ಸೌತಾಂಪ್ಟನ್(ಲಂಡನ್): ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಆಂಗ್ಲರ ತಂಡ ವೆಸ್ಟ್ ಇಂಡೀಸ್ ಮೇಲೆ ಸವಾರಿ ಮಾಡಿದ್ದು, 8 ವಿಕೆಟ್ಗಳ ಸುಲಭ ಗೆಲುವು ದಾಖಲು ಮಾಡುವ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ತಂಡ ನಿಕೋಲಸ್ ಪೂರನ್ (63) ರನ್ಗಳ ನೆರವಿನಿಂದ 44.4 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 212 ರನ್ ಗಳಿಸಲು ಶಕ್ತವಾಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಕೆರಿಬಿಯನ್ ತಂಡ ಆಂಗ್ಲರ ಸಾಂಘಿಕ ಬೌಲಿಂಗ್ ದಾಳಿ ಎದುರು ನೆಲಕಚ್ಚಿತ್ತು.
-
4️⃣ @benstokes38 finds the boundary to wrap up a comprehensive victory for @englandcricket over the West Indies in Southampton! #WeAreEngland #CWC19 pic.twitter.com/mHH8Rp4eje
— ICC (@ICC) June 14, 2019 " class="align-text-top noRightClick twitterSection" data="
">4️⃣ @benstokes38 finds the boundary to wrap up a comprehensive victory for @englandcricket over the West Indies in Southampton! #WeAreEngland #CWC19 pic.twitter.com/mHH8Rp4eje
— ICC (@ICC) June 14, 20194️⃣ @benstokes38 finds the boundary to wrap up a comprehensive victory for @englandcricket over the West Indies in Southampton! #WeAreEngland #CWC19 pic.twitter.com/mHH8Rp4eje
— ICC (@ICC) June 14, 2019
213 ರನ್ಗಳ ಸುಲಭ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾದ ಜಾನಿ ಬೇರ್ಸ್ಟೊವ್(45) ಹಾಗೂ ರೂಟ್(ಅಜೇಯ 100ರನ್) 95ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ಜಾನಿ ವಿಕೆಟ್ ಕಳೆದುಕೊಂಡಿತು.
ಇದಾದ ಬಳಿಕ ರೂಟ್ ಕೂಡಿಕೊಂಡ ವೋಕ್ಸ್ 40ರನ್ಗಳ ಕಾಣಿಕೆ ನೀಡಿದರು. ಇವರ ವಿಕೆಟ್ ಕಳೆದುಕೊಂಡ ಬಳಿಕ ಸ್ಟೋಕ್ಸ್ ಹಾಗೂ ರೂಟ್ 33.1 ಓವರ್ಗಳಲ್ಲಿ 213ರನ್ಗಳಿಕೆ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನು ವಿಶ್ವಕಪ್ನಲ್ಲಿ ಅಮೋಘ ಫಾರ್ಮ್ ಮುಂದುವರೆಸಿರುವ ರೂಟ್ ಆಕರ್ಷಕ ಎರಡನೇ ಶತಕ ಸಿಡಿಸಿ ಮಿಂಚಿದರು.
ಇದಕ್ಕೂ ಮೊದಲು ಮಾರಕ ಬೌಲಿಂಗ್ ಮಾಡಿದ ಆರ್ಚರ್, ಮಾರ್ಕ್ ವುಡ್ ತಲಾ 3ವಿಕೆಟ್ ಪಡೆದುಕೊಂಡರೆ, ರೂಟ್ 2 ವಿಕೆಟ್ ಹಾಗು ವೋಕ್ಸ್, ಪ್ಲಂಕೆಟ್ ತಲಾ 1ವಿಕೆಟ್ ಪಡೆದುಕೊಂಡರು.