ನವದೆಹಲಿ: ನೌಕರರಿಗೆ ಇದೇ ಮೊದಲ ಬಾರಿಗೆ ಸಂಬಳ ನೀಡದೆ ಸುದ್ದಿಯಾಗಿದ್ದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ನೆಟ್ವರ್ಕ್ ಬಿಎಸ್ಎನ್ಎಲ್ ಮೊದಲ ಹಣಕಾಸು ವರ್ಷದಲ್ಲಿ ಭಾರಿ ನಷ್ಟ ಅನುಭವಿಸಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ.
ಮಾರ್ಚ್ 2019ರ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಬಿಎಸ್ಎನ್ಎಲ್ 7,500 ಕೋಟಿ ನಷ್ಟ ಅನುಭವಿಸಲಿದೆ ಎನ್ನಲಾಗಿದೆ. ಮಾರ್ಚ್ 2018ರ ಹಣಕಾಸು ವರ್ಷದಲ್ಲಿ ಬಿಎಸ್ಎನ್ಎಲ್ 8,000 ಕೋಟಿ ನಷ್ಟ ಹೊಂದಿತ್ತು.
ಇವೆಲ್ಲದರ ಮಧ್ಯೆ ಕಂಪೆನಿ ಇದೇ ಮೊದಲ ಬಾರಿಗೆ ಉದ್ಯಮ ವ್ಯವಹಾರದಲ್ಲಿ ಶೇ.50ರಷ್ಟು ಹೆಚ್ಚಳ ಹೊಂದಿದೆ. ಬಿಎಸ್ಎಸ್ಎಲ್ ಮಾರ್ಕೆಟ್ ಷೇರುಗಳು ಮಾರ್ಚ್ 2018ರಿಂದ ಜನವರಿ 2019ರ ಅವಧಿಯಲ್ಲಿ ಶೇ.9.44ರಿಂದ ಶೇ.9.76ಕ್ಕೆ ಹೆಚ್ಚಳವಾಗಿದೆ.
ಪ್ರತಿಸ್ಪರ್ಧಿ ನೆಟ್ವರ್ಕ್ಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಬಿಎಸ್ಎನ್ಎಲ್ ಕಳೆದ ಕೆಲ ವರ್ಷಗಳಿಂದ ಹಣಕಾಸು ವಿಚಾರದಲ್ಲಿ ಹಿನ್ನಡೆ ಅನುಭವಿಸಿದೆ.