ಕೊಪ್ಪಳ: ಕಿಮ್ಸ್ ಕೊರೊನಾ ಪರೀಕ್ಷಾ ಲ್ಯಾಬ್ ನಲ್ಲಿ ಇಂದು ಪರೀಕ್ಷಿಸಲಾದ ಸ್ಯಾಂಪಲ್ ಗಳು ನೆಗಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಇಂದು ಕಿಮ್ಸ್ ನಲ್ಲಿರುವ ಆರ್ ಟಿಪಿಸಿಆರ್ ಲ್ಯಾಬ್ ನಲ್ಲಿ 55 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಎಲ್ಲಾ 55 ಮಾದರಿಗಳು ನೆಗಟಿವ್ ಬಂದಿವೆ. ಕಿಮ್ಸ್ ಪರೀಕ್ಷಾ ಲ್ಯಾಬ್ಗೆ ನಾಳೆ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಜಿಲ್ಲೆಯಲ್ಲಿ ಈವರೆಗೆ 4696 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ 4527 ಜನರ ವರದಿ ನೆಗಟಿವ್ ಬಂದಿದ್ದು, ನಾಲ್ವರ ವರದಿ ಪಾಸಿಟಿವ್ ಬಂದಿದೆ. ಸೋಂಕಿತ ನಾಲ್ವರ ಪೈಕಿ ಮೂರು ಜನರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೊಬ್ಬ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಇನ್ನೂ 165 ಜನರ ಲ್ಯಾಬ್ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.