ETV Bharat / briefs

ಬಿಬಿಎಂಪಿಯಲ್ಲಿ ಕೋಲಾಹಲ ಎಬ್ಬಿಸಿದ ಸೀರೆ, ಲಿಪ್​ಸ್ಟಿಕ್​ ಕಮೆಂಟ್​: ಕಾರ್ಪೊರೇಟರ್ಸ್​ ಮಧ್ಯೆ ವಾಕ್ಸಮರ!

author img

By

Published : May 30, 2019, 7:52 PM IST

ಪಾಲಿಕೆಯ ಕೌನ್ಸಿಲ್​ ಸಭೆಯಲ್ಲಿ ಇಬ್ಬರು ಕಾರ್ಪೋರೇಟರ್​ಗಳ ನಡುವೆ ಆರೋಪ-ಪ್ರತ್ಯಾರೋಪ ನಡೆದಿದೆ. ಮಹಿಳೆಯರ ಅಸಭ್ಯವಾಗಿ ಮಾತನಾಡಲಾಗುತ್ತಿದೆ ಎಂದು ಕಾರ್ಪೊರೇಟರ್​ ಮಮತಾ ವಾಸುದೇವ್ ಆರೋಪಿಸಿದ್ದಾರೆ. ಇದನ್ನು ತಳ್ಳಿಹಾಕಿರುವ ಕಾರ್ಪೊರೇಟರ್​ ವೆಂಕಟೇಶ್​ ಅವರು ಮಮತಾ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ.

ಆರೋಪ, ಪ್ರತ್ಯಾರೋಪ ಮಾಡಿದ ಪಾಲಿಕೆ ಸದಸ್ಯರು

ಬೆಂಗಳೂರು: ಪಾಲಿಕೆ ಕೌನ್ಸಿಲ್ ಸಭೆ ಇಂದು ಆರೋಪ, ಪ್ರತ್ಯಾರೋಪಗಳಿಂದಲೇ ಆರಂಭವಾಗಿ ಕೊನೆಗೆ ಅದರಲ್ಲೇ ಮುಕ್ತಾಯವಾಗಿದೆ.

ಹೆಣ್ಣುಮಕ್ಕಳ ಸೀರೆ, ಲಿಪ್​ಸ್ಟಿಕ್​, ಒಡವೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲಾಗ್ತಿದೆ, ಕಣ್ಸನ್ನೆ ಮಾಡ್ತಾರೆ. ಬಾಯಲ್ಲಿ ಸಹೋದರಿ ಅಂದ್ರೂ ರೌಡಿಗಳನ್ನು ಬಿಟ್ಟು ತುಂಬಾ ನೋವು ಕೊಡುತ್ತಾರೆ ಎಂದು ಯಶವಂತಪುರ ಪಾಲಿಕೆ ಸದಸ್ಯ ಜಿ.ಕೆ. ವೆಂಕಟೇಶ್ ವಿರುದ್ಧ ಜೆ.ಪಿ ಪಾರ್ಕ್ ಕಾರ್ಪೊರೇಟರ್ ಮಮತಾ ವಾಸುದೇವ್ ಆರೋಪಿಸಿದ್ದಾರೆ.

ಆರೋಪ, ಪ್ರತ್ಯಾರೋಪ ಮಾಡಿದ ಪಾಲಿಕೆ ಸದಸ್ಯರು

ಯಶವಂತಪುರ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್ ಹಾಗೂ ಜೆ.ಪಿ. ಪಾರ್ಕ್ ಕಾರ್ಪೊರೇಟರ್ ಮಮತಾ ವಾಸುದೇವ್ ನಡುವಿನ ಹಳೇ ದ್ವೇಷ ಪುನಃ ಮುಂದುವರೆದಿದೆ. ಕೌನ್ಸಿಲ್ ಸಭೆಯನ್ನು ಮುಂದೂಡಿದ ಸಮಯದಲ್ಲಿ ಮಮತಾ ವಾಸುದೇವ್ ಅವರು, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಎಳೆದುಕೊಂಡು ಬಂದು ಹೊಡಿಯೋಣ ಎಂದು ಹೇಳಿದರು ಅಂತಾ ಮಮತಾ ವಿರುದ್ಧ ವೆಂಕಟೇಶ್ ಆರೋಪಿಸಿದ್ದಾರೆ.

ಇಂತಹ ಪದ ಬಳಕೆ ಏಕೆ ಮಾಡಿದಿರಿ ಎಂದು ಮಮತಾರನ್ನ ಕೇಳಿದ್ದಕ್ಕೆ, ಜಿ.ಕೆ. ವೆಂಕಟೇಶ್ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನೋಡ್ತಾರೆ. ಸೀರೆ, ಒಡವೆ, ಲಿಪ್​ಸ್ಟಿಕ್ ಬಗ್ಗೆ ಕಮೆಂಟ್ ಮಾಡ್ತಾರೆ. ಬಾಯಲ್ಲಿ ಸಹೋದರಿ ಅನ್ನುತ್ತಾರೆ. ಆದರೆ ಹೆಣ್ಣುಮಕ್ಕಳಿಗೆ ಗೌರವ ಕೊಡುವುದು ಗೊತ್ತಿಲ್ಲ. ಕೌನ್ಸಿಲ್​ ಸಭೆಗೆ ಹೆಣ್ಣುಮಕ್ಕಳನ್ನ ನೋಡೋಕೆ ಬರ್ತಾರಾ? ಎಂದು ಪ್ರಶ್ನಿಸಿದರು.

ನನ್ನ ಮಾನಕ್ಕಿಂತ ನನ್ನ ಪಕ್ಷದ ನಾಯಕರ ಮಾನ ಮುಖ್ಯ. ಹೀಗಾಗಿ ಪ್ರಧಾನಿ ಮೋದಿ ಕುರಿತು ಏಕವಚನದಲ್ಲಿ ಆರೋಪ ಮಾಡಿದ್ದನ್ನು ಸಹಿಸದೆ ನಾನು ತಾಳ್ಮೆ ಮೀರಿ ಮಾತನಾಡಬೇಕಾಯಿತು ಎಂದು ಮಮತಾ ವಾಸುದೇವ್ ಸ್ಪಷ್ಟನೆ ನೀಡಿದ್ದಾರೆ.

ಕೌನ್ಸಿಲ್ ಸಭೆಯ ಚರ್ಚೆ ವೇಳೆ ಯಲಚೇನಹಳ್ಳಿ ಕಾರ್ಪೊರೇಟರ್ ಬಾಲಕೃಷ್ಣ ಅವರು ವಾರ್ಡ್​ನಲ್ಲಿನ ಕಸದ ಸಮಸ್ಯೆ ಬಗೆಹರಿಯುತ್ತಿಲ್ಲ. ಮೇಯರ್, ಆಯುಕ್ತರು ಆದೇಶ ಮಾಡಿದರೂ ಕಸ ಸಮಸ್ಯೆ ಹಾಗೇ ಇದೆ ಎಂದು ಹೇಳಿದಾಗ ಜಿ.ಕೆ. ವೆಂಕಟೇಶ್ ಮಧ್ಯಪ್ರವೇಶಿಸಿ ಮೋದಿ ಅವರ ಬಳಿ ಫಂಡ್ ಕೇಳಿ ಎಂದು ವ್ಯಂಗ್ಯವಾಡಿದರು. ಇದು ಬಿಜೆಪಿ ಕಾರ್ಪೊರೇಟರ್ಸ್​ ರೊಚ್ಚಿಗೇಳಲು ಕಾರಣವಾಯ್ತು. ಜಿ.ಕೆ. ವೆಂಕಟೇಶ್ ಕ್ಷಮೆ ಕೇಳುವವರೆಗೂ ಸಭೆ ನಡೆಯಲು ಬಿಡುವುದಿಲ್ಲ ಎಂದು ಪ್ರತಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದರು.

ಈ ವೇಳೆ ಮೇಯರ್ ಸಭೆ ಮುಂದೂಡಿದರು. ಇದೇ ಸಮಯದಲ್ಲಿ ವೈಯಕ್ತಿಕ ದ್ವೇಷ ಹೊಂದಿರುವ ಇಬ್ಬರು ಕಾರ್ಪೊರೇಟರ್ಸ್​ ಮಧ್ಯೆ ವಾಕ್ಸಮರ ನಡೆದಿದೆ. ಮಮತಾ ವಾಸುದೇವ್ ಅವರು, ಜಿ.ಕೆ. ವೆಂಕಟೇಶ್ ಅವರಿಗೆ ಅವಾಚ್ಯ ಪದಬಳಕೆ ಮಾಡಿದರು. ಬಳಿಕ ಪ್ರತಿಕ್ರಿಯಿಸಿದ ಮಮತಾ ವಾಸುದೇವ್, ನನ್ನ ವಾರ್ಡ್ ಸಮಸ್ಯೆ ಹೇಳಬಾರದು ಎಂಬ ಕಾರಣಕ್ಕೆ ವಿಷಯ ಬದಲಾಯಿಸಿದ್ದಾರೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯ ಜಿ.ಕೆ. ವೆಂಕಟೇಶ್​ ಅವರು, ಮಮತಾ ವಾಸುದೇವ್ ಅವಾಚ್ಯ ಪದ ಬಳಕೆ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಒಂದು ವರ್ಷ ಪಾಲಿಕೆ ಸದಸ್ಯ ಸ್ಥಾನದಿಂದ ಅಮಾನತಿಗೆ ಆಗ್ರಹಿಸುತ್ತೇನೆ. ಈ ಪದಗಳನ್ನು ಅವರಿಗೆ ಯಾವ ಯುನಿವರ್ಸಿಟಿ ಕಲಿಸಿದೆಯೋ ಗೊತ್ತಿಲ್ಲ. ನನಗೂ ಮಗಳಿದ್ದಾಳೆ, ನಾನು ಆರೀತಿ ಕಮೆಂಟ್ ಮಾಡಿಲ್ಲ. ಇದು ಮಮತಾ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಗರಂ ಆದರು.

ಒಟ್ಟಾರೆ ಈ ಇಬ್ಬರು ಕಾಪೊರ್ರೇಟರ್ಸ್​ ಮಧ್ಯೆದ ಆರೋಪ-ಪ್ರತ್ಯಾರೋಪಗಳು ಏನೇ ಇದ್ದರೂ ಮೇಯರ್​ ಗಂಗಾಂಬಿಕೆಯವರೇ ಬಗೆಹರಿಸುತ್ತಾರಾ ಅಥವಾ ಇದು ಇನ್ನೊಂದು ರೂಪ ಪಡೆದುಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Intro:ಸೀರೆ ಬಗ್ಗೆ, ಲಿಪ್ಸ್ ಟಿಕ್ ಬಗ್ಗೆ ಕಮೆಂಟ್ ಮಾಡ್ತಾರೆ- ಹೆಣ್ಣುಮಕ್ಕಳಿಗೆ ಕಣ್ಸನ್ನೆ ನೋಡ್ತಾರೆ - ಕಾರ್ಪೋರೇಟರ್ ಬಗ್ಗೆ ಮಮತಾ ವಾಸುದೇವ್ ಆರೋಪ

ಬೆಂಗಳೂರು- ಪಾಲಿಕೆ ಕೌನ್ಸಿಲ್ ಸಭೆ ಇಂದು ಆರೋಪ-ಪ್ರತ್ಯಾರೋಪ, ಹೇಳಿಕೆಗಳಿಂದಲೇ ಗದ್ದಲದ ಗೂಡಾಯಿತು.
ಹೆಣ್ಣುಮಕ್ಕಳ ಸೀರೆ, ಲಿಪ್ಸ್ ಟಿಕ್, ಒಡವೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡ್ತಾರೆ, ಕಣ್ಸನ್ನೆ ಮಾಡ್ತಾರೆ. ಬಾಯಲ್ಲಿ ಸಹೋದರಿ ಅಂದ್ರೂ ಅವರ ಜೊತೆಗಿನ ರೌಡಿಗಳನ್ನು ಬಿಟ್ಟು ತುಂಬಾ ಹರ್ಟ್ ಮಾಡ್ತಾರೆ ಎಂದು ಪಾಲಿಕೆ ಸದಸ್ಯ ಜಿಕೆ ವೆಂಕಟೇಶ್ ಬಗ್ಗೆ ಜೆ.ಪಿ ಪಾರ್ಕ್ ಕಾರ್ಪೋರೇಟರ್ ಮಮತಾ ವಾಸುದೇವ್ ಆರೋಪಿಸಿದ್ರು.
ಯಶವಂತಪುರ ಕಾರ್ಪೋರೇಟರ್ ಜಿಕೆ ವೆಂಕಟೇಶ್ ಹಾಗೂ ಜೆಪಿ ಪಾರ್ಕ್ ಕಾರ್ಪೋರೇಟರ್ ಮಮತಾ ವಾಸುದೇವ್ ನಡುವಿನ ಹಳೇ ದ್ವೇಷ ಮತ್ತೆ ಮರುಕಳಿಸಿತು ಕೌನ್ಸಿಲ್ ಸಭೆಯನ್ನು ಮುಂದೂಡಿದ ಸಮಯದಲ್ಲಿ ಮಮತಾ ವಾಸುದೇವ್ ಜಿಕೆ ವೆಂಕಟೇಶ್ ಗೆ ಅವಾಚ್ಯ ಪದಬಳಕೆ ಮಾಡಿದ್ರು.
(ಬೋಳಿಮಗ,) ಎಳ್ಕೊಂಡು ಬರ್ರಿ ಹೊಡಿಯೋಣ ಅಂತೆಲ್ಲಾ ಅವಾಚ್ಯ ಪದಬಳಕೆ ಮಾಡಿದ್ರು. ಇದಕ್ಕೆ ಕಾರಣ ಕೇಳಿದ್ರೆ ಜಿಕೆ ವೆಂಕಟೇಶ್ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನೋಡ್ತಾರೆ. ಸೀರೆ, ಒಡವೆ, ಲಿಪ್ ಸ್ಟಿಕ್ ಬಗ್ಗೆ ಕಮೆಂಟ್ ಮಾಡ್ತಾರೆ. ಬಾಯಲ್ಲಿ ಸಹೋದರಿ ಅನ್ತಾರೆ ಆದ್ರೆ ಹೆಣ್ಣುಮಕ್ಕಳಿಗೆ ಗೌರವ ಕೊಡುವ ಬಗ್ಗೆ ಗೊತ್ತಿಲ್ಲ. ಕೌನ್ಸಿಲ್ ಗೆ ಹೆಣ್ಣುಮಕ್ಕಳನ್ನ ನೋಡೋಕೆ ಬರ್ತಾರ? , ನನ್ನ ಮಾನಕ್ಕಿಂತ ನನ್ನ ಪಕ್ಷದ ನಾಯಕರ ಮಾನ ಮುಖ್ಯ. ಹೀಗಾಗಿ ಪ್ರಧಾನಿ ಮೋದಿಯವರಿಗೆ ಏಕವಚನದಲ್ಲಿ ಆರೋಪ ಮಾಡಿದ್ದು ಸಹಿಸದೆ ನಾನು ತಾಳ್ಮೆ ಮೀರಿ ಪದಬಳಕೆ ಮಾಡಬೇಕಾಯಿತು ಎಂದ್ರು.
ಕೌನ್ಸಿಲ್ ಸಭೆಯ ಚರ್ಚೆ ವೇಳೆ ಯಲಚೇನಹಳ್ಳಿ ಕಾರ್ಪೋರೇಟರ್ ಬಾಲಕೃಷ್ಣ ವಾರ್ಡ್ ನ ಕಸ ಸಮಸ್ಯೆ ಬಗೆಹರಿಯುತ್ತಿಲ್ಲ. ಮೇಯರ್, ಆಯುಕ್ತರು ಆದೇಶ ಮಾಡಿದ್ರೂ ಕಸ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದಾಗ, ಜಿಕೆ ವೆಂಕಟೇಶ್ ಮಧ್ಯಪ್ರವೇಶಿಸಿ ಮೋದಿಯಲ್ಲಿ ಫಂಡ್ ಕೇಳಿ ಎಂದು ವ್ಯಂಗ್ಯ ಮಾಡಿದ್ರು. ಇದು ಬಿಜೆಪಿ ಕಾರ್ಪೋರೇಟರರ್ಸ್ ರೊಚ್ಚಿಗೇಳಲು ಕಾರಣವಾಯ್ತು. ಜಿಕೆ ವೆಂಕಟೇಶ್ ಕ್ಷಮೆ ಕೇಳುವವರೆಗೂ ಸಭೆ ನಡೆಯಲು ಬಿಡುವುದಿಲ್ಲ ಎಂದು ವಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದರು. ಈ ವೇಳೆ ಮೇಯರ್ ಸಭೆ ಮುಂದೂಡಿದರು. ಇದೇ ಸಮಯದಲ್ಲಿ ವೈಯಕ್ತಿಕ ದ್ವೇಷ ಇದ್ದ ಮಮತಾ ವಾಸುದೇವ್ ಅವರು, ಜಿಕೆ ವೆಂಕಟೇಶ್ ಅವರಿಗೆ ಅವಾಚ್ಯ ಪದಬಳಕೆ ಮಾಡಿದ್ರು.
ಬಳಿಕ ಪ್ರತಿಕ್ರಿಯಿಸಿದ ಮಮತಾ ವಾಸುದೇವ್, ನನ್ನ ವಾರ್ಡ್ ಸಮಸ್ಯೆ ಹೇಳ್ಬಾರ್ದು ಎಂಬ ಕಾರಣಕ್ಕೆ ಜಿಕೆವೆಂಕಟೇಶ್ ವಿಷಯ ಬದಲಿಸಿದ್ರು. ವಾರ್ಡ್ ನಲ್ಲೂ ಸಾಕಷ್ಟು ಕಿರುಕುಳ ಕೊಡ್ತಾರೆ. ಕೌನ್ಸಿಲ್ ಸಭೆಗೆ ಬಂದ್ರೂ ಹೆಣ್ಣುಮಕ್ಕಳಿಗೆ ಕೆಟ್ಟಾದಾಗಿ ಕಣ್ಸನ್ನೆ ಮಾಡ್ತಾರೆ. ಪಕ್ಷದ ನಾಯಕರಿಗೂ ಅವಮಾನ ಮಾಡಿದ್ದಕ್ಕೆ ತಾಳ್ಮೆಯ ಕಟ್ಟೆ ಒಡೆದು ಈ ರೀತಿ ಮಾತಾಡಬೇಕಾಯಿತು ಎಂದ್ರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯ ಜಿಕೆ ವೆಂಕಟೇಶ್, ಮಮತಾ ವಾಸುದೇವ್ ಅವಾಚ್ಯ ಪದ ಬಳಕೆ ವಿರುದ್ಧ ಕಾನೂನು ಹೋರಾಟ ಮಾಡ್ತೀನಿ, ಒಂದು ವರ್ಷ ಪಾಲಿಕೆ ಸದಸ್ಯ ಸ್ಥಾನದಿಂದ ಅಮಾನತಿಗೆ ಆಗ್ರಹಿಸುತ್ತೇನೆ. ಈ ಪದಗಳೆಲ್ಲ ಅವರಿಗೆ ಯಾವ ಯುನಿವರ್ಸಿಟಿ ಕಳಿಸಿದೆಯೋ ಗೊತ್ತಿಲ್ಲ. ನನಗೂ ಮಗಳಿದ್ದಾಳೆ, ನಾನು ಆರೀತಿ ಎಲ್ಲ ಕಮೆಂಟ್ ಮಾಡಿಲ್ಲ. ಈ ಪದ ಬಳಕೆ ಇಡೀ ಎಲ್ಲಾ ಪಾಲಿಕೆ ಸದಸ್ಯರಿಗೆ ಅವಮಾನಿಸಿದಂತೆ , ಅವರ ಗಂಡನಿಗೂ ಇದೇ ಪದ ಬಳಸ್ತಾರಾ, ನನಗಿಬ್ಬರು ಮಕ್ಕಳಿದ್ದಾರೆ. ಮಮತಾ ಅವರ ಸಂಸ್ಕೃತಿಯನ್ನು ಇದು ತೋರಿಸುತ್ತದೆ ಎಂದ್ರು.
ಸೌಮ್ಯಶ್ರೀ
KN_BNG_02_30_mamatha_vivadha_script_sowmya_7202707

Body:..Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.