ಬೆಂಗಳೂರು : ಲೋಕಸಭೆ ಚುನಾವಣೆ ಫಲಿತಾಂಶ ನಂತರ ವಾಣಿಜ್ಯ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಪಡೆದಿರುವ ಒಂದೂವರೆ ಲಕ್ಷ ರೈತರ ಸಾಲ ಮನ್ನಾ ಮಾಡಲು 900 ಕೋಟಿ ರೂಪಾಯಿ ಹಣವನ್ನ ರಾಜ್ಯ ಸರಕಾರ ಬಿಡುಗಡೆ ಮಾಡಲಿದೆ.
ರಾಜ್ಯದಲ್ಲಿ ಸರಕಾರ ಏಪ್ರಿಲ್ ತಿಂಗಳ ವರೆಗೆ ಸಾಲ ಮನ್ನಾ ಕುರಿತು ಹಣ ಬಿಡುಗಡೆ ಮಾಡಿದ ಅಂಕಿ ಅಂಶಗಳ ಮಾಹಿತಿ ನೀಡಿರುವ ಹಿರಿಯ ಐಎಎಸ್ ಅಧಿಕಾರಿ ಮನೀಶ್ ಮುದ್ಗಿಲ್, ಸಹಕಾರ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಪಡೆದ 8.1 ಲಕ್ಷ ರೈತರ 3488ಕೋಟಿ ರೂಪಾಯಿ ಹಣವನ್ನ ಏಪ್ರಿಲ್ ತಿಂಗಳತನಕ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್ಗಳಲ್ಲಿ ಇಲ್ಲಿಯವರೆಗೆ ಹದಿನೈದು ಲಕ್ಷ ಐವತ್ತು ಸಾವಿರ ರೈತರ 7,417 ಕೋಟಿ ರೂಪಾಯಿ ಹಣವನ್ನು ರೈತರ ಸಾಲ ಮನ್ನಾ ಬಾಬ್ತು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಾಣಿಜ್ಯ ಬ್ಯಾಂಕ್‍ಗಳ 7.49 ಲಕ್ಷ ರೈತರ 3,929 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, 1.5 ಲಕ್ಷ ರೈತರ 900 ಕೋಟಿ ರೂ. ಬಿಡುಗಡೆ ಮಾಡಲು ಸಿದ್ದವಾಗಿದ್ದು, ಲೋಕಸಭಾ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಅಂದರೆ ಮೇ 23ರ ನಂತರ ಬಿಡುಗಡೆ ಮಾಡಲು ಸರ್ಕಾರ ಉದ್ದೇಶಿಸಿದೆ.