ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ಪುರಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ರಾಷ್ಟ್ರೀಯ ಪಕ್ಷಗಳ ಜಿಲ್ಲಾ ನಾಯಕರ ಗಲಾಟೆಯೂ ಹೆಚ್ಚಾಗುತ್ತಿದೆ. ಪುರಸಭೆಯ ಚುನಾವಣೆಯ ವಾರ್ಡ್ ನಂಬರ್ 14ಕ್ಕೆ ಮಹಿಳಾ ಮೀಸಲಾತಿ ಬಂದ ಕಾರಣ ತಾಲೂಕು ಬಿಜೆಪಿ ಅಧ್ಯಕ್ಷ ಕೊಳಗಿ ರೇವಣಪ್ಪ ಸ್ಥಳೀಯ ಮಹಿಳೆಯರಿಗೆ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಪರಿಷತ್ ಮಾಜಿ ಸದಸ್ಯ ಶಾಂತವೀರಪ್ಪ ಗೌಡ, ಕೊಳಗಿ ರೇವಣ್ಣಪ್ಪನವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ತೆಗಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮೌನ ಪ್ರತಿಭಟನೆ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ ಅವರಿಗೆ ಕಾಂಗ್ರೆಸ್ ಸದಸ್ಯ ಹೆಚ್.ಎಸ್.ರವೀಂದ್ರ(ರಾಘು)ಅವರು ಮನಬಂದಂತೆ ಬೈಯ್ದಿದ್ದಾರೆ. ಪ್ರತಿಭಟನಾ ಮೆರವಣಿಗೆ ವೇಳೆ ಹೊಯ್ಸಳ ವೃತ್ತದ ಬಳಿ ಗಿರ್ಜಿ ರಾಜಶೇಖರ್ ಅವರ ಮೇಲೆ ಕಾಂಗ್ರೆಸ್ ಪುರಸಭೆ ಸದಸ್ಯ ನಾಗರಾಜ್ ಗೌಡ, ಚಂದ್ರೆಗೌಡ, ಬೆಂಕಿ ಮಾಲತೇಶ, ರಾಜಶೇಖರ ಗೌಡ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.
ಗುರುಮೂರ್ತಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ ಮುಂದೆ ಕಾಂಗ್ರೆಸ್ ಗೂಂಡಾಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.