ETV Bharat / briefs

'ಕೋವಾಕ್ಸಿನ್' ತುರ್ತು ಬಳಕೆ: ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪಾಸ್​ ಆಗುತ್ತಾ ಬಯೋಟೆಕ್​?

'ಕೋವಾಕ್ಸಿನ್' ನ ತುರ್ತು ಬಳಕೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಇಂದು ಸಭೆ ನಡೆಯುತ್ತಿದೆ. ಲಸಿಕೆ ತಯಾರಕರಿಗೆ ಲಸಿಕೆಯ ಗುಣಮಟ್ಟದ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಪ್ರಸ್ತುತಪಡಿಸಲು ಅವಕಾಶವಿದೆ.

covaxin
covaxin
author img

By

Published : Jun 23, 2021, 4:02 PM IST

ಹೈದರಾಬಾದ್ (ತೆಲಂಗಾಣ): 'ಕೋವಾಕ್ಸಿನ್' ನ ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಎಕ್ಸ್​ಪ್ರೆಶನ್ ಆಫ್ ಇಂಟೆರೆಸ್ಟ್ (ಇಒಐ) ಪ್ರಸ್ತಾಪ ಅಂಗೀಕರಿಸಿದ್ದು, ಈ ನಿಟ್ಟಿನಲ್ಲಿ ಇಂದು ಸಭೆ ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ, ಈ ಸಭೆಯಲ್ಲಿ ಉತ್ಪನ್ನವನ್ನು ವಿವರವಾಗಿ ಪರಿಶೀಲಿಸಲಾಗುವುದಿಲ್ಲ, ಆದರೆ, ಲಸಿಕೆ ತಯಾರಕರಿಗೆ ಲಸಿಕೆಯ ಗುಣಮಟ್ಟದ ಬಗ್ಗೆ ಸಂಕ್ಷಿಪ್ತ ವಿವರಣೆ ಪ್ರಸ್ತುತಪಡಿಸಲು ಅವಕಾಶವಿದೆ.

ಮೇ ತಿಂಗಳಲ್ಲಿ, ಭಾರತ್ ಬಯೋಟೆಕ್ ತನ್ನ ಲಸಿಕೆಯ ತುರ್ತು ಬಳಕೆಗಾಗಿ ಜುಲೈ-ಸೆಪ್ಟೆಂಬರ್ ವೇಳೆಗೆ ಡಬ್ಲ್ಯುಎಚ್‌ಒನಿಂದ ಅನುಮೋದನೆ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ತುರ್ತು ಬಳಕೆ ಪಟ್ಟಿ (ಇಯುಎಲ್) ಎನ್ನುವುದು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಹೊಸ ಅಥವಾ ಪರವಾನಗಿ ಪಡೆಯದ ಉತ್ಪನ್ನಗಳನ್ನು ಬಳಕೆಗೆ ಅನುಮೋದಿಸುವ ಪ್ರಕ್ರಿಯೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿವರವಾದ ವರದಿಯನ್ನು ಹಸ್ತಾಂತರಿಸುವ ಮೊದಲು ಸಲಹೆ ಮತ್ತು ಸಮಾಲೋಚನೆಗಾಗಿ ಅವಕಾಶ ನೀಡಲಾಗುತ್ತದೆ ಮತ್ತು ಲಸಿಕೆ ಪರಿಶೀಲಿಸುವ ಡಬ್ಲ್ಯುಎಚ್‌ಒ ಮೌಲ್ಯಮಾಪಕರನ್ನು ಭೇಟಿ ಮಾಡಲು ಅರ್ಜಿದಾರರಿಗೆ ಅವಕಾಶ ಸಿಗುತ್ತದೆ. ಅಲ್ಲದೇ, ಲಸಿಕೆಗಾಗಿ ಇಯುಎಲ್ ಪಡೆಯಲು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಕೇಂದ್ರಕ್ಕೆ 90 ಪ್ರತಿಶತ ದಾಖಲೆಗಳನ್ನು ಡಬ್ಲ್ಯುಎಚ್‌ಒಗೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಔಷಧ ನಿಯಂತ್ರಕದ ಅಡಿಯಲ್ಲಿರುವ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ತನ್ನ ಮೂರನೇ ಹಂತದ ಪ್ರಯೋಗಗಳ ಡೇಟಾವನ್ನು ಮಂಗಳವಾರ ಪರಿಶೀಲಿಸಿದ ನಂತರ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಶೇಕಡಾ 77.8ರಷ್ಟು ಪರಿಣಾಮಕಾರಿತ್ವ ತೋರಿಸಿದೆ ಎಂದು ತಿಳಿದುಬಂದಿದೆ. ಹೈದರಾಬಾದ್ ಮೂಲದ ಕೋವಿಡ್ ಲಸಿಕೆ ಉತ್ಪಾದನಾ ಕಂಪನಿಯು ಕೊವಾಕ್ಸಿನ್‌ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಡೇಟಾವನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ (ಡಿಸಿಜಿಐ) ಸಲ್ಲಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.