ಲಂಡನ್: ನ್ಯೂಜಿಲ್ಯಾಂಡ್ ತಂಡದ ವೇಗಿ ಲಾಕಿ ಫರ್ಗ್ಯೂಸನ್ ಮಾರಕ ಬೌನ್ಸರ್ ಬ್ಯಾಟಿಂಗ್ ಮಾಡುತ್ತಿದ್ದ ಆಫ್ಘಾನಿಸ್ತಾನದ ಪ್ರಮುಖ ಆಟಗಾರ ರಶೀದ್ ಖಾನ್ ತಲೆಗೆ ಬಡಿದಿದ್ದು, ಹೀಗಾಗಿ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಬೌಲಿಂಗ್ ಮಾಡಿರಲಿಲ್ಲ.
ಸದ್ಯ ರಶೀದ್ ಖಾನ್ ಆರೋಗ್ಯದ ಬಗ್ಗೆ ಆಫ್ಘಾನಿಸ್ತಾನ ತಂಡದ ನಾಯಕ ಗುಲ್ಬಾದಿನ್ ನೈಬ್ ಮಾಹಿತಿ ನೀಡಿದ್ದಾರೆ. "ಪ್ರಸ್ತುತ ರಶೀದ್ ಖಾನ್ ಆರೋಗ್ಯವಾಗಿದ್ದಾರೆ. ಕೆಲ ದಿನಗಳ ಕಾಲ ಮೈದಾನಕ್ಕಿಳಿಯದಂತೆ ವೈದ್ಯರು ಸೂಚಿಸಿದ್ದಾರೆ" ಎಂದು ಆಫ್ಘನ್ ಕಪ್ತಾನ್ ಹೇಳಿದ್ದಾರೆ.
ಕಿವೀಸ್ ತಂಡಕ್ಕೆ ಸುಲಭ ತುತ್ತಾದ ಆಫ್ಘನ್ನರು... ವಿಲಿಯಮ್ಸನ್ ಪಡೆಗೆ ಹ್ಯಾಟ್ರಿಕ್ ಗೆಲುವು..!
ಶನಿವಾರ ನ್ಯೂಜಿಲ್ಯಾಂಡ್ ವಿರುದ್ಧ ಪಂದ್ಯದ 34ನೇ ಓವರ್ನಲ್ಲಿ ವೇಗಿ ಲಾಕಿ ಫರ್ಗ್ಯೂಸನ್ ಎಸೆತವನ್ನು ಸಮರ್ಪಕವಾಗಿ ಅರಿಯುವಲ್ಲಿ ಸ್ಟ್ರೈಕ್ನಲ್ಲಿದ್ದ ರಶೀದ್ ಖಾನ್ ವಿಫಲವಾಗಿದ್ದು, ಪರಿಣಾಮ ಚೆಂಡು ನೇರವಾಗಿ ತಲೆಗೆ ಬಡಿದಿತ್ತು.
ಆಫ್ಘಾನಿಸ್ತಾನಕ್ಕೆ ಭಾರಿ ಆಘಾತ... ಮೊಹಮ್ಮದ್ ಶಾಹಜಾದ್ ವಿಶ್ವಕಪ್ನಿಂದಲೇ ಔಟ್!
ಶನಿವಾರದ ಪಂದ್ಯದಲ್ಲಿ ಕಿವೀಸ್ ಪಡೆ ಆಫ್ಘಾನಿಸ್ತಾನವನ್ನು ಏಳು ವಿಕೆಟ್ಗಳಿಂದ ಸೋಲಿಸಿದೆ. ರಶೀದ್ ಖಾನ್ ಬೌಲಿಂಗ್ ಬೌಲಿಂಗ್ ಕೊರತೆ ಆಫ್ಘನ್ನರಿಗೆ ಬಹುವಾಗಿ ಕಾಡಿತು.