ಬಳ್ಳಾರಿ: ಗಣಿ ಉದ್ಯಮಿ ಟಪಾಲ್ ಗಣೇಶ್ ಇಂದು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರನ್ನು ಲೋಕಸಭಾ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಕಾಂಗ್ರೆಸ್ ಪಕ್ಷದ ಶಾಲು ಹಾಕುವ ಮೂಲಕ ಬರಮಾಡಿಕೊಂಡರು.
ನಗರದ ಹೊರವಲಯದ ಗುಗ್ಗುರಟ್ಟಿಯ ವಿ.ಎಸ್ ಉಗ್ರಪ್ಪ ಅವರ ಮನೆಯಲ್ಲಿ ಇಂದು ನಡೆದ ಗೃಹ ಪ್ರವೇಶದ ನಂತರ ಗಣಿ ಉದ್ಯಮಿ ಟಪಾಲ್ ಗಣೇಶ್ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು.
ಈ ವೇಳೆ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಗಣಿ ಉದ್ಯಮಿ ಟಪಾಲ್ ಗಣೇಶ್, ವಿ.ಎಸ್ ಉಗ್ರಪ್ಪ ಒಳ್ಳೆಯ ವ್ಯಕ್ತಿ ಮತ್ತು ಪಾರ್ಲಿಮೆಂಟ್ನಲ್ಲಿ ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಉದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ ಎಂದರು.ಈ ಹಿಂದೆ ಮಾಜಿ ಸಂಸದೆ ಬಸವರಾಜೇಶ್ವರಿ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೇ ಅವರ ನಂತರ ಬಿಜೆಪಿ ಶಾಂತ, ಶ್ರೀರಾಮುಲು ಸಂಸದರಾಗಿ ಅಧಿಕಾರಿಕ್ಕೆ ಬಂದರೂ, ಪಾರ್ಲಿಮೆಂಟ್ನಲ್ಲಿ ಮಾತನಾಡಿರುವುದನ್ನ ನಾನು ನೋಡಿಲ್ಲ ಎಂದರು.
ವಿ.ಎಸ್ ಉಗ್ರಪ್ಪ ಬಳ್ಳಾರಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ.ಅವರನ್ನು ಲೋಕಸಭಾ ಚುನಾವಣಾಯಲ್ಲಿ ಜಯಶೀಲರನ್ನಾಗಿ ಮಾಡುವ ಉದ್ಧೇಶ ನನ್ನದ್ದಾಗಿದೆ ಎಂದರು.