ಲಂಡನ್: ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಅಲೆಕ್ಸ್ ಹೇಲ್ಸ್ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ವಿಶ್ವಕಪ್ ತಂಡದಿಂದ ಹೊರ ಹಾಕಿದೆ.
ಅಲೆಕ್ಸ್ ಹೇಲ್ಸ್ ಕಳೆದ ವಾರವಷ್ಟೇ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ 21 ದಿನಗಳ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿಷೇಧಕ್ಕೆ ಒಳಗಾಗಿದ್ದರು. ಆದರೆ ವಿಶ್ವಕಪ್ಗೂ ಮುನ್ನ ತಂಡ ಸೇರಿಕೊಳ್ಳಬಹುದೆಂದು ಭಾವಿಸಲಾಗಿತ್ತು. ಆದರೆ, ಇಸಿಬಿ ಇಂದು ವಿಶ್ವಕಪ್ ತಂಡದಿಂದಲೂ ಹೇಲ್ಸ್ರನ್ನು ಹೊರ ಹಾಕಿರುವುದಾಗಿ ತಿಳಿಸಿದೆ
-
ICYMI: Alex Hales has been withdrawn from England's 15-man squad for #CWC19.https://t.co/X6x8b4wV7N
— ICC (@ICC) April 29, 2019 " class="align-text-top noRightClick twitterSection" data="
">ICYMI: Alex Hales has been withdrawn from England's 15-man squad for #CWC19.https://t.co/X6x8b4wV7N
— ICC (@ICC) April 29, 2019ICYMI: Alex Hales has been withdrawn from England's 15-man squad for #CWC19.https://t.co/X6x8b4wV7N
— ICC (@ICC) April 29, 2019
ಹೇಲ್ಸ್ರನ್ನು ತಂಡದಿಂದ ಹೊರ ಹಾಕಿರುವ ಕುರಿತು ಪ್ರತಿಕ್ರಿಯಿಸಿರುವ ಇಸಿಬಿ ನಿರ್ದೇಶಕ ಆ್ಯಶ್ಲೆ ಗಿಲ್ಸ್ 'ನಾವು ತಂಡದಲ್ಲಿ ಉತ್ತಮವಾದ ಪರಿಸರ ನಿರ್ಮಿಸಲು ಪ್ರಯತ್ನ ನಡೆಸುತ್ತಿದ್ದು, ಅನಗತ್ಯವಾದ ಗೊಂದಲಕ್ಕೆ ಆಸ್ಪದ ಕೊಡಬಾರದೆಂಬ ಉದ್ದೇಶ ಹಾಗೂ ಇಂತಹ ಘಟನೆಗಳ ಮುಂದೆಂದೂ ಸಂಭವಿಸಬಾರದೆಂದು ಹೇಲ್ಸ್ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ಆದರೆ, ಇದು ಅಲೆಕ್ಸ್ ಹೇಲ್ಸ್ ಕ್ರಿಕೆಟ್ ಜೀವನದ ಅಂತಿಮವಲ್ಲ, ಅವರನ್ನು ದೇಶಿಯ ಕ್ರಿಕೆಟ್ ಕ್ಲಬ್ ಆದ ನಾಟಿಂಗ್ ಹ್ಯಾಮ್ಶೈರ್ ಕ್ಲಬ್ನಲ್ಲಿ ಆಡುವ ಅವಕಾಶ ನೀಡ ಲಾಗಿದೆ. ಇಲ್ಲಿ ಅವರ ವೃತ್ತಿ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಅಗತ್ಯವಾದ ಬೆಂಬಲವನ್ನು ಕ್ಲಬ್ ನೀಡಲಿದೆ ಎಂದು ಗಿಲ್ಸ್ ತಿಳಿಸಿದರು.
ವಿಶ್ವಕಪ್ ತಂಡದಿಂದ ಹೊರಬಿದ್ದಿರುವುದು ಮಾತ್ರವಲ್ಲದೇ ಐರ್ಲೆಂಡ್ ಹಾಗೂ ಪಾಕಿಸ್ತಾನದ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ-20 ಸರಣಿಯಿಂದಲೂ ಕೈಬಿಡಲಾಗಿದೆ.
ಅಲೆಕ್ಸ್ ಹೇಲ್ಸ್ರಿಂದ ತೆರವಾಗಿರವಾಗಿರುವ ಸ್ಥಾನಕ್ಕೆ ಬದಲಿ ಆಟಗಾರನ ಹೆಸರನ್ನು ಶೀಘ್ರವಾಗಿ ತಿಳಿಸುವುದಾಗಿ ಇಸಿಬಿ ತಿಳಿಸಿದೆ.