ಕೋಲ್ಕತ್ತಾ : ದಕ್ಷಿಣ ಕೋಲ್ಕತ್ತಾದ ಭಬಾನಿಪುರದ ಮತದಾನ ಕೇಂದ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ ಚಲಾಯಿಸಿದ್ದಾರೆ.
ಇಂದು ಮಧ್ಯಾಹ್ನ 3.50 ರ ಸುಮಾರಿಗೆ ಮಿತ್ರ ಇನ್ಸ್ಟಿಟ್ಯೂಷನ್ ಶಾಲೆಯಲ್ಲಿನ ಮತಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದರು.
ಮಮತಾ ಭಬಾನಿಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಈ ಬಾರಿ ಚುನಾವಣೆಯಲ್ಲಿ ಪುರ್ಬಾ ಮದಿನಿಪುರ ಜಿಲ್ಲೆಯ ನಂದಿಗ್ರಾಮದಿಂದ ಬಿಜೆಪಿಯ ಸುವೆಂದು ಅಧಿಕಾರಿ ಮುಂದೆ ಸ್ಪರ್ಧಿಸುತ್ತಿದ್ಧಾರೆ.
ಇನ್ನು ಮುಖ್ಯಮಂತ್ರಿಯ ಸೋದರಳಿಯ ಟಿಎಂಸಿ ಹಿರಿಯ ಮುಖಂಡ ಅಭಿಷೇಕ್ ಬ್ಯಾನರ್ಜಿ ಕೂಡ ಅದೇ ಬೂತ್‌ನಲ್ಲಿ ಮತ ಚಲಾಯಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಏಳನೇ ಹಂತದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಭಬಾನಿಪುರ ಮತಕ್ಷೇತ್ರವಾಗಿದೆ
ಮಾರ್ಚ್ 27 ರಂದು ಪ್ರಾರಂಭವಾದ, ಎಂಟು ಹಂತಗಳ 294 ಸದಸ್ಯರ ವಿಧಾನಸಭೆಗೆ ಮತದಾನ ನಡೆಯುತ್ತಿದೆ. ಮೇ 2 ರಂದು ಮತಗಳನ್ನು ಎಣಿಸಲಾಗುವುದು.