ETV Bharat / briefs

ಸದಲಗಾ ಪೊಲೀಸ್ ಠಾಣೆ ಮೇಲೆ ಎಸಿಬಿ ದಾಳಿ: ಪಿಎಸ್ಐ, ಇಬ್ಬರು ಕಾನ್​ಸ್ಟೇಬಲ್​ ವಶ - belguam news

ಚಿಕ್ಕೋಡಿ ತಾಲೂಕಿನ ಸದಲಗಾ ಪೊಲೀಸ್​​ ಠಾಣೆಯ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪಿಎಸ್ಐ ಕುಮಾರ ಹಿತ್ತಲಮನಿ ಹಾಗೂ ಕಾನ್​ಸ್ಟೇಬಲ್ ಗಳಾದ ಮಾಯಪ್ಪಾ ಗಡ್ಡೆ ಮತ್ತು ಶ್ರೀಶೈಲ ಮಂಗಿರನ್ನು ವಶಕ್ಕೆ ಪಡೆದಿದ್ದಾರೆ.

ಸದಲಗಾ ಪೊಲೀಸ್ ಠಾಣೆ ಮೇಲೆ ಎಸಿಬಿ ದಾಳಿ:  ಪಿಎಸ್ಐ, ಇಬ್ಬರು ಕಾನ್​ಸ್ಟೇಬಲ್​ ವಶ

author img

By

Published : Jul 9, 2021, 5:43 AM IST

ಚಿಕ್ಕೋಡಿ : ಅನಧಿಕೃತವಾಗಿ ಪಾನ್ ಮಸಾಲಾ ಕಾರ್ಖಾನೆ ನಡೆಸುತ್ತಿದ್ದೀರಿ ಎಂದು ಹೆದರಿಸಿ ಅದರ ಮಾಲೀಕನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಇಬ್ಬರು ಕಾನ್​ಸ್ಟೇಬಲ್​ಗಳು ಭೃಷ್ಟಾಚಾರ ನಿಗೃಹ ದಳ(ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.

ಗುರುವಾರ ಸಂಜೆ ಚಿಕ್ಕೋಡಿ ತಾಲೂಕಿನ ಸದಲಗಾ ಪೊಲೀಸ್​​ ಠಾಣೆಯ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪಿಎಸ್ಐ ಕುಮಾರ ಹಿತ್ತಲಮನಿ ಹಾಗೂ ಕಾನ್​ಸ್ಟೇಬಲ್ ಗಳಾದ ಮಾಯಪ್ಪಾ ಗಡ್ಡೆ ಮತ್ತು ಶ್ರೀಶೈಲ ಮಂಗಿರನ್ನು ವಶಕ್ಕೆ ಪಡೆದಿದ್ದಾರೆ.

ಸರ್ಕಾರದ ಅಗತ್ಯ ಎಲ್ಲ ಪರವಾನಗಿ ಪಡೆದು ಕರ್ನಾಟಕದ ಗಡಿಗ್ರಾಮ ಬೋರಗಾಂವದಲ್ಲಿ ಪಾನ್ ಮಸಾಲಾ ಕಾರ್ಖಾನೆ ನಡೆಸುತ್ತಿದ್ದ ಇಚಲಕರಂಜಿ ಮೂಲದ ರಾಜು ಪಾಶ್ಚಾಪುರೆ ಅವರನ್ನು ಹೆದರಿಸಿದ್ದ ಪಿಎಸ್ಐ ಮತ್ತು ಪೇದೆಗಳು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪಾನ್ ಮಸಾಲಾ ಕಾರ್ಖಾನೆ ಮಾಲಿಕ ಎಸಿಬಿಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆ ದಾಳಿ ನಡೆಸಿದ ಅಧಿಕಾರಿಗಳು. ಸದಲಗಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.