ಶಿವಮೊಗ್ಗ: ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಎಸ್. ಶಂಕರಮೂರ್ತಿ, ಮೋದಿ ಸರಕಾರದಿಂದ ರೈತರಿಗೆ ಪ್ರತಿ ವರ್ಷ 6,000 ರೂ. ನೀಡುವ ಮಹತ್ವದ ಯೋಜನೆಗೆ ಚಾಲನೆ ನೀಡಿದರು.
ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷ ದಾಟಿದ ರೈತರಿಗೆ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಪಿಂಚಣಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಮೋದಿ ಸರ್ಕಾರದ ಪ್ರಮುಖ ಸಾಧನೆ. ಕರ್ನಾಟಕದಲ್ಲಿ ಬಿಜೆಪಿಯ ಬಾವುಟ ಹಾರುತ್ತಿದೆ ಎಂದರೆ ಅದಕ್ಕೆ ಕಾರಣ ಬಿ. ಎಸ್. ಯಡಿಯೂರಪ್ಪನವರು ಎಂದರು.
ಪಕ್ಷವನ್ನು ಇನ್ನಷ್ಟು ಸಂಘಟಿಸುವ ಹಾಗೂ ಸಾಮಾನ್ಯ ಜನರ ಮನಸ್ಸನ್ನು ಗೆಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ, ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ. ಲೋಕಸಭಾ ಚುನಾವಣಾ ಗೆಲುವಿನಿಂದ ಸಂತೋಷ ಆಗಿದೆ, ಆದರೆ ಗೆಲುವಿನಲ್ಲಿ ಮೈ ಮರೆಯಬಾರದು ಎಂದು ಎಚ್ಚರಿಸಿದ ಅವರು, ಭವ್ಯ ಭಾರತದ ನಿರ್ಮಾಣ ದೆಹಲಿಯಲ್ಲಿ ಆಗುವುದಲ್ಲ, ಅದು ನಮ್ಮ ಹಳ್ಳಿಯಿಂದ ಪ್ರಾರಂಭವಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.