ETV Bharat / briefs

ನೈಜೀರಿಯಾ ಶಾಲೆಯ ಮೇಲೆ ಉಗ್ರರ ದಾಳಿ: 150 ವಿದ್ಯಾರ್ಥಿಗಳ ಅಪಹರಣ

ನೈಜೀರಿಯಾದ ಶಾಲೆಯ ಮೇಲೆ ದಾಳಿ ನಡೆಸಿದ ಶಸ್ತ್ರಧಾರಿ ಗನ್​ಮ್ಯಾನ್​ಗಳು ಸುಮಾರು 150 ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.

author img

By

Published : May 31, 2021, 5:01 PM IST

ನೈಜೀರಿಯಾ
ನೈಜೀರಿಯಾ

ಹೈದರಾಬಾದ್​: ನೈಜೀರಿಯಾದ ನೈಜೆರ್ ಎಂಬ ಪ್ರದೇಶದ ಇಸ್ಲಾಮಿಕ್ ಸ್ಕೂಲ್ ಮೇಲೆ ಉಗ್ರರ ಗುಂಪು ದಾಳಿ ನಡೆಸಿದ್ದು, 150 ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ ಎಂದು ತಿಳಿದು ಬಂದಿದೆ.

ಶಾಲೆಯ ಮೇಲೆ ದಾಳಿ ನಡೆಸಿದ ಶಸ್ತ್ರಧಾರಿ ಗನ್​ಮ್ಯಾನ್​ಗಳು ಸುಮಾರು 150 ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ನೈಜೆರ್ ಸರ್ಕಾರ ತಿಳಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಶಾಲೆಗಳ ಮೇಲೆ ಸರಣಿ ದಾಳಿ ನಡೆಸಿದ್ದ ಉಗ್ರರು ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ.

ಕಳೆದ ಡಿಸೆಂಬರ್ ತಿಂಗಳಿನಿಂದ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗನ್​ಮ್ಯಾನ್​ಗಳು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಭಾನುವಾರ ನಡೆದಿರುವ ಘಟನೆ ಬಗ್ಗೆ ಮಾಹಿತಿ ನೀಡಿರುವ ನೈಜೆರ್​ ಪೊಲೀಸ್ ಇಲಾಖೆಯ ಅಧಿಕಾರಿಗಳು, ಭಾನುವಾರ ಸಂಜೆ 3.30ರ ಸುಮಾರಿಗೆ ಬೈಕ್​ನಲ್ಲಿ ಬಂದ ಗನ್​ಮ್ಯಾನ್​ಗಳು ಶಾಲೆಯ ಮೇಲೆ ದಾಳಿ ನಡೆಸಿದ್ದು, ಬಳಿಕ ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ. ಶಾಲೆಯ ಶಿಕ್ಷಕರ ಕಣ್ಣೆದುರೇ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

20 ರಿಂದ 25 ಬೈಕ್​ಗಳಲ್ಲಿ ಬಂದ ಶಸ್ತ್ರಧಾರಿಗಳು ಈ ಕೃತ್ಯ ಎಸಗಿದ್ದಾರೆ. ಶಾಲೆಯ ಒಳಗೆ ನುಗ್ಗಿದವರೇ 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ನಡೆದ ಘಟನೆಯನ್ನು ವಿವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.