ETV Bharat / briefs

ಶುರುವಾಯ್ತು ನಾನ್ ಕೋವಿಡ್ ರೋಗಿಗಳ ಪರದಾಟ, ಬೆಡ್ ಸಿಗದೇ ವೃದ್ದೆ ಹೈರಾಣು

ಖಾಸಗಿ ಆಸ್ಪತ್ರೆಗೆ ಹೋಗುವಂತೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದು, ಮಾಹಿತಿ ಆಧರಿಸಿ ವೃದ್ಧೆ ಅನುಸೂಯಮ್ಮ ಕುಟುಂಬಸ್ಥರು ಪಕ್ಕದ ಬಾಪೂಜಿ ಖಾಸಗಿ ಆಸ್ಪತ್ರೆಗೆ ಬಂದರು‌ ಕೂಡ ಬೆಡ್ ಸಿಗದೇ ಹೈರಾಣಾದರು.

Davanagere
Davanagere
author img

By

Published : Apr 26, 2021, 3:06 PM IST

Updated : Apr 26, 2021, 4:05 PM IST

ದಾವಣಗೆರೆ: ಬೆಡ್ ಸಿಗದೆ ನಾನ್ ಕೋವಿಡ್ ರೋಗಿ ವೃದ್ದೆಯೊಬ್ಬರು ಪರದಾಟ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ದೆ ಅನುಸೂಯಮ್ಮ ಬೆಡ್​ಗಾಗಿ ಪರದಾಡಿದ ಘಟನೆ ನಡೆದಿದೆ. ವೃದ್ಧೆ ಅನುಸೂಯಮ್ಮ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೋಡಿಯಾಲ ಗ್ರಾಮದ ನಿವಾಸಿಯಾಗಿದ್ದು, ಚಿಕಿತ್ಸೆಗೆ ಎಂದು ದಾವಣಗೆರೆ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬೆಡ್ ಖಾಲಿ ಇಲ್ಲ ಎಂದು ಸಿಬ್ಬಂದಿ ವೃದ್ಧೆಯನ್ನು ವಾಪಸ್​​ ಕಳುಹಿಸಿದ್ದಾರೆ.

ಶುರುವಾಯ್ತು ನಾನ್ ಕೋವಿಡ್ ರೋಗಿಗಳ ಪರದಾಟ, ಬೆಡ್ ಸಿಗದೇ ವೃದ್ದೆ ಹೈರಾಣು

ಬಳಿಕ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸಿಬ್ಬಂದಿ ಮಾಹಿತಿ ನೀಡಿದ್ದು, ಮಾಹಿತಿ ಆಧರಿಸಿ ವೃದ್ಧೆ ಅನುಸೂಯಮ್ಮ ಕುಟುಂಬಸ್ಥರು ಪಕ್ಕದ ಬಾಪೂಜಿ ಖಾಸಗಿ ಆಸ್ಪತ್ರೆಗೆ ಬಂದರೂ ಕೂಡಾ ಬೆಡ್ ಸಿಗದೇ ಹೈರಾಣಾದರು. ಬೆಡ್​ಗಾಗಿ ಸುತ್ತಾಟ ನಡೆಸುತ್ತಿರುವ ವೃದ್ದೆಗೆ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದರು ಕೂಡಾ ಆಸ್ಪತ್ರೆ ಸಿಬ್ಬಂದಿ ದಾಖಲು ಮಾಡಿಕೊಳ್ಳದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಸ್ಪತ್ರೆಯಿಂದ ರೆಫರೆನ್ಸ್ ಲೆಟರ್ ಇದ್ದರೂ ಅಡ್ಮಿಷನ್ ಮಾಡಿಸಿಕೊಳ್ಳದ ಖಾಸಗಿ ಆಸ್ಪತ್ರೆ, 20 ಸಾವಿರ ಮುಂಗಡ ಹಣ ಕಟ್ಟಿ ಆಗ ಅಡ್ಮಿಷನ್ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಹಣ ಕಟ್ಟಲಾಗದೇ ಕುಟುಂಬದ ಸದಸ್ಯರು ರೋಗಿ ವೃದ್ದೆಯನ್ನು ವಾಪಸ್​​ ಮನೆಗೆ ಕರೆದುಕೊಂಡು ಹೋಗಿರುವ ಪ್ರಸಂಗ ನಡೆಯಿತು. ಬಡವರಿಗೆ ಸರಿಯಾದ ಚಿಕಿತ್ಸೆ ವ್ಯವಸ್ಥೆ ಇಲ್ಲ ಎಂದು ಹಿಡಿಶಾಪ ಹಾಕಿದರು.

Last Updated : Apr 26, 2021, 4:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.