ETV Bharat / briefs
ಅರಕಲಗೋಡು ಪಟ್ಟಣ ಪಂಚಾಯತ್ ಚುನಾವಣೆ ಮೇ 29 ಕ್ಕೆ: ಅಭ್ಯರ್ಥಿಗಳಿಂದ ಅಂತಿಮ ಕಸರತ್ತು
ಅರಕಲಗೂಡು ವಾರ್ಡ್ ಮೀಸಲಾತಿ ಪಟ್ಟಿಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿರುವ ಕಾರಣ ಮತ್ತು ಚುನಾವಣೆಗೂ ಮುನ್ನವೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿರುವುದು ವಿಶೇಷ. ಈ ಸ್ಥಾನಗಳು ಸಾಮಾನ್ಯ ಕ್ಷೇತ್ರಕ್ಕೆ ಒಲಿದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣಾ ಕಣ ಕಾವೇರುವ ಸಾಧ್ಯತೆ ಹೆಚ್ಚಿದೆ.
ಅರಕಲಗೂಡು ಪಟ್ಟಣ ಪಂಚಾಯತ್
By
Published : May 26, 2019, 3:24 PM IST
ಹಾಸನ: ಲೋಕಸಭಾ ಚುನಾವಣೆ ಬೆನ್ನಲ್ಲೇ ಹಾಸನ ಜಿಲ್ಲೆಯ ಎರಡು ಪಟ್ಟಣ ಪಂಚಾಯತ್ಗಳಿಗೆ ಮೇ 29 ರಂದು ಚುನಾವಣೆ ನಡೆಯಲಿದೆ. ಮಾಜಿ ಸಚಿವ ಮತ್ತು ಹಾಲಿ ಶಾಸಕರ ಕ್ಷೇತ್ರವಾಗಿರುವ ಅರಕಲಗೂಡು ಪಟ್ಟಣ ಪಂಚಾಯತ್ನಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಹಿರಂಗ ಪ್ರಚಾರಕ್ಕೆ ನಾಳೆ ಅಂತಿಮ ತೆರೆಬೀಳಲಿದ್ದು, ಇದಕ್ಕೂ ಮುನ್ನ ಅಭ್ಯರ್ಥಿಗಳ ರಾಜಕೀಯ ಚಟುವಟಿಕೆ ಜೋರಾಗಿದೆ.
ಪಟ್ಟಣ ಪಂಚಾಯತ್ ಚುನಾವಣೆಗೆ ಮೇ 29ಕ್ಕೆ ನಡೆಯಲಿದ್ದು, 17 ವಾರ್ಡ್‌ಗಳಲ್ಲಿ ಆಯಾ ವಾರ್ಡ್ನ ಜಾತಿ, ಪಕ್ಷ ಮತ್ತು ಹಣದ ಪ್ರಾಬಲ್ಯ ಹೊಂದಿರುವವರು ಮತದಾರರ ಮನೆ ಮನೆಗೆ ತೆರಳಿ ಕೊನೆಯ ಕಸರತ್ತು ಆರಂಭಿಸಿದ್ದಾರೆ.
ಈ ಬಾರಿಯ ವಾರ್ಡ್ ಮೀಸಲಾತಿ ಪಟ್ಟಿಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿರುವ ಕಾರಣ ಮತ್ತು ಚುನಾವಣೆಗೂ ಮುನ್ನವೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿರುವುದು ವಿಶೇಷ. ಈ ಸ್ಥಾನಗಳು ಸಾಮಾನ್ಯ ಕ್ಷೇತ್ರಕ್ಕೆ ಒಲಿದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣಾ ಕಣ ಕಾವೇರುವ ಸಾಧ್ಯತೆ ಹೆಚ್ಚಿದೆ.
ಪಟ್ಟಣ ಪಂಚಾಯತ್ ಚುನಾವಣೆಗೆ 56 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.
ಅರಕಲಗೂಡು ಪಟ್ಟಣ ಪಂಚಾಯತ್ ಚುನಾವಣೆಯು ಮೇ 29ರಂದು ನಡೆಯಲಿದೆ. ಟಿಕೆಟ್ ಆಕಾಂಕ್ಷಿಗಳು ಸ್ಪರ್ಧೆಗೆ ತಮ್ಮ ತಮ್ಮ ಪಕ್ಷದ ನಾಯಕರ ಮುಂದೆ ತಮ್ಮ ಬೆಂಬಲಿಗರೊಂದಿಗೆ ಬಿ ಫಾರಂಗಾಗಿ ಪೈಪೋಟಿ ನಡೆಸಿದ್ದರು. ಬಿ ಫಾರಂ ಸಿಗದಿದ್ದವರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿ ನಾಮಪತ್ರವನ್ನು ಸಲ್ಲಿಸಿದ್ದರು.
*ಅರಕಲಗೂಡು ಪಟ್ಟಣ ಪಂಚಾಯತ್ ಚುನಾವಣೆ-2019 ನಾಮಪತ್ರ ಸಲ್ಲಿಸಿದವರು ಸಂಖ್ಯೆ ಹೀಗಿದೆ...
ಕಾಂಗ್ರೆಸ್ -13, ಬಿಜೆಪಿ - 16, ಜೆಡಿಎಸ್ - 16, ಇತರೇ - 11 ಒಟ್ಟು 56 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Intro:ಈ ಹಿಂದೆ ಅರಕಲಗೂಡು ಪಟ್ಟಣದ ಪಟ್ಟಣ ಪಂಚಾಯಿತಿ ಸೇರಿದಂತೆ ನಗರದ ವಿವಿಧ ದೃಶ್ಯಗಳನ್ನ (CUT A WISE) ಈ ಹಿಂದೆ ಹಾಕಿರುವೆ. ಅದನ್ನೇ ಬಳಸಿಕೊಳ್ಳಿ
ಹಾಸನ: ಲೋಕಸಭಾ ಚುನಾವಣೆ ಬೆನ್ನಲ್ಲೇ ಹಾಸನ ಜಿಲ್ಲೆಯ ಎರಡು ಪಟ್ಟಣ ಪಂಚಾಯಿತಿಗಳಿಗೆ ಮೇ 29 ರಂದು ಚುನಾವಣೆ ನಡೆಯಲಿದ್ದು ಮಾಜಿ ಸಚಿವ ಮತ್ತು ಹಾಲಿ ಶಾಸಕರ ಕ್ಷೇತ್ರವಾಗಿರುವ ಅರಕಲಗೂಡು ಪಂಚಾಯಿತಿಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಹಿರಂಗ ಪ್ರಚಾರಕ್ಕೆ ಚುನಾವಣೆಗೆ ನಾಳೆ ಅಂತಿಮ ತೆರೆಬೀಳಲಿರುವ ಬೆನ್ನಲ್ಲೇ ಅಭ್ಯರ್ಥಿಗಳ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಪಪಂ ಚುನಾವಣೆಗೆ ಮೇ 29ಕ್ಕೆ ನಡೆಯಲಿದ್ದು, 17 ವಾರ್ಡ್‌ಗಳಲ್ಲಿ ಆಯಾ ವಾರ್ಡಿನ ಜಾತಿ, ಪಕ್ಷ ಮತ್ತು ಹಣದ ಪ್ರಾಬಲ್ಯ ಹೊಂದಿರುವವರು ಮತದಾರರ ಮನೆ ಮನೆಗೆ ತೆರಳಿ ಕೊನೆಯ ಕಸರತ್ತು ಆರಂಭಿಸಿದ್ದಾರೆ.
ಈ ಬಾರಿಯ ವಾರ್ಡ್ ಮೀಸಲಾತಿ ಪಟ್ಟಿಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿರುವ ಕಾರಣ ಮತ್ತು ಚುನಾವಣೆಗೂ ಮುನ್ನವೇ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿರುವುದು ವಿಶೇಷ. ಈ ಸ್ಥಾನಗಳು ಸಾಮಾನ್ಯ ಕ್ಷೇತ್ರಕ್ಕೆ ಒಲಿದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣಾ ಕಣ ಕಾವೇರುವ ಸಾಧ್ಯತೆ ಹೆಚ್ಚಿದೆ.
ಪಟ್ಟಣ ಪಂಚಾಯಿತಿ ಚುನಾವಣೆಗೆ 64 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದು, ಯಾರ್ಯಾರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಬನ್ನಿ ನೋಡೋಣ....
ಅರಕಲಗೂಡು ಪಟ್ಟಣ ಪಂಚಾಯಿತಿ ಚುನಾವಣೆಯು ಮೇ 29ರಂದು ನಡೆಯಲಿದ್ದು ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿಗಳು ಸ್ಪರ್ಧೆಗೆ ತಮ್ಮ ಪಕ್ಷದ ನಾಯಕರ ಮುಂದೆ ತಮ್ಮ ಬೆಂಬಲಿಗರೊಂದಿಗೆ ಬಿ ಫಾರಂಗಾಗಿ ಪೈಪೋಟಿ ನಡೆಸಿದರು. ಬಿ ಫಾರಂ ಸಿಕ್ಕದೇ ಇದ್ದವರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿ ನಾಮಪತ್ರವನ್ನು ಸಲ್ಲಿಸಿದರು.
ಪಟ್ಟಣ ಪಂಚಾಯಿತಿ 17 ವಾರ್ಡುಗಳ ಅಭ್ಯರ್ಥಿಗಳ ವಿವರ: 1ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್‌ನಿಂದ ಎನ್.ಎಂ.ಜಯಮ್ಮ, ಬಿಜೆಪಿಯಿಂದ ನಾಗಮ್ಮ, ಜೆಡಿಎಸ್‌ನಿಂದ ಗೀತ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹರದಮ್ಮ ನಾಮಪತ್ರ ಸಲ್ಲಿಸಿದ್ರೆ, 2ನೇ ವಾರ್ಡ್‌ನಿಂತ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಿಂದ ಸುಮಿತ್ರ, ಜೆಡಿಎಸ್‌ನಿಂದ ಸೌಭಾಗ್ಯ ನಾಮಪತ್ರ ಸಲ್ಲಿಸಿದ್ದಾರೆ.
3ನೇ ವಾರ್ಡ್ ಹಿಂದುಳಿದವರ್ಗ(ಎ)ಗೆ ಮೀಸ ಲಾಗಿದ್ದು, ಬಿಜೆಪಿಯಿಂದ ಪುಟ್ಟರಾಜ, ಕಾಂಗ್ರೆಸ್‌ನಿಂದ ಲಕ್ಷ್ಮಣ, ಜೆಡಿಎಸ್‌ನಿಂದ ಹೂವಣ್ಣ ಹಾಗೂ ಪಕ್ಷೇತರರಾಗಿ ಎ.ಆರ್.ನರೇಂದ್ರ ನಾಮಪತ್ರ ಸಲ್ಲಿಸಿದ್ರೆ, 4ನೇ ವಾರ್ಡ್‌ನಿಂದ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಿಂದ ಎಸ್.ಆರ್ ಹೇಮಾ, ಜೆಡಿಎಸ್‌ನಿಂದ ಲಕ್ಷ್ಮಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಹಾಗೇ 5ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ ಬಿ.ರಂಗನಾಥ, ಕಾಂಗ್ರೆಸ್‌ನಿಂದ ಸುಭಾನ್ ಶರೀಫ್, ಜೆಡಿಎಸ್‌ನಿಂದ ನಜುರುಲ್ಲಾ, ಪಕ್ಷೇತರರಾಗಿ ಎ.ಎಸ್.ಸತ್ಯನಾರಾಯಣ, ಕುಶಾಲ ನಾಮಪತ್ರ ಸಲ್ಲಿಸಿದ್ದಾರೆ.
6ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಿಂದ ಎಚ್.ಎಸ್.ರಶ್ಮಿ, ಜೆಡಿಎಸ್‌ನಿಂದ ಡಿ. ಭಾಗ್ಯ, ಕಾಂಗ್ರೆಸ್‌ನಿಂದ ತಬಸುಮ್ ಬಾನು ತಮ್ಮ ಉಮೇದುವಾರಿಕೆ ಸಲ್ಲಿಸಿದ್ರೆ, ಸಾಮಾನ್ಯ ವರ್ಗಕ್ಕೆ ಮೀಸಲಾಗಿರೋ 7 ನೇ ವಾರ್ಡ್‌ಗೆ, ಬಿಜೆಪಿಯಿಂದ ರಮೇಶ್ ವಾಟಾಳ್, ಕಾಂಗ್ರೆಸ್‌ನಿಂದ ಎ.ಪಿ.ರಮೇಶ್, ಜೆಡಿಎಸ್‌ನಿಂದ ಡಿ.ಟಿ. ಗಣೇಶ್, ಪಕ್ಷೇತರರಾಗಿ ಗೋಪಾಲ ನಾಮಪತ್ರ ಸಲ್ಲಿಸಿದ್ದು, 8ನೇ ವಾರ್ಡ್ ಕೂಡಾ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ ಯೋಗೇಶ್, ಕಾಂಗ್ರೆಸ್‌ನಿಂದ ಸಿ. ಪ್ರದೀಪ್ ಕುಮಾರ್, ಜೆಡಿಎಸ್‌ನಿಂದ ಎ.ಎಸ್. ರಾಜು, ಪಕ್ಷೇತರರಾಗಿ ನಿರಂಜನ ನಾಮಪತ್ರ ಸಲ್ಲಿಸಿದ್ದಾರೆ.
9ನೇ ವಾರ್ಡ್ ಪರಿಶಿಷ್ಟಜಾತಿಗೆ ಮೀಸಲಾಗಿದ್ದು, ಬಿಜೆಪಿ ಯಿಂದ ಎಂ.ಜೆ.ಮೋಹನ್ ಕುಮಾರ್, ಜೆಡಿಎಸ್ ನಿಂದ ಕೃಷ್ಣಯ್ಯ ನಾಮಪತ್ರ ಸಲ್ಲಿಸಿದ್ರೆ, 10ನೇ ವಾರ್ಡ ಹಿಂದುಳಿದ ವರ್ಗ (ಬಿ)ಗೆ ಮೀಸಲಾಗಿದ್ದು,ಬಿಜೆಪಿಯಿಂದ ಎಚ್.ಎಲ್. ಲಕ್ಷ್ಮೀ, ಜೆಡಿಎಸ್‌ನಿಂದ ಮಣಿ, ಕಾಂಗ್ರೆಸ್‌ನಿಂದ ಎಚ್.ಆರ್.ಸುನಂದಾ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ
11ನೇ ವಾರ್ಡ್ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ ಆರ್. ಪಲ್ಲವಿ, ಜೆಡಿಎಸ್‌ನಿಂದ ಕುಮಾರ, ಕಾಂಗ್ರೆಸ್‌ನಿಂದ ಸಾಕಮ್ಮ ನಾಮಪತ್ರ ಸಲ್ಲಿಸಿದ್ದಾರೆ.
12ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಿಂದ ಜಯಮ್ಮ, ಕಾಂಗ್ರೆಸ್‌ನಿಂದ ಅಫಿಯಾಬಾನು, ಜೆಡಿಎಸ್‌ನಿಂದ ರಹೀಂಉನ್ನೀಸಾ ನಾಮಪತ್ರ ಸಲ್ಲಿಸಿದ್ರೆ, 13ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಜೆಡಿಎಸ್‌ನಿಂದ ಖಲೀಲ್ ಅಹಮದ್, ಕಾಂಗ್ರೆಸ್‌ನಿಂದ ಅಬ್ದುಲ್ ಬಶೀರ್, ಪಕ್ಷೇತರರಾಗಿ ಜಬೀಉಲ್ಲಾ, ಯಾಸ್ಮಿನಾಬಾನು ನಾಮಪತ್ರ ಸಲ್ಲಿಸಿದ್ದಾರೆ.
14ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸ ಲಾಗಿದ್ದು,ಬಿಜೆಪಿಯಿಂದ ಮಂಗಳಾ, ಕಾಂಗ್ರೆಸ್‌ನಿಂದಶರೂನ ಜಾಯ್‌ಶಿಬಾ, ಜೆಡಿಎಸ್‌ನಿಂದ ಕೆ.ಎಸ್. ಅನುಷಾ, ಪಕ್ಷೇತರರಾಗಿ ಶಿವಮ್ಮ ,ರಾಜಶ್ರೀ ನಾಮಪತ್ರ ಸಲ್ಲಿಸಿದ್ದಾರೆ.
15ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಿಂದ ರಜನಿ, ಕಾಂಗ್ರೆಸ್‌ನಿಂದ ಶಾರದ, ಜೆಡಿಎಸ್‌ನಿಂದ ಎಚ್.ಬಿ. ಭೈರವಿ, ಬಿಎಸ್‌ಪಿಯಿಂದ ಶೋಭಾ ಹಾಗೂ 16ನೇ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಬಿಜೆಪಿಯಿಂದ ಚಾಮುಂಡಿ, ಕಾಂಗ್ರೆಸ್‌ನಿಂದ ಅನಿಕೇತನ, ಜೆಡಿಎಸ್‌ನಿಂದ ಎ.ಸಿ.ಮಂಜುನಾಥ್ ನಾಮಪತ್ರ ಸಲ್ಲಿಸಿದ್ದು, ಕೊನೆಯ
17ನೇ ವಾರ್ಡ್ ಸಾಮಾನ್ಯವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ ನಿಖೀಲ್ ಕುಮಾರ್, ಜೆಡಿಎಸ್‌ನಿಂದ ಚಿಕ್ಕಹೊನ್ನೇಗೌಡ ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟಾರೆ ಮೇ 29ರಂದು ಅರಕಲಗೂಡು ತಾಲ್ಲೂಕು ಪಟ್ಟಣ ಪಂಚಾಯ್ತಿಗೆ ಚುವಾವಣೆ ನಡೆಯುತ್ತಿದ್ದು, ಮಾಜಿ ಸಚಿವ ಮತ್ತು ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ನಡುವಿನ ಪ್ರತಿಷ್ಠಿತ ಕಣವಾಗಿದೆ. ಯಾರಿಗೆ ಅರಕಲಗೂಡು ಪಟ್ಟಣದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯ ಸ್ಥಾನಗಳು ಒಲಿಯಲಿದೆ ಎಂಬುದನ್ನು 31ರ ಕನಕ ಕಾಯಬೇಕಿದೆ.
Body:0
Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.