ETV Bharat / briefs

ಇಶಾಂತ್​, ಮಿಶ್ರಾ ಬೌಲಿಂಗ್​ ದಾಳಿಗೆ ರಾಜಸ್ಥಾನ ತತ್ತರ... ಡೆಲ್ಲಿಗೆ 116 ರನ್​ಗಳ ಟಾರ್ಗೆಟ್​​​​

author img

By

Published : May 4, 2019, 6:13 PM IST

ನಿರ್ಣಾಯಕ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ ರಾಜಸ್ಥಾನ​ ರಾಯಲ್ಸ್​ ತಂಡ ಪರಾಗ್​ ಅರ್ಧಶತಕದ ನೆರವಿನಿಂದ ಡೆಲ್ಲಿಗೆ 116 ರನ್​ಗಳ ಟಾರ್ಗೆಟ್​ ನೀಡಿದೆ.

rr

ನವದೆಹಲಿ: ಡೆಲ್ಲಿ ಕ್ಯಾಪಿಟಲ್​ ಬೌಲಿಂಗ್​ ದಾಳಿಗೆ ತತ್ತರಿಸಿದ ರಾಜಸ್ಥಾನ​ ರಾಯಲ್ಸ್​ ರಿಯಾನ್​ ಪರಾಗ್​ ಅರ್ಧಶತಕದ ನೆರವಿನಿಂದ ಕೇವಲ 116 ರನ್​ಗಳ ಟಾರ್ಗೆಟ್​ ನೀಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಆರ್​ಆರ್​ ಪವರ್​ ಪ್ಲೇನಲ್ಲೇ ತಂಡದ ಪ್ರಮುಖ ಆಟಗಾರರಾದ ರಹಾನೆ(2), ಲೆವಿಂಗ್​ಸ್ಟೋನ್(14)​ ಹಾಗೂ ಲಾಮ್ರೋರ್(8)​ ವಿಕೆಟ್​ ಪಡೆದು ಇಶಾಂತ್​ ಶರ್ಮಾ ಆಘಾತ ನೀಡಿದರು. ಸಂಜು ಸಾಮ್ಸನ್(5)​ ಇಲ್ಲದ ರನ್​ ಕದಿಯಲು ಹೋಗಿ ರನ್​ಔಟ್​ ಆಗುವ ಮೂಲಕ ರಾಜಸ್ಥಾನದ ಪ್ಲೇ ಆಫ್​ ಕನಸನ್ನು ನುಚ್ಚುನೂರು ಮಾಡಿದರು.

ಈ ಹಂತದಲ್ಲಿ ಒಂದಾದ ಗೋಪಾಲ್(12)​ ಹಾಗೂ ರಿಯಾನ್​ ಪರಾಗ್​ 5ನೇ ವಿಕೆಟ್​ಗೆ 27 ರನ್​ಗಳ ಜೊತೆಯಾಟ ನೀಡಿದರು. ಗೋಪಾಲ್ ಮಿಶ್ರಾ ಬೌಲಿಂಗ್​ನಲ್ಲಿ ಔಟಾಗುತ್ತಿದ್ದಂತೆ ಮತ್ತೆ ಪೆವಿಲಿಯನ್​ ಪರೇಡ್​ ನಡೆಸಿದ ಆರ್​ಆರ್​ ತಂಡದ ಸ್ಟುವರ್ಟ್​ ಬಿನ್ನಿ(0), ಕೆ. ಗೌತಮ್​ (6), ಇಶ್​ ಸೋಧಿ (6) ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಏಕಾಂಗಿ ಹೋರಾಟ ನಡೆಸಿದ ರಿಯಾನ್​ ಪರಾಗ್​ 49 ಎಸೆತಗಳಲ್ಲಿ 50 ರನ್​ ಗಳಿಸಿ ತಂಡದ ಮೊತ್ತ 100 ರನ್ ​ಗಡಿ ದಾಟುವಂತೆ ಮಾಡಿದರು.

ಡೆಲ್ಲಿ ಪರ ಮಾರಕ ದಾಳಿ ನಡೆಸಿದ ಇಶಾಂತ್​ ಶರ್ಮಾ 3, ಅಮಿತ್​ ಮಿಶ್ರಾ 3, ಟ್ರೆಂಟ್​ ಬೌಲ್ಟ್​ 2 ವಿಕೆಟ್​ ಪಡೆದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.