ETV Bharat / briefs

ಆ ಕೋತಿ ಬಂದಮೇಲೆ ಸಮಸ್ಯೆಗಳು 'ಮಂಗ'ಮಾಯ... ದೇವರೇ ಆಗಿ ಹೋದ ಮಂಗಣ್ಣ

ಚಿಕ್ಕಮಗಳೂರು-ಹಾಸನ ಗಡಿಭಾಗದಲ್ಲಿರುವ ಚನ್ನಾಪುರ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಲು ಆಂಜನೇಯನೆ ಕೋತಿ ರೂಪ ತಾಳಿದ್ದಾನೆ ಎಂಬುದು ಗ್ರಾಮಸ್ಥರ ನಂಬಿಕೆ. ಅದಕ್ಕೆ ಈಗ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಕೃಜ್ಞತಾಭಾವ ಮೆರಯುತ್ತಿದ್ದಾರೆ

author img

By

Published : May 20, 2019, 7:21 AM IST

ಚಿಕ್ಕಮಗಳೂರುಗಡಿಯ ಗ್ರಾಮವಾದ ಚನ್ನಾಪುರದಲ್ಲಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದ ಕೋತಿಯ ನೆನಪಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ

ಚಿಕ್ಕಮಗಳೂರು: ಆ ಮಂಗ ಈ ಹಳ್ಳಿಗೆ ಬಂದ ಮೇಲೆ ಜಲ್ಲಿ ಕಾಣದ ರಸ್ತೆಗೆ ಸಿಮೆಂಟ್ ಬಂದಿತ್ತು. ನೀರಿಗಾಗಿ 2 ಕಿ.ಮೀ. ಹೋಗುತ್ತಿದ್ದ ಜನಗಳಿಗೆ, ಗ್ರಾಮದಲ್ಲೇ ಬೋರ್​ವೆಲ್​ಗಳಲ್ಲಿ ನೀರು ಬಂತು. ಹತ್ತಾರು ವರ್ಷದಿಂದ ಒತ್ತುವರಿಯಾಗಿದ್ದ ಗೋಮಾಳ, ಒಂದೇ ತಿಂಗಳಲ್ಲಿ ಹಳ್ಳಿಗರ ಪಾಲಾಗಿತ್ತು.

ಚಿಕ್ಕಮಗಳೂರು ಗಡಿಯ ಗ್ರಾಮವಾದ ಚನ್ನಾಪುರದಲ್ಲಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದ ಕೋತಿಯ ನೆನಪಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ

ಗ್ರಾಮದಲ್ಲಿ ಮಂಗನ ಆಗಮನದಿಂದ ಸಮಸ್ಯೆಗಳು ಮಾಯವಾಗಿದ್ದವು ಎನ್ನುವುದು ಗ್ರಾಮಸ್ಥರ ನಂಬಿಕೆ. ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ ಅದೇ ಮಂಗಕ್ಕೆ ಗ್ರಾಮವೇ ಮರುಗಿತ್ತು. ಅವರೆಲ್ಲ ಮನನೊಂದು ಕಣ್ಣೀರಿಟ್ಟು, ಮಾಡಿದ ಕೆಲಸ ಕೇಳಿದ್ರೆ ನಿಮಗೂ ಆಶ್ಚರ್ಯವಾಗುತ್ತೆ!

ಚಿಕ್ಕಮಗಳೂರು-ಹಾಸನ ಗಡಿಯಲ್ಲಿರುವ ಗ್ರಾಮ ಚನ್ನಾಪುರ. ಈ ಗ್ರಾಮದ ಮಧ್ಯೆ ಇರುವ ಆಂಜನೇಯ ದೇವಸ್ಥಾನ ಎದುರು ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ ಮಂಗನ ಸಂಸ್ಕಾರ ಮಾಡಲಾಗಿದೆ. ಈಗ ಆಂಜನೇಯನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಇದಕ್ಕೆಲ್ಲ ಗ್ರಾಮಸ್ಥೆರೇ ಜವಾಬ್ದಾರಿ ತೆಗೆದುಕೊಂಡು ಹಣ ಹೊಂದಿಸಿ ದೇವಾಲಯ ನಿರ್ಮಿಸಿರುವುದು ಮತ್ತೊಂದು ವಿಶೇಷ.

ಅದ್ಧೂರಿ ಅಂತ್ಯ ಸಂಸ್ಕಾರ:

ಮೃತ ಮಂಗನ ದೇಹವನ್ನು ಡೊಳ್ಳು-ಓಲಗ, ವಾದ್ಯಗಳೊಂದಿಗೆ ಊರಲ್ಲೆಲ್ಲಾ ಮೆರವಣಿಗೆ ಮಾಡಿ, ಭಟ್ಟರನ್ನು ಕರೆಸಿ ಹಿಂದೂ ಸಂಪ್ರದಾಯದಂತೆ ಗುಂಡಿ ತೆಗೆದು ಮಣ್ಣು ಮಾಡಿದ್ದರು. 11ನೇ ದಿನಕ್ಕೆ ತಿಥಿ ಮಾಡಿ ನೂರಾರು ಜನಕ್ಕೆ ಊಟವನ್ನೂ ಹಾಕಿಸಿದ್ದರು. ಊರಿನ ಮಧ್ಯ ಆಂಜನೇಯ ದೇವಾಲಯದ ಎದುರೇ ಮಣ್ಣು ಮಾಡಲಾಗಿತ್ತು. ಈಗ ಕೋತಿಯ ಚಿತೆ ಮೇಲೆ ಗುಡಿ ಕಟ್ಟಿ ಆಂಜನೇಯನನ್ನು ಪ್ರತಿಷ್ಠಾಪಿಸಲಾಗಿದೆ. ಅನ್ನ ಸಂತರ್ಪಣೆ ಮಾಡಲಾಗುತ್ತಿದೆ. ಒಟ್ಟಾರೆ ಆಂಜನೇಯನೆ ಕೋತಿ ರೂಪದಲ್ಲಿ ಬಂದಿದ್ದಾನೆ ಎಂಬ ಭಾವನೆ ಇಲ್ಲಿನ ಜನಗಳದ್ದು.

Intro:R_Kn_Ckm_03_19_Monkey temple_Rajkumar_Ckm_pkg_7202347Body:

ಚಿಕ್ಕಮಗಳೂರು :-

ಆ ಮಂಗ ಈ ಹಳ್ಳಿಗೆ ಬಂದ ಮೇಲೆ ಗ್ರಾಮದ ಸಮಸ್ಯೆಗಳು ನೀರು ಕುಡಿದಂತೆ ಮಾಯವಾದವು ಎಂಬ ನಂಬಿಕೆ. ಜಲ್ಲಿ ಕಾಣದ ರಸ್ತೆಗೆ ಸಿಮೆಂಟ್ ಬಂತು. ನೀರಿಗಾಗಿ 2 ಕಿ.ಮೀ. ಹೋಗುತ್ತಿದ್ದ ಗ್ರಾಮದ ಬೋರ್‍ ಗಳಲ್ಲಿ ನೀರು ಬಂತು. ಹತ್ತಾರು ವರ್ಷದಿಂದ ಒತ್ತುವರಿ ಯಾಗಿದ್ದ ಗೋಮಾಳ ಒಂದೇ ತಿಂಗಳಲ್ಲಿ ಹಳ್ಳಿಗರ ಪಾಲಾಗಿದೆ. ಗ್ರಾಮಕ್ಕೆ ಬಂದ ಆ ಮಂಗ ಎರಡ್ಮೂರು ವರ್ಷದ ಬಳಿಕ ಖಾಯಿಲೆ ಬಿದ್ದು ಸಾವನ್ನಪ್ಪಿದ್ದ ಕಾರಣ ಗ್ರಾಮಸ್ಥರು ಮನನೊಂದು ಕಣ್ಣೀರಿಟ್ಟು ಮಾಡಿದ ಕೆಲಸ ಕೇಳಿದ್ರೆ ನಿಮ್ಮಗೂ ಆಶ್ಚರ್ಯ ಆಗುತ್ತೆ,ಈ ಕುರಿತ ಒಂದು ವರದಿ ಇಲ್ಲಿದೇ ನೋಡಿ......

ಹೌದು ಇದು ಆಂಜನೇಯನ ದೇವಸ್ಥಾನ. ಚಿಕ್ಕಮಗಳೂರು - ಹಾಸನ ಗಡಿ ಗ್ರಾಮ ಚನ್ನಾಪುರ ದಲ್ಲಿದೆ. ದೇವಾಲಯ ಮಾಮೂಲಿ ಅಂತಾ ತಿಳಿಯ ಬೇಡಿ. ಇಲ್ಲಿ ಆಂಜನೇಯನ ಮೂರ್ತಿ ಇರೋದು ಸತ್ಯ. ಆದರೇ ವಾಯುಪುತ್ರ ನೆಲೆ ನಿಂತಿರೋದೇ ಮಂಗನ ಮೃತ ದೇಹದ ಮೇಲೆ. ಏಕೆಂದರೇ ಹಲವಾರು ವರ್ಷಗಳ ಹಿಂದೆ ಈ ಗ್ರಾಮಕ್ಕೆ ರಾತ್ರೋ ರಾತ್ರಿ ಕೋತಿಯೊಂದು ಬಂದಿತ್ತು. ಊರಿಗೆ ಮಗನಂತಿದ್ದ ಕೋತಿಯನ್ನು ಪ್ರತಿನಿತ್ಯ ಗ್ರಾಮಸ್ಥರೇ ಆಹಾರ ಹಾಕಿ ಸಾಕುತ್ತಿದ್ದರು. ಆ ಕೋತಿ ಹಳ್ಳಿಗೆ ಬಂದ ಮೇಲೆ, ಹಳ್ಳಿ ಸಾಕಷ್ಟು ಅಭಿವೃದ್ಧಿಯೂ ಆಗಿದೆ. ರಸ್ತೆ, ನೀರು ಸೇರಿದಂತೆ ಗ್ರಾಮದಾದ್ಯಂತ ನೆಮ್ಮದಿ, ಶಾಂತಿ ನೆಲೆಸಿದೆ. ಆದರೇ ಕೋತಿಗೆ ಕ್ರಮೇಣ ಆರೋಗ್ಯ ಹದಗೆಟ್ಟು ಖಾಯಿಲೆ ಬಿದ್ದು ಸಾವನ್ನಪ್ಪಿದೆ. ಈ ಕೋತಿಯಿಂದ ನಮ್ಮ ಬಾಳು ಹಸನಾಗಿದೆ ಎಂದು ಕೋತಿ ಸಾವಿಗೆ ಕಣ್ಣೀರಿಟ್ಟ ಊರಿನ ಜನ ತಾವೇ ಹಣ ಹಾಕಿ ಬೆಟ್ಟ ಗುಡ್ಡ ಕಡಿದು ಆ ಮಂಗನನ್ನ ಹೂತಿದ್ದ ಜಾಗದಲ್ಲಿ ಈ ಆಂಜನೇಯನ ದೇವಾಲಯ ನಿರ್ಮಿಸಿ ಭಕ್ತಿ ಮೆರೆದಿದ್ದಾರೆ.

ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ಕೋತಿಗೆ ಗ್ರಾಮಸ್ಥರು ಮನುಷ್ಯರು ಸತ್ತಾಗ ಮಾಡುವಂತೆಯೇ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಅಕ್ಕ ಪಕ್ಕದ ಹಳ್ಳಿಗರಿಗೆಲ್ಲಾ ವಿಷಯ ಮುಟ್ಟಿಸಿ, ಕೋತಿಯ ಮೃತ ದೇಹವನ್ನು ಡೊಳ್ಳು-ಓಲಗ, ವಾದ್ಯಗಳೊಂದಿಗೆ ಊರಲ್ಲೆಲ್ಲಾ ಮೆರವಣಿಗೆ ಮಾಡಿ ಭಟ್ಟರನ್ನು ಕರೆಸಿ ಹಿಂದೂ ಸಂಪ್ರಾದಯದಂತೆ ಗುಂಡಿ ತೆಗೆದು ಮಣ್ಣು ಮಾಡಿದ್ದರು. 11ನೇ ದಿನಕ್ಕೆ ತಿಥಿ ಮಾಡಿ ನೂರಾರು ಜನಕ್ಕೆ ಊಟವನ್ನೂ ಹಾಕಿಸಿದ್ದರು. ಕೋತಿ ಸತ್ತಾಗ ಗ್ರಾಮಸ್ಥರು ಗ್ರಾಮದ ಹೊರಭಾಗದಲ್ಲಿ ಮಣ್ಣು ಮಾಡೋಕೆ ನಿರ್ಧಾರ ಮಾಡಿದ್ದರು. ಆದರೇ ಕೋತಿಯಿಂದ ಹಳ್ಳಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಊರಿನ ಹಿರಿಯರು ಹಾಗೂ ಜ್ಯೋತಿಷಿಗಳ ಮಾತಿನಂತೆ ಊರಿನ ಮಧ್ಯದಲ್ಲಿ ದೇವಾಲಯದ ಎದುರೇ ಮಣ್ಣು ಮಾಡಿದರು. ಈಗ ಕೋತಿಯ ಚಿತೆ ಮೇಲೆ ಗುಡಿ ಕಟ್ಟಿ ಆಂಜನೇಯನನ್ನು ಪ್ರತಿಷ್ಠಾಪಿಸಿ ಅನ್ನ ಸಂತರ್ಪಣೆ ಮಾಡಿ ಕೋತಿಯ ಋಣ ತೀರಿಸಿದ್ದಾರೆ.

ಒಟ್ಟಾರೆಯಾಗಿ ಈ ಗ್ರಾಮದ ಜನಕ್ಕೆ ಆಂಜನೇಯನೆ ಕೋತಿ ರೂಪದಲ್ಲಿ ಬಂದಿದ್ದಾನೆ ಎಂಬ ಭಾವನೆ ಇದೆ. ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದ್ದ ಗ್ರಾಮದಲ್ಲಿ ಐದಾರು ತಿಂಗಳಲ್ಲಿ ಸಾಕಷ್ಟು ಬದಲಾವಣೆಯಾಗಿರೋದರಿಂದ ಆಂಜನೇಯನ ಶಕ್ತಿ ಅನ್ನೋದು ಗ್ರಾಮಸ್ಥರ ನಂಬಿಕೆಯಾಗಿದೆ......

byte:-1 ಓಂಕಾರ್,,,,,,,,,,,, ಗ್ರಾಮಸ್ಥ
byte:-2 ಸಂತೋಷ್, ಗ್ರಾಮಸ್ಥ ;( ಯುವಕ )

Conclusion:ರಾಜಕುಮಾರ್,,,,,,,
ಈ ಟಿವಿ ಭಾರತ್,,,,,,
ಚಿಕ್ಕಮಗಳೂರು............
ETV Bharat Logo

Copyright © 2024 Ushodaya Enterprises Pvt. Ltd., All Rights Reserved.