ETV Bharat / briefs

ಸೋಂಕಿತರ ಡಿಸ್ಚಾರ್ಜ್​ಗೆ ಹೊಸ ಪ್ರೋಟೋಕಾಲ್ ಅನುಸರಿಸಿ: ಸಿಎಂ ಸೂಚನೆ

author img

By

Published : May 25, 2021, 7:50 PM IST

ಅಧಿಕೃತ ನಿವಾಸ ಕಾವೇರಿಯಲ್ಲಿ ಕೋವಿಡ್ ಉಸ್ತುವಾರಿ ಸಚಿವರಾದ ಡಾ.ಅಶ್ವತ್ಥ ನಾರಾಯಣ್, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಜಗದೀಶ್ ಶೆಟ್ಟರ್,ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು.

CM Bsy
CM Bsy

ಬೆಂಗಳೂರು: ಇನ್ಮುಂದೆ ಕೋವಿಡ್ ಸೋಂಕಿನಿಂದ ಗುಣಮುಖರಾಗುವವರನ್ನು ಇಎನ್‌ಟಿ ತಜ್ಞರ ಅಭಿಪ್ರಾಯ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬೇಕು ಎನ್ನುವ ಹೊಸ ಡಿಸ್ಚಾರ್ಜ್ ಪ್ರೊಟೋಕಾಲ್ ಜಾರಿಗೆ ತಂದಿದ್ದು, ಹೊಸ ಪ್ರೊಟೋಕಾಲ್ ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಅಧಿಕೃತ ನಿವಾಸ ಕಾವೇರಿಯಲ್ಲಿ ಕೋವಿಡ್ ಉಸ್ತುವಾರಿ ಸಚಿವರಾದ ಡಾ.ಅಶ್ವತ್ಥ ನಾರಾಯಣ್, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಜಗದೀಶ್ ಶೆಟ್ಟರ್,ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗು ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು.

ನಗರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ‌ ಇಳಿಕೆ ಕಂಡು ಬರುತ್ತಿದ್ದು, ಇದೇ ರೀತಿ ಕಠಿಣ ನಿಯಮಗಳನ್ನು ತಪ್ಪದೇ ಜಾರಿಗೆ ತರಬೇಕು. ಹಳ್ಳಿಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿರುವುದು ಹಳ್ಳಿಗಳ ಮೇಲೆ ತೀವ್ರ ನಿಗಾ ಇಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆಲ ಗ್ರಾಮಗಳ ಜನ ಕೊರೊನಾ ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದು ಕೇಳಿ ಬರುತ್ತಿದ್ದು, ಅವರ ಮನವೊಲಿಸಿ ಟೆಸ್ಟಿಂಗ್ ಮಾಡಬೇಕು. ಗ್ರಾಮಗಳಲ್ಲಿ ಹೋಮ್ ಐಸೋಲೇಷನ್​ಗೆ ಅವಕಾಶ ನೀಡದೇ ಸೊಂಕಿತರನ್ನು ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಬೇಕು ಎಂದು ಸಿಎಂ ಸೂಚಿಸಿದರು.

ಬ್ಲ್ಯಾಕ್ ಫಂಗಸ್​ಗೆ ಈಗಾಗಲೇ ‌ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ‌ ಉಚಿತ ಚಿಕಿತ್ಸೆ ನೀಡಲು ತೀರ್ಮಾನಿಸಿದ್ದು, ಅದಕ್ಕೆ ಬೇಕಾಗುವ ಲಸಿಕೆ‌ಯನ್ನು‌ ಕೊಂಡುಕೊಳ್ಳಬೇಕು. ಬ್ಲಾಕ್ ಫಂಗಸ್ ಯಾವ ರೀತಿ ಬರುತ್ತದೆ ಎಂಬ ಅನುಭವದ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಸೋಂಕಿತನ ಡಿಸ್ಚಾರ್ಜ್ ಮಾಡುವ ಮೊದಲೆ ರೋಗ ಬರುವುದನ್ನು ತಡೆಗಟ್ಟಲು ಡಿಸ್ಚಾರ್ಜ್ ಪ್ರೊಟೋಕಾಲ್ ಮಾಡಿ ಅದರಂತೆ ಕ್ರಮವಹಿಸಲು ಸಿಎಂ ಸೂಚಿಸಿದರು.

ಇಎನ್​ಟಿ ತಜ್ಞರ ಅಭಿಪ್ರಾಯದ ಜೊತೆ ಸೇರಿ ಡಿಸ್ಚಾರ್ಜ್ ಪ್ರೊಟೋಕಾಲ್ ಪಾಲನೆ‌ ಮಾಡಬೇಕು. ಇನ್ನು‌ ಮುಂದೆ ಕೊರೊನಾ ಸೋಂಕಿತರಿಗೆ ಸಂಬಂಧಪಟ್ಟಂತೆ ಹೊಸ ಡಿಸ್ಚಾರ್ಜ್ ಪ್ರೊಟೋಕಾಲ್ ಪಾಲನೆ‌ ಮಾಡಲು ಆಸ್ಪತ್ರೆಗಳಿಗೆ ತಿಳಿಸಬೇಕು ಎಂದು ಸೂಚಿಸಿದರು.

ಹೊಸ ಪ್ರೊಟೋಕಾಲ್ ಎಲ್ಲ ಕೊರೊನಾ ಸೋಂಕಿತರಿಗೆ ಅನ್ವಯವಾಗುವುದಿಲ್ಲ. ಕೊರೊನಾ ಜೊತೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದವರು, ಸ್ಟಿರಾಯ್ಡ್, ಐಸಿಯು, ವೆಂಟಿಲೇಟರ್ ಬಳಸಿದವರಿಗೆ ಮಾತ್ರ ಅನ್ವಯವಾಗಲಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.