ಶಿಕಾರ್ಪುರ್(ಉತ್ತರಪ್ರದೇಶ): ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತನೋರ್ವ ತನ್ನ ಪಕ್ಷಕ್ಕೆ ವೋಟ್ ಹಾಕುವ ಬದಲು ತಪ್ಪಾಗಿ ಬಿಜೆಪಿಗೆ ಮತದಾನ ಮಾಡಿದ್ದರಿಂದ ಆಕ್ರೋಶದಲ್ಲಿ ತನ್ನ ಬೆರಳನ್ನೇ ಕತ್ತರಿಸಿಕೊಂಡ ಘಟನೆ ಉತ್ತರಪ್ರದೇಶಲ್ಲಿ ನಡೆದಿದೆ.
ನಿನ್ನೆ ಉತ್ತರಪ್ರದೇಶದಲ್ಲಿ ಲೋಕಸಭೆಯ 2ನೇ ಹಂತದ ವೋಟಿಂಗ್ ನಡೆಯಿತು. ಈ ವೇಳೆ ಬುಲಂದ್ಶಹರ್ನ ಶಿಕಾರ್ಪುರ್ ಮತಗಟ್ಟೆಗೆ ವೋಟ್ ಮಾಡಲು ಬಂದ 25 ವರ್ಷದ ಪವನ್ ಕುಮಾರ್, ಬೂತ್ನಲ್ಲಿ ತಪ್ಪಾಗಿ ಬಿಎಸ್ಪಿ ಬದಲು ಬಿಜೆಪಿಗೆ ವೋಟ್ ಮಾಡಿದ್ದಾನೆ. ತಾನು ಮಾಡಿರುವ ತಪ್ಪಿನಿಂದ ಕುಪಿತಗೊಂಡ ಆತ ಮನೆಗೆ ತೆರಳಿ ತಕ್ಷಣ ಚಾಕುವಿನಿಂದ ಬೆರಳು ಕತ್ತರಿಸಿಕೊಂಡಿದ್ದಾನೆ. ಇದೀಗ ಆ ವಿಡಿಯೋ ಟ್ವಿಟರ್ನಲ್ಲಿ ವೈಲರ್ ಆಗಿದೆ.
ವಿಡಿಯೋದಲ್ಲಿ ತಾನು ಮಾಡಿರುವ ತಪ್ಪಿಗಾಗಿ ಈ ಶಿಕ್ಷೆ ತೆಗೆದುಕೊಂಡಿರುವುದಾಗಿ ಹೇಳಿದ್ದಾನೆ. ಪವನ್ ಕುಮಾರ್ ಬುಲಂದ್ಶಹರ್ನ ಅಬ್ದುಲಾಪುರ್ ಪ್ರದೇಶದ ನಿವಾಸಿಯಾಗಿದ್ದಾನೆ. ಬುಲಂದ್ಶಹರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭೋಲಾ ಸಿಂಗ್ ಹಾಗೂ ಬಿಎಸ್ಪಿ ಅಭ್ಯರ್ಥಿ ಯೋಗೇಶ್ ವರ್ಮಾ ನಡುವೆ ಸ್ಪರ್ಧೆ ಏರ್ಪಟ್ಟಿದೆ.