ಚಿಕ್ಕಮಗಳೂರು: ನಗರದ ಜೈಲಿನ 15 ಕೈದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 65 ವರ್ಷದ ಕೈದಿಯೊಬ್ಬ ಕೊರೊನಾದಿಂದ ಸಾವನ್ನಪ್ಪಿದ್ದು, ಈ ವೇಳೆ 35 ಕೈದಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 15 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಚಿಕ್ಕಮಗಳೂರು ಜೈಲಿನಲ್ಲಿ ಒಟ್ಟು 260 ವಿಚಾರಣಾಧೀನ ಕೈದಿಗಳಿದ್ದಾರೆ.
ಸಾಮಾಜಿಕ ಅಂತರ ಕಾಪಾಡುವಂತೆ ಜಿಲ್ಲಾಧಿಕಾರಿ ರಮೇಶ್ ಆದೇಶ ಮಾಡಿದ್ದು, ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಬಂದೀಖಾನೆಯಲ್ಲೂ ಕೊರೊನಾ ಆರ್ಭಟಿಸಲು ಪ್ರಾರಂಭ ಮಾಡಿದೆ.