ETV Bharat / briefs

ಕೇಂದ್ರ ಸಂಪುಟ ಸೇರಿದ ಅಮಿತ್ ಶಾ... ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಶುರುವಾಗಿದೆ ಹುಡುಕಾಟ...! - ಗೃಹ ಖಾತೆ

ಗಾಂಧಿನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಗೆದ್ದಿರುವ ಅಮಿತ್ ಶಾ ಸದ್ಯ ಮೋದಿ ಸಂಪುಟದಲ್ಲಿ ಪ್ರಭಾವಿ ಗೃಹ ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಅಮಿತ್ ಶಾ
author img

By

Published : Jun 13, 2019, 1:22 PM IST

ನವದೆಹಲಿ: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿರುವ ಅಮಿತ್ ಶಾ ಉತ್ತರಾಧಿಕಾರಿಗಾಗಿ ಹುಡುಕಾಟ ಪ್ರಗತಿಯಲ್ಲಿದೆ.

ಗಾಂಧಿನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಗೆದ್ದಿರುವ ಅಮಿತ್ ಶಾ ಸದ್ಯ ಮೋದಿ ಸಂಪುಟದಲ್ಲಿ ಪ್ರಭಾವಿ ಗೃಹ ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಅಮಿತ್ ಶಾ ಗೃಹ ಖಾತೆಯ ಜೊತೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಮುಂದಿನ ಆರು ತಿಂಗಳುಗಳ ಕಾಲ ನಿರ್ವಹಿಸಲಿದ್ದು, ಈ ಅವಧಿಯಲ್ಲಿ ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಮಯಪಾಲನೆ ಪ್ರತಿಪಾದಿಸಿದ ಮೋದಿ... ಮನೆಯಿಂದ ಕೆಲಸ ಬಿಲ್​ಕುಲ್ ಸಾಧ್ಯವಿಲ್ಲ ಎಂದ ಪ್ರಧಾನಿ..!

ಇಂದು ಅಮಿತ್ ಶಾ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಸ್ಥರ ಸಭೆ ನಡೆಯುತ್ತಿದ್ದು, ನಾಳೆ ಅಮಿತ್ ಶಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಾದ ಹರಿಯಾಣ, ಜಾರ್ಖಂಡ್ ಹಾಗೂ ಮಹಾರಾಷ್ಟ್ರದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಹೀಗಾಗಿ ಅಮಿತ್ ಶಾರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಕಮ್ಮಿ ಎನ್ನಲಾಗಿದೆ.

Intro:Body:

ಅಮಿತ್ ಶಾ ಉತ್ತಾರಾಧಿಕಾರಿಗಾಗಿ ಶುರುವಾಗಿದೆ ಹುಡುಕಾಟ...!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.