ಮುಂಬೈ: ಗುಜರಾತ್ ಸಹಕಾರ ಹಾಲು ಮಾರಾಟ ಮಹಾಮಂಡಳ (ಜಿಸಿಎಂಎಂಎಫ್) ತನ್ನ 'ಅಮೂಲ್' ಬ್ರಾಂಡ್ನ ಹಾಲಿನ ದರಗಳನ್ನು 2 ರೂಪಾಯಿಗೆ ಏರಿಸಿದೆ. ಇದರಿಂದ ಗ್ರಾಹಕರ ಜೇಬು ಮತ್ತಷ್ಟು ಸುಡಲಿದೆ.
ಹಾಲು ಉತ್ಪಾದನೆಯ ಪ್ರಮುಖ ಡೈರಿ ಕಂಪನಿಯಾದ ಅಮೂಲ್ ನಾಳೆಯಿಂದಲೇ ತನ್ನ ದರ ಏರಿಕೆ ಮಾಡುತ್ತಿದೆ. ಪ್ರತಿ ಲೀಟರ್ಗೆ ಗ್ರಾಹಕರು ಎರಡು ರೂ. ಹೆಚ್ಚಿಗೆ ನೀಡಬೇಕಾಗಿದೆ. ಹಾಲು ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಮೂಲ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.
ದೆಹಲಿ, ಮಹಾರಾಷ್ಟ್ರ,ಕೋಲ್ಕತಾ, ಗುಜರಾತ್ ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲೂ ಈ ಹಾಲು ಮಾರಾಟವಾಗುತ್ತಿದ್ದು, ಇದೀಗ ಗ್ರಾಹಕರು ಎರಡು ರೂ. ಹೆಚ್ಚುವರಿ ನೀಡಬೇಕಾಗಿದೆ. ಸದ್ಯ ದೇಶದಲ್ಲಿ ಅಮೂಲ್ ಗೋಲ್ಡ್ 27 ರೂ., ಅಮೂಲ್ ಶಕ್ತಿ 25 ರೂ., ಅಮೂಲ್ ತಾಜ್ 21 ರೂ ಹಾಗೂ ಅಮೂಲ್ ಡೈಮಂಡ್ 28 ರೂ. ದರವಿದೆ.