ಲಖನೌ: ತೀವ್ರ ಧೂಳಿನ ಬಿರುಗಾಳಿ ಹಾಗೂ ಮಿಂಚಿನ ಆರ್ಭಟಕ್ಕೆ ಉತ್ತರ ಪ್ರದೇಶ ರಾಜ್ಯದಲ್ಲಿ ಕಳೆದೆರಡು ದಿನಗಳಲ್ಲಿ 26 ಮಂದಿ ಸಾವನ್ನಪ್ಪಿದ್ದು, 57 ಜನ ಗಾಯಗೊಂಡಿದ್ದಾರೆ.
ಮೈನ್ಪುರಿ, ಮೊರಾದಬಾದ್, ಬದೌನ್, ಫಿಲಿಬಿಟ್, ಮಥುರಾ, ಕನೌಜ್ ಜಿಲ್ಲೆಗಳು ಈ ಧೂಳು ಬಿರುಗಾಳಿ ಹಾಗೂ ಮಿಂಚಿನ ಹೊಡೆತಕ್ಕೆ 26 ಜನ ಪ್ರಾಣ ಬಿಟ್ಟಿದ್ದಾರೆ.
-
26 people across the state died and 57 injured on 6-7 June due to thunderstorm, rain & lightning. 16 houses have been damaged.
— ANI UP (@ANINewsUP) June 7, 2019 " class="align-text-top noRightClick twitterSection" data="
">26 people across the state died and 57 injured on 6-7 June due to thunderstorm, rain & lightning. 16 houses have been damaged.
— ANI UP (@ANINewsUP) June 7, 201926 people across the state died and 57 injured on 6-7 June due to thunderstorm, rain & lightning. 16 houses have been damaged.
— ANI UP (@ANINewsUP) June 7, 2019
ಬಿರುಗಾಳಿಯ ಪರಿಣಾಮ ಹಲವಾರು ಮರಗಳು ನೆಲಕ್ಕುರುಳಿವೆ. ಘಟನೆಯಲ್ಲಿ 16 ಮನೆಗಳು ಜಖಂಗೊಂಡಿವೆ. ಮೈನ್ಪುರಿ ಜಿಲ್ಲೆಯೊಂದರಲ್ಲೇ 41 ಮಂದಿ ಗಾಯಗೊಂಡಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್, ಜಿಲ್ಲಾಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಾವನ್ನಪ್ಪಿದ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ.