ETV Bharat / briefs

ಧೋನಿ, ರಾಹುಲ್​ ಅಬ್ಬರದ ಶತಕ... ಬಾಂಗ್ಲಾದೇಶಕ್ಕೆ 360ರನ್​ಗಳ ಬೃಹತ್​ ಟಾರ್ಗೆಟ್​ ನೀಡಿದ ಕೊಹ್ಲಿ ಬಳಗ - ವಿಶ್ವಕಪ್​

ಕನ್ನಡಿಗ ಕೆಎಲ್​ ರಾಹುಲ್​ ಹಾಗೂ ಧೋನಿ ಶತಕದ ನೆರವಿನಿಂದ ಭಾರತ ತಂಡ 50 ಓವರ್​ಗಳಲ್ಲಿ 359 ರನ್​ಗಳ ಬೃಹತ್​ ಮೊತ್ತ ಕಲೆಹಾಕಿದೆ.

dhoni
author img

By

Published : May 28, 2019, 7:57 PM IST

ಕಾರ್ಡಿಫ್​: ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ ಅಬ್ಬರ ಶತಕ ಸಿಡಿಸುವ ಮೂಲಕ ತಮ್ಮ ತೋಳಲ್ಲಿ ಇನ್ನು ಬಲ ಇದೆ ಎಂಬುದನ್ನು ಕ್ರಿಕೆಟ್​ ಜಗತ್ತಿಗೆ ತೋರಿಸಿದ್ದಾರೆ.

ವಯಸ್ಸು 37 ಆದರೂ ಯುವ ಕ್ರಿಕೆಟಿಗರಂತೆ ಕೀಪಿಂಗ್​, ರನ್ನಿಂಗ್​ ಮಾಡುವ ಧೋನಿ ಇಂದು ಬ್ಯಾಟಿಂಗ್​ನಲ್ಲೂ ಕೂಡ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ. ಕೇವಲ 73 ಎಸೆತಗಳಲ್ಲಿ ಶತಕಗಳಿಸಿ ಮಿಂಚಿದ್ದಾರೆ. ತಂಡದ ಮೊತ್ತ 102ಕ್ಕೆ 4 ವಿಕೆಟ್​ ಇದ್ದ ಸಂದರ್ಭದಲ್ಲಿ ಕ್ರೀಸಿಗಿಳಿದ ಧೋನಿ ಕನ್ನಡಿಗ ಕೆ.ಎಲ್.​​ ರಾಹುಲ್​ ಜೊತೆ ಸೇರಿ 5ನೇ ವಿಕೆಟ್​ಗೆ 164 ರನ್​ಗಳ ಜೊತೆಯಾಟ ನಡೆಸಿದರು.

ರಾಹುಲ್​ ಔಟಾದ ನಂತರ ಪಾಂಡ್ಯ ಜೊತೆಗೂಡಿ 59 ರನ್​ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 300 ಗಡಿದಾಟಿಸಿದರು. 72 ಎಸೆತದಲ್ಲಿ 99ರನ್​ಗಳಿಸಿದ್ದ ಧೋನಿ 73ನೇ ಎಸೆತವನ್ನು ಸಿಕ್ಸರ್​ಗಟ್ಟಿ ಶತಕ ಪೂರೈಸಿದರು. ಒಟ್ಟಾರೆ 78 ಎಸೆತಗಳಲ್ಲಿ 113 ರನ್​ ಸಿಡಿಸಿದರು. ಇವರ ಇನ್ನಿಂಗ್ಸ್​ನಲ್ಲಿ 7 ಸಿಕ್ಸರ್​ 8 ಬೌಂಡರಿ ಸೇರಿದ್ದವು

ಅಬ್ಬರದ ಶತಕದ ಮೂಲಕ 4ನೇ ಸ್ಥಾನಕ್ಕೆ ತಾವು ಫಿಟ್​ ಎಂದ ​ಕನ್ನಡಿಗ ರಾಹುಲ್

ಧೋನಿ (113), ರಾಹುಲ್​(108) ಹಾಗೂ ಕೊಹ್ಲಿ (47) ಬ್ಯಾಟಿಂಗ್​ ನೆರವಿನಿಂದ ಭಾರತ ತಂಡ 359 ರನ್​ಗಳಿಸಿದೆ.

  • Look who's joined the party 😎😎

    MS Dhoni brings up a quick fire 💯 in the warm-up game against Bangladesh 👏👏 pic.twitter.com/dtqPwVNktW

    — BCCI (@BCCI) May 28, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.