ETV Bharat / briefs

ಪರಿಸರ ದಿನಾಚರಣೆ.. ರಸ್ತೆಯಲ್ಲಿದ್ದ ಪ್ಲಾಸ್ಟಿಕ್, ಕಸ ಆರಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ.. - ಜಿಲ್ಲಾಧಿಕಾರಿ ಕೆ.ಎ. ದಯಾನಂದ

ಪರಿಸರ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಪರಿಸರ ಪ್ರೇಮಿಗಳು ಭಾಗಿಯಾಗಿದ್ಧರು. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗುವಂತೆ ಮಾಡಿ ಗಮನ ಸೆಳೆದಿದ್ದ ಜಿಲ್ಲಾಧಿಕಾರಿಗಳು ಇಂದು ಕಸ ತೆಗೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

ರಸ್ತೆಯಲ್ಲಿ ಪ್ಲಾಸ್ಟಿಕ್, ಕಸ ಆರಿಸಿ ಮಾದರಿಯಾದ ಶಿವಮೊಗ್ಗ ಜಿಲ್ಲಾಧಿಕಾರಿ
author img

By

Published : Jun 5, 2019, 8:18 PM IST

ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಎ ದಯಾನಂದ ಇವತ್ತು ಸಿಂಪಲಾಗಿದ್ದರು. ಸಾಮಾನ್ಯರಂತೆ ರಸ್ತೆಗಳಲ್ಲಿ ಬಿದ್ದಿದ್ದ ಕಸ

ಎತ್ತಿ ಹಾಕಿ ಮಾದರಿಯಾದರು.

ರಸ್ತೆಯಲ್ಲಿದ್ದ ಪ್ಲಾಸ್ಟಿಕ್, ಕಸ ಆರಿಸಿ ಮಾದರಿಯಾದ ಶಿವಮೊಗ್ಗ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿಗಳಾದ ಕೆ ಎ ದಯಾನಂದ ಅವರು ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದಲ್ಲಿ‌ ಸ್ವಚ್ಷತಾ ಅಭಿಯಾನ ನಡೆಸಿದರು. ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು.

ಪರಿಸರ ಜಾಥಾದಲ್ಲಿ ತಾವೊಬ್ಬ ಡಿಸಿ ಅನ್ನೋದನ್ನು ಮರೆತು ದಯಾನಂದ ಅವರು ರಸ್ತೆಯಲ್ಲಿ ಬಿದ್ದಿದ್ದ ಕಸವನ್ನು‌ ಎತ್ತಿದರು. ಇದನ್ನ ಕಂಡು ಇತರರೂ ಕಸ ಎತ್ತಿ ಹಾಕಿ ಸ್ವಚ್ಛತೆ ಅಭಿಯಾನ ನಡೆಸಿದರು. ಇದಕ್ಕೂ ಮೊದಲು ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿ, ಪರಿಸರ ಸಂರಕ್ಷಣೆ ಮಾಡುವ ಕುರಿತು ಎಲ್ಲರಿಂದಲೂ ಪ್ರಮಾಣ ಮಾಡಿಸಿದರು. ಪರಿಸರದ ಕಲುಷಿತ ಹಾಗೂ ಅರಣ್ಯ ನಾಶದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹೇಗೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವುದನ್ನು ತಿಳಿಸಿದರು. ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಪರಿಸರ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ಧರು.

Intro:ರಸ್ತೆ ರಸ್ತೆಯಲ್ಲಿ ತಿರುಗಿ ಪ್ಲಾಸ್ಟಿಕ್, ಕಸ ಆರಿಸಿ ಮಾದರಿಯಾದ ಶಿವಮೊಗ್ಗ ಜಿಲ್ಲಾಧಿಕಾರಿ.

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾಧಿಕಾರಿ ಇಂದು ಕೊಟ್ , ಶೂಟ್ ಹಾಕದೆ ಸಾಮಾನ್ಯ ಮನುಷ್ಯರಂತೆ ರಸ್ತೆ, ರಸ್ತೆಗಳೆಲ್ಲಾ ತಿರುಗಿದರು. ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ಕಸವನ್ನು ಆಯ್ದರು. ರಸ್ತೆಯಲ್ಲಿ ಸಿಕ್ಕ‌ ಕಸವನ್ನು ಎತ್ತಿ ಚೀಲಕ್ಕೆ ತುಂಬುತ್ತಿದ್ದರು. ಡಿಸಿ ರವರು ಕಸ ಆರಿಸುತ್ತಿದ್ದದನ್ನು ಕಂಡು ಜನ ಅಚ್ಚರಿಯಿಂದ ನೋಡುತ್ತಿದ್ದರು. ಜನ ನಿಂತು ನೋಡಿದ್ರು ಸಹ ಡಿಸಿ ರವರು ಯಾವುದೇ ಮುಜುಗರಕ್ಕೆ ಒಳಗಾಗದೆ ತಾವು ಕಸವನ್ನು ಆರಿಸುತ್ತಾ ಮುಂದೆ ಸಾಗುತ್ತಿದ್ದರು. ಅರೇ ಇದೆನಾಯ್ತು ಡಿಸಿರವರಿಗೆ ಅಂದು ಕೊಂಡ್ರೆ ಅದು ನಿಮ್ಮ ತಪ್ಪು. ಜಿಲ್ಲಾಧಿಕಾರಿಗಳಾದ ಕೆ.ಎ. ದಯಾನಂದ ರವರು ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದಲ್ಲಿ‌ ಸ್ವಚ್ಷತಾ ಅಭಿಯಾನ ನಡೆಸಿದರು. ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ನಗದರ ಕುವೆಂಪು‌ ರಂಗಮಂದಿರದಿಂದ ಪರಿಸರ ದಿನಾಚರಣೆಯ ಜಾಥ ಪ್ರಾರಂಭವಾಯಿತು. ಜಾಥ ನಗರದ ಪ್ರಮುಖ ರಸ್ತೆಗಳಲ್ಲಿ‌ ಸಾಗಿತು. ಪರಿಸರ ಜಾಥ ಕೇವಲ ಘೋಷಣೆ, ಮೆರವಣಿಗೆಗೆ ಸಿಮೀತವಾಗದೆ ಜಾಥದಲ್ಲಿ ಭಾಗಿಯಾದವರು ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಕಸವನ್ನು ಆಯುತ್ತಾ ಸಾಗಿತು. ಜಾಥದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಕೆ.ಎ.ದಯಾನಂದ ರವರು ಸಹ ತಾವು ಡಿಸಿ ಎನ್ನುವುದನ್ನು ಮರೆತು ರಸ್ತೆಯಲ್ಲಿ ಬಿದ್ದಿದ್ದ ಕಸವನ್ನು‌ ಎತ್ತಿದರು. ಡಿಸಿರವರೆ ಕಸವನ್ನು ತೆಗೆಯುವುದನ್ನು ನೋಡಿದ ಜಾಥದಲ್ಲಿ ಭಾಗಿಯಾಗಿದ್ದವರೆಲ್ಲಾ ಕಸ ಎತ್ತಿ ಪರಿಸರ ಸ್ವಚ್ಚತೆ ಮಾಡಿದರು.Body:ಇದಕ್ಕೂ ಮೊದಲು ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಪರಿಸರವನ್ನು ಹೇಗೆ ಉಳಿಸಬೇಕು ಎನ್ನುವುದರಕ್ಕಿಂತ ನಾವೆಲ್ಲಾ ಸೇರಿ ಪರಿಸರವನ್ನು ಹೇಗೆ ಹಾಳು ಮಾಡಿದ್ದೆವೆ, ಇದರಿಂದ ಪರಿಸರದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಮಾತನಾಡಿದರು. ಈ ವೇಳೆ ಪರಿಸರ ಸಂರಕ್ಷಣೆಯನ್ನು ಮಾಡುವ ಕುರಿತು ಎಲ್ಲಾರಿಂದ ಪ್ರಮಾಣ ಮಾಡಿಸಿದರು. ಪರಿಸರದ ಕಲುಷಿತ ಹಾಗೂ ಅರಣ್ಯ ನಾಶದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹೇಗೆ ಮಳೆಯ ಪ್ರಮಾಣ ಕಡಿಮೆಯಾಗಯತ್ತಿದೆ ಎನ್ನುವುದನ್ನು ತಿಳಿಸಿದರುConclusion: ಪರಿಸರ ಜಾಥ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಪರಿಸರಾಸ್ತಕರು ಭಾಗಿಯಾಗಿದ್ಧರು. ಲೋಕಸಭ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗುವಂತೆ ಮಾಡಿ ಗಮನ ಸೆಳೆದಿದ್ದ ಜಿಲ್ಲಾಧಿಕಾರಿಗಳು ಇಂದು ಕಸ ತೆಗೆದು ಎಲ್ಲಾರಿಗೂ ಮಾದರಿಯಾಗಿದ್ದಾರೆ ಎಂದ್ರೆ ತಪ್ಪಾಗಲಾರದು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.