ETV Bharat / briefs

ಇಂಗ್ಲೆಂಡ್​​​​​​​​ ತಂಡದಲ್ಲಿರುವ ಐಪಿಎಲ್​​​ ಸ್ಟಾರ್​ಗೆ​ ಕೊಹ್ಲಿ-ಗೇಲ್​​​ ವಿಕೆಟ್​ ಪಡೆಯುವ ಕನಸಿದೆಯಂತೆ! - ಜೋಫ್ರಾ ಆರ್ಚರ್​

ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಕ್ರಿಸ್​ ಗೇಲ್​ ವಿಕೆಟ್​ ಪಡೆಯಬೇಕೆಂಬ ಗುರಿ ಹೊಂದಿದ್ದೇನೆ ಎಂದು ಇಂಗ್ಲೆಂಡ್​ ತಂಡಕ್ಕೆ ಆಯ್ಕೆಯಾಗಿರುವ ಉದಯೋನ್ಮುಖ ಬೌಲರ್​ ಜೋಫ್ರಾ ಆರ್ಚರ್ ಹೇಳಿದ್ದಾರೆ.​

ಐಪಿಎಲ್​
author img

By

Published : May 22, 2019, 11:27 AM IST

ಲಂಡನ್‌: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಎರಡೇ ವಾರದಲ್ಲಿ ವಿಶ್ವಕಪ್​ಗೆ ಆಯ್ಕೆಯಾಗಿರುವ ಯುವ ವೇಗಿ ಜೋಫ್ರಾ ಆರ್ಚರ್, ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ವಿಂಡೀಸ್​ ದಿಗ್ಗಜ ಕ್ರಿಸ್​ ಗೇಲ್​ ವಿಕೆಟ್​ ಪಡೆಯುವುದೇ ನನ್ನ ಗುರಿ ಎಂದಿದ್ದಾರೆ.

ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗುವಲ್ಲಿ ಯಶಸ್ವಿಯಾದ ಜೋಫ್ರಾ ಆರ್ಚರ್‌ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ್ದು, ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಕ್ರಿಸ್​ ಗೇಲ್​ ವಿಕೆಟ್​ ಪಡೆಯಬೇಕೆಂಬ ಗುರಿ ಹೊಂದಿದ್ದೇನೆ. ವಿಲಿಯರ್ಸ್​ ವಿಕೆಟ್​ ಕೂಡಾ ಪಡೆಯಬೇಕೆಂಬ ಆಸೆಯಿದೆ. ಆದರೆ ಅವರು ದ. ಆಫ್ರಿಕಾ ಪರ ಆಡುವುದಿಲ್ಲ ಎಂದು ನಗೆ ಬೀರಿದ್ದಾರೆ.

Jofra Archer
ಜೋಫ್ರಾ ಆರ್ಚರ್​

ಆರ್ಚರ್‌ ಕಳೆದೆರಡು ಐಪಿಎಲ್‌ ಆವೃತ್ತಿಯಲ್ಲಿ ಆಡಿದರೂ ಕೊಹ್ಲಿಗೆ ಎಸೆದಿರುವುದು ಕೇವಲ 2 ಬಾಲ್​ ಮಾತ್ರ. ಒಂದರಲ್ಲಿ ಕೊಹ್ಲಿ ಸಿಂಗಲ್‌ ತೆಗೆದರೆ, ಇನ್ನೊಂದು ಲೆಗ್‌ಬೈ ಆಗಿತ್ತು ಎಂದು ವಿವರಿಸಿದ್ದಾರೆ.

ಅನುಕೂಲವಾಗಲಿದೆ ಐಪಿಎಲ್​ ಆಟ

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಆಡಿರುವುದು ನನಗೆ ವೈಯಕ್ತಿವಾಗಿ ಅನುಕೂಲವಾಗಿ. ಲೀಗ್​ನಲ್ಲಿ ವಿಶ್ವದ ಪ್ರಭಾವಿ ಆಟಗಾರರೆಲ್ಲ ಪಾಲ್ಗೊಳ್ಳುವುದರಿಂದ ಅವರ ಬ್ಯಾಟಿಂಗ್​ ನ್ಯೂನ್ಯತೆಗಳು ಹಾಗೂ ಬಲ ಏನೆಂಬುದು ತಿಳಿದಿದ್ದೇನೆ. ಇದರಿಂದ ವಿಶ್ವಕಪ್​ನಲ್ಲಿ ಉತ್ತಮವಾಗಿ ಬೌಲ್​ ಮಾಡಲು ಅನುಕೂಲವಾಗಲಿದೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.