ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ಉಯ್ಯಾಂಬ್ಬಳ್ಳಿ ಗ್ರಾಮದ ನಿವಾಸಿ ಸುರೇಶ ಎಂಬುವವರ ಪತ್ನಿ ಸುಮಾ ಎಂಬುವರು ಮಾರ್ಗಮಧ್ಯೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಂಗಳವಾರ ಸಂಜೆ ಇವರಿಗೆ ಹೆರಿಗೆ ನೋವು ಶುರುವಾಗಿದೆ. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಹೆಚ್.ಡಿ.ಕೋಟೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿಯೇ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಗು ಹಾಗೂ ತಾಯಿ ಸುರಕ್ಷಿತವಾಗಿದ್ದು. ಇಬ್ಬರನ್ನು ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನರ್ಸ್ ಹಾಗೂ ಚಾಲಕನಿಗೆ ಮಗುವಿನ ತಂದೆ ಸುರೇಶ ಕೃತಜ್ಞತೆ ತಿಳಿಸಿದ್ದಾರೆ.