ಗುಜರಾತ್: ಇಲ್ಲಿನ ವ್ಯಕ್ತಿಯೋರ್ವ ಕಳೆದ 6 ತಿಂಗಳಿನಿಂದ ಅನಾರೋಗ್ಯಕ್ಕೆ ಸಿಲುಕಿ ಪರದಾಡುತ್ತಿದ್ದಾನೆ. ಈಗಾಗಲೇ ಈತನಿಗೆ 7 ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದೀಗ ಮತ್ತೆ 4 ಶಸ್ತ್ರಚಿಕಿತ್ಸೆಗಳು ಬಾಕಿ ಉಳಿದಿವೆಯಂತೆ.
ಅಹಮದಾಬಾದ್‌ನ ವಿಮಲ್ ದೋಶಿ ಚಿಕಿತ್ಸೆಗೆ ಒಳಗಾದವ. ಈ ಹಿಂದೆ ಈತನಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಅದರಿಂದ ಗುಣಮುಖರಾದ ಬಳಿಕ ಬ್ಲ್ಯಾಕ್ ಫಂಗಸ್(black fungus) ಸೋಂಕು ಕಾಣಿಸಿಕೊಂಡಿದೆ. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ.
ವಿಮಲ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೊರೊನಾ ಸೋಂಕು ತಗುಲಿದ ಸಂದರ್ಭದಲ್ಲಿ 40 ರಿಂದ 45 ದಿನಗಳವರೆಗೆ ಈತನನ್ನು ಲಿಯೋ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಬಳಿಕ ಗುಣಮುಖನಾದರೂ ಸಹ black fungus ಸೋಂಕು ಕಾಣಿಸಿಕೊಂಡಿದೆ.
ಉಳಿದ ಶಸ್ತ್ರ ಚಿಕಿತ್ಸೆಗೆ ಸುಮಾರು 10 ರಿಂದ 15 ಲಕ್ಷ ರೂ. ಬೇಕಾಗುತ್ತದೆ. ಈಗಾಗಲೇ 41.75 ಲಕ್ಷ ರೂ. ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಮಲ್ ಪತ್ನಿ ಮಾತನಾಡಿದ್ದು, “ಈ ರೋಗವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಕೊರೊನಾ ಕಾಯಿಲೆ ಮತ್ತು ನಂತರದ ಮ್ಯೂಕರ್ ಮೈಕೋಸಿಸ್ ಕುಟುಂಬಕ್ಕೆ ಕಷ್ಟಕರ ಸಮಸ್ಯೆಗಳನ್ನು ತಂದೊಡ್ಡಿದೆ” ಎಂದು ಕಣ್ಣೀರು ಹಾಕಿದ್ದಾರೆ.