ಲಂಡನ್: 12ನೇ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಅದ್ಧೂರಿ ಪ್ರದರ್ಶನ ತೋರಿದ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 104 ರನ್ಗಳಿಂದ ಜಯ ಸಾಧಿಸಿದೆ.
312 ರನ್ಗಳ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ ತಂಡ 39.5 ಓವರ್ಗಳಲ್ಲೇ ಆಲೌಟ್ ಆಗುವ ಮೂಲಕ 104 ರನ್ಗಳ ಅಂತರದ ಸೋಲುಕಂಡಿತು.
ಆರಂಭಿಕರಾಗಿ ಕ್ವಿಂಟನ್ ಡಿಕಾಕ್(68) ಹಾಗೂ ವ್ಯಾನ್ ಡರ್(50) ರನ್ ಗಳಿಸಿದ್ದು ಬಿಟ್ಟರೆ ಆಫ್ರಿಕಾ ಬ್ಯಾಟ್ಸ್ಮನ್ಗಳು ಇಂಗ್ಲೆಂಡ್ ಬೌಲರ್ಗಳ ಮುಂದೆ ನಿಲ್ಲದೇ ಪೆವಿಲಿಯನ್ ಹಾದಿ ಹಿಡಿದರು. ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾದ ಡು ಪ್ಲೆಸಿಸ್(5), ಐಡೆನ್ ಮ್ಯಾಕ್ರಮ್ (11), ಡುಮಿನಿ(8), ಪ್ರೆಟೋರಿಯಸ್(1) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಆಫ್ರಿಕನ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
-
England are off to a winning start!
— Cricket World Cup (@cricketworldcup) May 30, 2019 " class="align-text-top noRightClick twitterSection" data="
Archer takes three wickets, while Plunkett and Stokes get two each as the hosts beat South Africa by 104 runs! #ENGvSA SCORECARD ⬇️ https://t.co/nH52002J64 pic.twitter.com/dT8xVHtmOs
">England are off to a winning start!
— Cricket World Cup (@cricketworldcup) May 30, 2019
Archer takes three wickets, while Plunkett and Stokes get two each as the hosts beat South Africa by 104 runs! #ENGvSA SCORECARD ⬇️ https://t.co/nH52002J64 pic.twitter.com/dT8xVHtmOsEngland are off to a winning start!
— Cricket World Cup (@cricketworldcup) May 30, 2019
Archer takes three wickets, while Plunkett and Stokes get two each as the hosts beat South Africa by 104 runs! #ENGvSA SCORECARD ⬇️ https://t.co/nH52002J64 pic.twitter.com/dT8xVHtmOs
3ನೇ ಓವರ್ನಲ್ಲೇ ಗಾಯಗೊಂಡು ನಿವೃತ್ತಿಗೊಂಡಿದ್ದ ಆಮ್ಲ ಮತ್ತೆ ಬ್ಯಾಟಿಂಗ್ಗೆ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೇವಲ 13 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಪೆಹ್ಲುಕ್ವಾಯೋ(24), ರಬಾಡಾ (11) ಎಂಗಿಡಿ 6 ರನ್ ಗಳಿಸಿದರು.
ಉತ್ತಮ ಬೌಲಿಂಗ್ ದಾಳಿ ನಡೆಸಿದ ಇಂಗ್ಲೆಂಡ್ ತಂಡದ ಬೌಲರ್ಗಳು ಇನ್ನೂ 61 ಎಸೆತಗಳು ಇರುವಂತೆಯೇ ಎದುರಾಳಿಯನ್ನು ಅಲೌಟ್ ಮಾಡಿದರು. ಯುವ ವೇಗಿ ಆರ್ಚರ್ 3, ಪ್ಲಂಕೇಟ್ 2, ಬೆನ್ ಸ್ಟೋಕ್ಸ್ 2, ಅದಿಲ್ ರಶೀದ್ ಹಾಗೂ ಮೊಯಿನ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.