ETV Bharat / briefs

ಮತಯಂತ್ರ ಕ್ಯಾಲ್ಕುಲೇಟರ್ ಇದ್ದ ಹಾಗೆ, ಹ್ಯಾಕ್ ಸಾಧ್ಯವಿಲ್ಲ: ಬಿಇಎಲ್‌ ನಿರ್ದೇಶಕ - bangalore

ಇವಿಎಂಗಳನ್ನು ಹ್ಯಾಕ್ ಮಾಡಲಾಗುತ್ತಿದೆ ಎನ್ನುವ ಆರೋಪಗಳಿಗೆ ಭಾರತ್​ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕ ಎನ್.ಕೃಷ್ಣಪ್ಪ ಸ್ಪಷ್ಟ ಉತ್ತರ ನೀಡಿದ್ದಾರೆ.

ಎನ್.ಕೃಷ್ಣಪ್ಪ
author img

By

Published : Jun 1, 2019, 7:24 PM IST

ಬೆಂಗಳೂರು: ಲೋಕಸಭೆ ಚುನಾವಣೆ ಮುಕ್ತಾಯವಾಗಿ, ಫಲಿತಾಂಶ ಬಂದರೂ ಇವಿಎಂ ಮೇಲಿನ ಆರೋಪಗಳು ನಿಂತಿಲ್ಲ. ಘಟಾನುಘಟಿ ನಾಯಕರ ಸೋಲಿಗೆ ಇವಿಎಂ ಕಾರಣ ಎಂದು ಪರಾಜಯಗೊಂಡ ಅಭ್ಯರ್ಥಿಗಳ ಆರೋಪಗಳಿಗೆ ಭಾರತ್​ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕ ನಟರಾಜ್ ಕೃಷ್ಣಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.

ಭಾರತ್​ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕ ಎನ್​.ಕೃಷ್ಣಪ್ಪ

ಇವಿಎಂ ಅನ್ನು ಯಾರೂ ಹ್ಯಾಕ್​ ಮಾಡಲು ಸಾಧ್ಯವಿಲ್ಲ. ಯಾಕೆಂದರೆ, ಅದು ಕ್ಯಾಲ್ಕುಲೇಟರ್​ ಇದ್ದ ಹಾಗೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕ ನಟರಾಜ್ ಕೃಷ್ಣಪ್ಪ ಹೇಳಿದರು.

ಹ್ಯಾಕ್ ಮಾಡಿ ತೋರಿಸಿ ಎಂದು ಕೇಂದ್ರ ಚುನಾವಣಾ ಆಯೋಗ ಹ್ಯಾಕತಾನ್ ಏರ್ಪಡಿಸಿತ್ತು. ಆದ್ರೆ, ಆರೋಪ ಮಾಡಿದವರಲ್ಲಿ ಯಾರೂ ಮುಂದೆ ಬಂದು ಹ್ಯಾಕ್ ಮಾಡಲಿಲ್ಲ . ಇದಲ್ಲದೇ ಬ್ಲೂಟೂತ್ ಅಥವಾ ವೈಫೈ ಮುಖಾಂತರ ಹ್ಯಾಕ್ ಮಾಡಲು ಸಾಧ್ಯ ಎಂಬ ಆರೋಪವು ಸಾಧ್ಯವಿಲ್ಲ. ಇದು 'ಸ್ಟಾಂಡ್ ಆಲೋನ್ ಡಿವೈಸ್' ಎಂದು ಹೇಳಿದರು.

ಹಲವಾರು ಇವಿಎಂ ಯಂತ್ರಗಳನ್ನು ಕೆಡಿಸಿ ತಮಗೆ ಬೇಕಾದ ಹಾಗೆ ತಿರುಚಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಯಂತ್ರದಲ್ಲಿ ವಿಶೇಷವಾದ ಸಾಫ್ಟವೇರ್ ಅಳವಡಿಸಲಾಗಿದೆ. ಒಂದೊಮ್ಮೆ ತಿರುಚುವ ಯತ್ನ ಮಾಡಿದರೆ ಯಂತ್ರ ತಾನಾಗಿ ಸ್ಥಗಿತಗೊಂಡು ಲಾಕ್ ಆಗುತ್ತದೆ. ಇದನ್ನು ಸರಿ ಮಾಡುವುದಕ್ಕೆ ಪುನಃ ಫ್ಯಾಕ್ಟ್ರಿಗೆ ಕಳುಹಿಸಬೇಕಾಗುತ್ತದೆ. ಹಾಗಾಗಿ ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಮಾಹಿತಿ ಕೊಟ್ಟರು.

Intro:Byte: Nataraj Krishnappa , Director BELBody:ಇವಿಎಂಗಳು ಕ್ಯಾಲುಕೆಟರ್ ಇದ್ದಹಾಗೆ ಹ್ಯಾಕ್ ಮಾಡಲು ಹೇಗೆ ಸಾಧ್ಯ: ಬಿ ಈ ಎಲ್ ಮುಖ್ಯಸ್ಥ.

ಬೆಂಗಳೂರು: ಲೋಕಸಭೆ ಚುನಾವಣೆ ಸಮಾಪ್ತಿ ಆದ ಮೇಲೆ ಫಲಿತಾಂಶವು ಬಂದಾಯಿತು ಆದರೆ ಇವಿಎಂ ಮೇಲೆ ಆರೋಪಗಳಂತೂ ನಿಂತಿಲ್ಲ.

ದಿನೇ ದಿನೇ ಹೆಚ್ಚುತ್ತಿರುವ ಆರೋಪಗಳಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕರಾದ ನಟರಾಜ್ ಕೃಷ್ಣಪ್ಪ ಇವಿಎಂ ಕ್ಯಾಲ್ಕ್ಯುಲೇಟರ್ ಇದ್ದ ಹಾಗೆ ಇದನ್ನು ಹೇಗೆ ಹ್ಯಾಕ್ ಮಾಡಲು ಸಾಧ್ಯ ಎಂದು ಇವಿಎಂನನ್ನು ಸಮರ್ಥಿಸಿಕೊಂಡರು. ಜೊತೆಗೆ ಹ್ಯಾಕ್ ಮಾಡಿ ತೋರಿಸಿ ಎಂದು ಹ್ಯಾಕತಾನ್ ಏರ್ಪಡಿಸಲಾಗಿತ್ತು ಆದ್ರೆ ಆರೋಪ ಮಾಡಿದವರಲ್ಲಿ ಯಾರು ಮುಂದೆ ಬಂದು ಹ್ಯಾಕ್ ಮಾಡಿಲ್ಲ . ಇದಲ್ಲದೆ ಬ್ಲೂಟೂತ್ ಅಥವಾ ವೈ ಫೈ ಮುಖೇನ ಹ್ಯಾಕ್ ಮಾಡಲು ಸಾಧ್ಯ ಎಂಬ ಆರೋಪವು ಸಾಧ್ಯವಿಲ್ಲ ಇದು 'ಸ್ಟಾಂಡ್ ಆಲೋನ್ ಡಿವೈಸ್' ಎಂದರು
ಜೊತೆಗೆ ಈ ಎಲ್ಲಾ ಆರೋಪಗಳಿಲ್ಲಿ ತಿರುಳಿಲ್ಲ ಎಂದು ಸೇರಿಸಿದರು.

ಇನ್ನು ಹಲವಾರು ಇವಿಎಂ ಯಂತ್ರಗಳನ್ನು ಕೆಡಿಸಿ ತಮಗೆ ಬೇಕಾದ ಹಾಗೆ ತಿರುಚಿಕೊಂಡಿದ್ದಾರೆ ಎಂದು ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬಿ ಇ ಎಲ್ ನಿರ್ದೇಶಕರು ನಟರಾಜ್ ಕೃಷ್ಣಪ್ಪ ಇವಿಎಂ ಯಂತ್ರದಲ್ಲಿ ವಿಶೇಷವಾಗಿ ಸಾಫ್ಟವೇರ್ ಅಳವಡಿಸಲಾಗಿದೆ, ಒಂದೊಮ್ಮೆ ತಿರುಚುವ ಯತ್ನ ಮಾಡಿದರೆ ಯಂತ್ರ ತಾನಾಗಿ ಸ್ಥಗಿತಗೊಂಡು ಲಾಕ್ ಆಗುತ್ತದೆ. ಇದನ್ನು ಸರಿ ಮಾಡುವುದಕ್ಕೆ ಪುನಃ ಫ್ಯಾಕ್ಟ್ರಿಗೆ ಹೋಗಿ ಸರಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.