ಲಿಂಗಸೂಗೂರು(ರಾಯಚೂರು): ತಾತ್ಕಾಲಿಕ ಮಾರುಕಟ್ಟೆಯಲ್ಲಿ ಪುರಸಭೆ ಸಿಬ್ಬಂದಿ ಅಕ್ರಮ ತೆರಿಗೆ ಸಂಗ್ರಹ ಮುಖ್ಯಾಧಿಕಾರಿ ಜೊತೆ ರೈತ ಮುಖಂಡರ ವಾಗ್ವಾದ ನಡೆಯಿತು.
ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದರಿಂದ ವಾರದ ಸಂತೆ ರದ್ದುಪಡಿಸಲಾಗಿದೆ. ನಾಗರಿಕರ ಅನುಕೂಲಕ್ಕೆಂದು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಿದೆ. ಕಾಲೇಜೊಂದರ ಮೈದಾನದಲ್ಲಿ ಪುರಸಭೆ ಸಿಬ್ಬಂದಿ ರಸೀದಿ ನೀಡದೆ ಅಕ್ರಮವಾಗಿ ಮನಸ್ಸಿಗೆ ಬಂದಷ್ಟು ತೆರಿಗೆ ಸಂಗ್ರಹಿಸುವುದು ನಿಯಮ ಬಾಹಿರ.
ಈ ಕುರಿತು ಆಡಳಿತ ಮಂಡಳಿ ನಿರ್ಧಾರ ಮತ್ತು ಸುತ್ತೋಲೆ ನೀಡುವಂತೆ ರೈತ ಮುಖಂಡರಾದ ಶಿವಪುತ್ರ ನಂದಿಹಾಳ, ಕುಪ್ಪಣ್ಣ ಮಾಣಿಕ್ ವಾಗ್ವಾದ ನಡೆಸಿದರು.
ಮುಖ್ಯಾಧಿಕಾರಿ ಸ್ವಚ್ಛತೆ ಮತ್ತು ಸ್ಯಾನಿಟೈಸರ್ ಇತರೆ ಖರ್ಚಿಗಾಗಿ ತೆರಿಗೆ ಸಂಗ್ರಹಣೆ ಮಾಡುತ್ತಿದ್ದೇವೆ. ಜಾಗ ನಮ್ಮದಲ್ಲವಾದರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತೆರಿಗೆ ಸಂಗ್ರಹಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಾಗ ವಾಗ್ವಾದ ನಡೆಯಿತು.