ನವದೆಹಲಿ: ಎಲ್ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಆಯೋಜನೆ ಮಾಡಿದ್ದ ಇಫ್ತಾರ್ ಪಾರ್ಟಿಯ ಕುರಿತಾಗಿ ಬೇಗುಸರಾಯ್ ಕ್ಷೇತ್ರದ ಸಂಸದ ಗಿರಿರಾಜ್ ಸಿಂಗ್ ಮಾಡಿರುವ ಟ್ವೀಟ್ಗೆ ನೂತನ ಗೃಹ ಸಚಿವ ಅಮಿತ್ ಶಾ ಗರಂ ಆಗಿದ್ದಾರೆ.
ನಮ್ಮ ಧಾರ್ಮಿಕ ಆಚರಣೆಗಳನ್ನು ಸೂಕ್ತವಾಗಿ ಮಾಡದೆ ತೋರ್ಪಡಿಕೆಗೆ ಬೇರೆ ಧರ್ಮೀಯರ ಹಬ್ಬವನ್ನು ಆಚರಿಸುವ ಅಗತ್ಯವಿದೆಯೇ ಎನ್ನುವ ಅರ್ಥದಲ್ಲಿ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದರು.
-
कितनी खूबसूरत तस्वीर होती जब इतनी ही चाहत से नवरात्रि पे फलाहार का आयोजन करते और सुंदर सुदंर फ़ोटो आते??...अपने कर्म धर्म मे हम पिछड़ क्यों जाते और दिखावा में आगे रहते है??? pic.twitter.com/dy7s1UgBgy
— Shandilya Giriraj Singh (@girirajsinghbjp) June 4, 2019 " class="align-text-top noRightClick twitterSection" data="
">कितनी खूबसूरत तस्वीर होती जब इतनी ही चाहत से नवरात्रि पे फलाहार का आयोजन करते और सुंदर सुदंर फ़ोटो आते??...अपने कर्म धर्म मे हम पिछड़ क्यों जाते और दिखावा में आगे रहते है??? pic.twitter.com/dy7s1UgBgy
— Shandilya Giriraj Singh (@girirajsinghbjp) June 4, 2019कितनी खूबसूरत तस्वीर होती जब इतनी ही चाहत से नवरात्रि पे फलाहार का आयोजन करते और सुंदर सुदंर फ़ोटो आते??...अपने कर्म धर्म मे हम पिछड़ क्यों जाते और दिखावा में आगे रहते है??? pic.twitter.com/dy7s1UgBgy
— Shandilya Giriraj Singh (@girirajsinghbjp) June 4, 2019
ಪಾಟ್ನಾದಲ್ಲಿ ರಾಮ್ ವಿಲಾಸ್ ಪಾಸ್ವಾನ್ ಆಯೋಜನೆ ಮಾಡಿದ್ದ ಇಫ್ತಾರ್ ಪಾರ್ಟಿಯಲ್ಲಿ ಪ್ರತಿಪಕ್ಷ ನಾಯಕ ಜಿತನ್ ರಾಮ್ ಮಾಂಜಿ, ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗವಹಿಸಿದ್ದರು.
ಸದ್ಯ ಗಿರಿರಾಜ್ ಸಿಂಗ್ ಟ್ವೀಟ್ ಗೃಹ ಸಚಿವ ಅಮಿತ್ ಶಾ ಗಮನಕ್ಕೆ ಬಂದಿದ್ದು ಇಂತಹ ವಿಚಾರದಲ್ಲಿ ಈ ರೀತಿಯ ಟ್ವೀಟ್ಗಳನ್ನು ಮಾಡಬಾರದು ಎಂದು ಬೇಗುಸರಾಯ್ ಸಂಸದರಿಗೆ ಕಟ್ಟಪ್ಪಣೆ ಮಾಡಿದ್ದಾರೆ.