ದುಬೈ: ಕಳೆದ ತಿಂಗಳಷ್ಟೇ ಭಾರತ ತಂಡವನ್ನು ಭಾರತದ ನೆಲದಲ್ಲಿ ಮಣಿಸಿದ್ದ ಆಸ್ಟ್ರೇಲಿಯಾ ತಂಡ, ಇದೀಗ ಪಾಕಿಸ್ತಾನ ತಂಡವನ್ನು ಏಷ್ಯನ್ ಪಿಚ್ನಲ್ಲಿ 5-0ಯಲ್ಲಿ ಮಣಿಸುವ ಮೂಲಕ ಚಾಂಪಿಯನ್ ತಂಡ ತಾಕತ್ತು ಪ್ರದರ್ಶಿಸಿದೆ. ಭಾರತ, ಇಂಗ್ಲೆಂಡ್ ಸೇರಿದಂತೆ ವಿವಿಧ ತಂಡಗಳಿಗೆ 2019ರ ವಿಶ್ವಕಪ್ನಲ್ಲಿ ಕಠಿಣ ಸ್ಪರ್ಧೆಯೊಡ್ಡಲು ಆಸೀಸ್ ಪಡೆ ಸಿದ್ದವಾಗಿದೆ.
ಭಾರತ ಪ್ರವಾಸಕ್ಕೂ ಮುನ್ನ ಕಳೆದ ಒಂದೂವರೆ ವರ್ಷಗಳಿಲ್ಲಿ ಆಸ್ಟ್ರೇಲಿಯಾ ಆಡಿದ್ದ 18 ಏಕದಿನ ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ ಮೂರು ಪಂದ್ಯಗಳನ್ನು ಮಾತ್ರ. ಆದರೆ ಫಿಂಚ್ ನಾಯಕನಾದ ಮೇಲೆ ಆಸ್ಟ್ರೇಲಿಯಾ ಚಾರ್ಮ್ ಬದಲಾಗಿದೆ. ಭಾರತವನ್ನು 3-2 ರಲ್ಲಿ ಹಾಗೂ ಪಾಕಿಸ್ತಾನವನ್ನು 5-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಮೂಲಕ ತಾವೂ ಕೂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಮೊದಲ ಸಾಲಿನಲ್ಲಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ.
Here are five things we learnt from Australia's 5-0 series win over Pakistan in the UAE ⬇️https://t.co/RaDM1uuiCY pic.twitter.com/n2wNPEPq3I
— ICC (@ICC) April 2, 2019 " class="align-text-top noRightClick twitterSection" data="
">Here are five things we learnt from Australia's 5-0 series win over Pakistan in the UAE ⬇️https://t.co/RaDM1uuiCY pic.twitter.com/n2wNPEPq3I
— ICC (@ICC) April 2, 2019Here are five things we learnt from Australia's 5-0 series win over Pakistan in the UAE ⬇️https://t.co/RaDM1uuiCY pic.twitter.com/n2wNPEPq3I
— ICC (@ICC) April 2, 2019
ಕೆಲವು ತಿಂಗಳ ಹಿಂದೆಯಷ್ಟೇ ನಮ್ಮ ಪ್ರದರ್ಶನ ನೋಡಿ ಸಾಕಷ್ಟು ಹಿರಿಯ ಕ್ರಿಕೆಟಿಗರು ಹಾಗೂ ಮಾಧ್ಯಮಗಳು ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದವು. ಆದರೆ, ವಿಶ್ವಕಪ್ಗೂ ಮುನ್ನ ನಮ ಅತ್ಮವಿಶ್ವಾಸವನ್ನು ಈ ಎರಡು ಸರಣಿ ಜಯ ಇಮ್ಮಡಿಗೊಳಿಸಿದೆ.
ಇನ್ನು ಬಾಲ್ ಟ್ಯಾಂಪರಿಂಗ್ ನಂತರ ಕ್ರಿಕೆಟ್ ವಾಪಾಸ್ ಆಗಿರುವ ವಾರ್ನರ್ ಐಪಿಎಲ್ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ವಾರ್ನರ್,ಸ್ಮಿತ್ ಹಾಗೂ ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್ಕ್, ಕಮಿನ್ಸ್ ಹಾಗೂ ಹೆಜಲ್ವುಡ್ ತಂಡಕ್ಕೆ ವಾಪಸ್ ಆಗಲಿದ್ದಾರೆ. ವಾರ್ನರ್ ಹಾಗೂ ಸ್ಮಿತ್ ಅವರನ್ನು ವಿಶ್ವಕಪ್ ತಂಡಕ್ಕೆ ಪರಿಗಣಿಸುವುದು ಕಷ್ಟ ಎಂದೂ ಫಿಂಚ್ ತಿಳಿಸಿದ್ದಾರೆ.
ಆ್ಯರೋನ್ ಫಿಂಚ್ ಈ ಸರಣಿಯಲ್ಲಿ 2 ಶತಕ ಸಹಿತ 451 ರನ್ಗಳಿಸಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.