ETV Bharat / briefs

ಒಂಟೆಗಳೊಂದಿಗೆ ಯೋಗ ಪ್ರದರ್ಶಿಸಿದ ಗಡಿ ಭದ್ರತಾ ಪಡೆ ಯೋಧರು - ಗಡಿ ಭದ್ರತಾ ಪಡೆಯ ಸೈನಿಕರಿಂದ ಯೋಗ

ಬಿಎಸ್‌ಎಫ್ ಸಹಾಯಕ ತರಬೇತಿ ಕೇಂದ್ರದ ಸೈನಿಕರು ತಮ್ಮ ಒಂಟೆಗಳ ಜೊತೆಗೆ ಯೋಗ ಪ್ರದರ್ಶಿಸಿದ್ದು, ಒಂಟೆಗಳು ಸಹ ತಮ್ಮ ಬೋಧಕರೊಂದಿಗೆ ಯೋಗ ವ್ಯಾಯಾಮ ಪ್ರದರ್ಶಿಸಿದವು.

yoga
yoga
author img

By

Published : Jun 21, 2021, 9:01 PM IST

ಜೋಧ್‌ಪುರ (ರಾಜಸ್ಥಾನ): ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಬಿಎಸ್‌ಎಫ್ ಸಹಾಯಕ ತರಬೇತಿ ಕೇಂದ್ರದ ಸೈನಿಕರು ತಮ್ಮ ಒಂಟೆಗಳ ಜೊತೆಗೆ ಯೋಗ ಪ್ರದರ್ಶಿಸಿದರು. ಜವಾನರು ಒಂಟೆಗಳ ಮೇಲೆ ಹಲವಾರು ಯೋಗ ವ್ಯಾಯಾಮಗಳನ್ನು ಮಾಡಿ ಶಕ್ತಿ ಮತ್ತು ಏಕಾಗ್ರತೆ ಪ್ರದರ್ಶಿಸಿದರು. ಒಂಟೆಗಳು ಸಹ ತಮ್ಮ ಬೋಧಕರೊಂದಿಗೆ ಯೋಗ ವ್ಯಾಯಾಮವನ್ನು ಪ್ರದರ್ಶಿಸಿದವು.

ಯೋಗ ನಮ್ಮ ಹಳೆಯ ಸಂಪ್ರದಾಯವಾಗಿದ್ದು, ಪ್ರಧಾನಿ ಮೋದಿ ಇದನ್ನು 2018ರಲ್ಲಿ 'ವಿಶ್ವ ಯೋಗ ದಿನ'ದ ಮೂಲಕ ಜಗತ್ತಿಗೆ ಪ್ರಸ್ತುತಪಡಿಸಿದರು ಎಂದು ಬಿಎಸ್‌ಎಫ್ ಸಹಾಯಕ ತರಬೇತಿ ಕೇಂದ್ರದ ಐಜಿ ಮದನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಯೋಗವು ಬಿಎಸ್ಎಫ್ ಜವಾನರ ದೈನಂದಿನ ದಿನಚರಿಯ ಒಂದು ಭಾಗವಾಗಿದೆ. ಸೈನಿಕರಿಗೆ ದೈಹಿಕ ತರಬೇತಿಯ ಸಮಯದಲ್ಲಿ ಯೋಗವನ್ನೂ ಸೇರಿಸಲಾಗಿದೆ ಎಂದು ರಾಥೋಡ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.