು ಇಲ್ಲಿ ಬಳಸಲಾಗುತ್ತದೆ. ಇದು ಸ್ವಾಭಾವಿಕವಾಗಿ ಕೋವಿಡ್ ಕೇಂದ್ರದಲ್ಲಿ ತಾಪಮಾನವನ್ನು ನಿರ್ವಹಿಸುತ್ತದೆ.

covid care centre
50 ಹಾಸಿಗೆಗಳನ್ನು ಹೊಂದಿರುವ ಕೋವಿಡ್ ಸೆಂಟರ್

ಈ ಆಶ್ರಮವು 5,000 ಹಸುಗಳಿಗೆ ನೆಲೆಯಾಗಿದೆ. ನೈಸರ್ಗಿಕ ವಾತಾವರಣದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಯುರ್ವೇದದಲ್ಲಿ, ತಾಯಿಯ ಹಸುವಿನ ನೈಸರ್ಗಿಕ ಗೊಬ್ಬರದೊಂದಿಗೆ ಬೆಳೆದ ಧಾನ್ಯಗಳನ್ನು ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ. ಅವು ನಿಮಗೆ ಹೆಚ್ಚಿನ ಪ್ರತಿರಕ್ಷೆಯನ್ನು ಒದಗಿಸುತ್ತದೆ. ನಾವು ಅಲೋಪತಿ ಔಷಧವನ್ನು ಸಹ ಬಳಸುತ್ತಿದ್ದೇವೆ. ಇದರಿಂದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳುತ್ತಾರೆ. ಎಲ್ಲ ರೋಗಿಗಳಿಗೆ ವೇದಲಕ್ಷ್ನ ಪಂಚಗವ್ಯ ಆಯುರ್ವೇದ ವಿಧಾನದಿಂದ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಇಲ್ಲಿ 5000 ಹಸುಗಳನ್ನು ಹೊಂದಿದ್ದೇವೆ ಮತ್ತು ಆದ್ದರಿಂದ ನೈಸರ್ಗಿಕ ಮತ್ತು ಆಹ್ಲಾದಕರ ವಾತಾವರಣ ಇಲ್ಲಿದೆ ಮತ್ತು ರೋಗಿಗಳು ಸಹಾ ತಮ್ಮ ಮನೆಯಲ್ಲಿರುವ ಅನುಭವ ಪಡೆಯುತ್ತಾರೆ, ಅಂತಾರೆ ಗೋಶಾಲೆ ಮುಖ್ಯಸ್ಥ ರಾಮ್ರತನ್ ಮಹಾರಾಜ್.

ಬನಸ್ಕಂತ ಜಿಲ್ಲೆಯ ಹಳ್ಳಿಯ ರೋಗಿಗಳ ಜೊತೆಗೆ, ರಾಜಸ್ಥಾನದಿಂದ ಬಂದ ಅನೇಕ ರೋಗಿಗಳಿದ್ದಾರೆ. ಬನಸ್ಕಂತ ರಾಜಸ್ಥಾನದ ಪಕ್ಕದಲ್ಲಿರುವ ಜಿಲ್ಲೆಯಾಗಿರುವುದರಿಂದ, ಅಲ್ಲಿಂದ ಅನೇಕ ಕೊರೊನಾ ರೋಗಿಗಳು ಇಲ್ಲಿಗೆ ಬಂದಿದ್ದಾರೆ. ಇಲ್ಲಿ ಒದಗಿಸುವ ಉತ್ತಮ ಚಿಕಿತ್ಸೆ ಮತ್ತು ಸೌಲಭ್ಯಗಳ ಬಗ್ಗೆ ಅವರು ಸಂತೋಷಗೊಂಡಿದ್ದಾರೆ.

covid care
ಬನಸ್ಕಂತ ಜಿಲ್ಲೆಯ ಹಳ್ಳಿಯ ರೋಗಿಗಳು ಈ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ

ಈ ಎಲ್ಲ ರೋಗಿಗಳು ಇಲ್ಲಿನ ವಿಶಿಷ್ಟ ಚಿಕಿತ್ಸಾ ವಿಧಾನದಿಂದ ತಮ್ಮ ಆರೋಗ್ಯವು ಸುಧಾರಿಸುತ್ತಿದೆ ಎಂದು ಸಂತೋಷಪಡುತ್ತಾರೆ. ಅನೇಕ ರೋಗಿಗಳು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಕೋವಿಡ್ ಎರಡನೇ ಅಲೆಯು ಹಾನಿಕಾರಕವೆಂದು ಸಾಬೀತಾದಂತೆ ಹಾಗೂ ನಗರದ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿಲ್ಲದ ಕಾರಣ, ಈ ಕೇಂದ್ರವು ಇಲ್ಲಿನ ಜನತೆಗೆ ವರದಾನವಾಗಿ ಬಂದಿದೆ.

Last Updated : May 10, 2021, 11:03 PM IST

For All Latest Updates

TAGGED:

Gujarat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.